ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದ ಉಮೇಶ್ ಕತ್ತಿ; ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಂದು ಹೊಸ ತಲೆನೋವು

ಫಲಿತಾಂಶದ ಬಳಿಕ ಉಮೇಶ್ ಕತ್ತಿ ಪ್ರತಿದಿನ ಎರಡು ಮೂರು ಸಲ ಬಿಎಸ್​ವೈ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಬಿಎಸ್​ವೈ ಎಲ್ಲಿರ್ತಾರೋ ಅಲ್ಲಿ ಇವರೂ ಹಾಜರ್ ಎಂದು ಹೇಳಲಾಗುತ್ತಿದೆ.

MAshok Kumar | news18-kannada
Updated:December 13, 2019, 11:56 AM IST
ಸಚಿವ ಸ್ಥಾನಕ್ಕಾಗಿ ದುಂಬಾಲು ಬಿದ್ದ ಉಮೇಶ್ ಕತ್ತಿ; ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಂದು ಹೊಸ ತಲೆನೋವು
ಉಮೇಶ್​ ಕತ್ತಿ ಮತ್ತು ಬಿಎಸ್ ಯಡಿಯೂರಪ್ಪ
  • Share this:
ಬೆಂಗಳೂರು (ಡಿಸೆಂಬರ್ 13); ಉಪ ಚುನಾವಣೆ ನಂತರ ಬಿಜೆಪಿ ಪಕ್ಷದಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆ ಕಾವು ದಿನೇ ದಿನೇ ಹೆಚ್ಚುತ್ತಿದೆ. ಯಾರಿಗೆ ಯಾವ ಖಾತೆ ನೀಡಬೇಕು? ರಮೇಶ್ ಜಾರಕಿಹೊಳಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕ? ಎಂಬ ವಿಚಾರ ಈಗಾಗಲೇ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ದುಂಬಾಲು ಬೀಳುತ್ತಿರುವುದು ಬಿಎಸ್​ವೈ ಪಾಲಿಗೆ ನುಂಗಲಾಗದ ತುತ್ತಾಗಿದೆ.

ಬಿಜೆಪಿ ಪಾಲಿಗೆ ಉತ್ತರ ಕರ್ನಾಟಕದ ಪ್ರಬಲ ನಾಯಕರ ಪೈಕಿ ಉಮೇಶ್ ಕತ್ತಿಯೂ ಒಬ್ಬರು. ಬಿಜೆಪಿ ಸರ್ಕಾರ ರಚನೆಯಾದ ದಿನದಿಂದ ಉಮೇಶ್ ಕತ್ತಿ ಸಚಿವ ಸ್ಥಾನಕ್ಕಾಗಿ ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಬಿಎಸ್​ವೈ ಈವರೆಗೆ ಆ ಕುರಿತು ತಲೆ ಕೆಡಿಸಿಕೊಂಡತೆ ಕಾಣುತ್ತಿಲ್ಲ. ಈ ನಡುವೆ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದು ಎಲ್ಲೆಂದರಲ್ಲಿ ಯಡಿಯೂರಪ್ಪನವರ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ.

ಫಲಿತಾಂಶದ ಬಳಿಕ ಉಮೇಶ್ ಕತ್ತಿ ಪ್ರತಿದಿನ ಎರಡು ಮೂರು ಸಲ ಬಿಎಸ್​ವೈ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಬಿಎಸ್​ವೈ ಎಲ್ಲಿರ್ತಾರೋ ಅಲ್ಲಿ ಇವರೂ ಹಾಜರ್ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಅರ್ಹ ಶಾಸಕರಿಗೆ ಸಚಿವ ಸ್ಥಾನ ಹಂಚುವ ತಲೆನೋವೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಉಮೇಶ್ ಕತ್ತಿ ಬಿಎಸ್​ವೈ ಪಾಲಿಗೆ ಮತ್ತೊಂದು ಹೊಸ ತಲೆನೋವಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ರಾಜಕಾರಣವೇ ಬೇರೆ, ಸ್ನೇಹವೇ ಬೇರೆ; ಸಿದ್ದರಾಮಯ್ಯ ಭೇಟಿ ಬಗ್ಗೆ ಬಿಎಸ್​ವೈ ಮನದಾಳದ ಮಾತು
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ