ಪ್ರಧಾನಿ ಮೋದಿ ಜೊತೆ ಇಂದು ಸಿಎಂ ಯಡಿಯೂರಪ್ಪ ಮಾತುಕತೆ; ರಾಜ್ಯ ಮಂತ್ರಿ ಮಂಡಲ ರಚನೆಗೆ ಸಿಗುತ್ತಾ ಗ್ರೀನ್​ ಸಿಗ್ನಲ್?

ಬಿ.ಎಸ್​. ಯಡಿಯೂರಪ್ಪ ಸೂಚಿಸಿರುವ ಹೆಸರುಗಳನ್ನು ಪರಿಶೀಲಿಸಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಮತ್ತು ಪ್ರಧಾನಿ ಮೋದಿ ಗ್ರೀನ್​ ಸಿಗ್ನಲ್ ನೀಡಿದರೆ ಸೋಮವಾರವೇ ಸಂಪುಟ ರಚನೆಯಾಗುವ ಸಾಧ್ಯತೆಯಿದೆ. ಇಂದಿನ ಭೇಟಿ ವೇಳೆ ಅನರ್ಹ ಶಾಸಕರಿಗೆ ಮಂತ್ರಿಗಿರಿ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ.

Sushma Chakre | news18
Updated:August 16, 2019, 9:16 AM IST
ಪ್ರಧಾನಿ ಮೋದಿ ಜೊತೆ ಇಂದು ಸಿಎಂ ಯಡಿಯೂರಪ್ಪ ಮಾತುಕತೆ; ರಾಜ್ಯ ಮಂತ್ರಿ ಮಂಡಲ ರಚನೆಗೆ ಸಿಗುತ್ತಾ ಗ್ರೀನ್​ ಸಿಗ್ನಲ್?
ಬಿಎಸ್​ ಯಡಿಯೂರಪ್ಪ
 • News18
 • Last Updated: August 16, 2019, 9:16 AM IST
 • Share this:
ಬೆಂಗಳೂರು (ಆ. 16): ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ 24 ದಿನಗಳು ಕಳೆದಿವೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿ 20 ದಿನಗಳೇ ಕಳೆದಿದ್ದರೂ ಸಂಪುಟ ರಚನೆಯಾಗಿಲ್ಲ. ಈ ಬಗ್ಗೆ ವಿರೋಧಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ನಿನ್ನೆ ದೆಹಲಿಗೆ ತೆರಳಿರುವ ಯಡಿಯೂರಪ್ಪ ಇಂದು ರಾಜ್ಯ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚಿಸಲಿದ್ದಾರೆ. 

ಇಂದು ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿಯಾಗಲಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿರುವ ಯಡಿಯೂರಪ್ಪನವರ ಶಿಫಾರಸಿಗೆ ಹೈಕಮಾಂಡ್​ನ ಒಪ್ಪಿಗೆ ಸಿಗಲಿದೆಯಾ ಎಂದು ಕಾದು ನೋಡಬೇಕಾಗಿದೆ. ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದರ ಜೊತೆಗೆ ರಾಜ್ಯಕ್ಕೆ ಹೆಚ್ಚುವರಿ ಅನುದಾನ ನೀಡುವಂತೆಯೂ ಮನವಿ ಮಾಡಲಿದ್ದಾರೆ. 2 ದಿನಗಳ ಕಾಲ ಸಿಎಂ ಯಡಿಯೂರಪ್ಪ ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಮಾಜಿ ಶಾಸಕರಿಂದಲೂ ಮಂತ್ರಿಗಿರಿಗೆ ಲಾಬಿ; ಬಿಎಸ್​ವೈ ಕಾಲಿಗೆ ಬಿದ್ದ ಚಿಂಚನಸೂರ್ ಬೆಂಬಲಿಗರು

ಬಿ.ಎಸ್​. ಯಡಿಯೂರಪ್ಪ ಸೂಚಿಸಿರುವ ಹೆಸರುಗಳನ್ನು ಪರಿಶೀಲಿಸಲಿರುವ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಮತ್ತು ಪ್ರಧಾನಿ ಮೋದಿ ಗ್ರೀನ್​ ಸಿಗ್ನಲ್ ನೀಡಿದರೆ ಸೋಮವಾರವೇ ಸಂಪುಟ ರಚನೆಯಾಗುವ ಸಾಧ್ಯತೆಯಿದೆ. ಇಂದಿನ ಭೇಟಿ ವೇಳೆ ಅನರ್ಹ ಶಾಸಕರಿಗೆ ಮಂತ್ರಿಗಿರಿ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ಮೊದಲ ಹಂತದಲ್ಲಿ 15ರಿಂದ 18 ಮಂದಿ ಸಚಿವರಾಗಲಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನಕ್ಕೆ ಈಗಾಗಲೇ ಬಿಜೆಪಿಯಲ್ಲಿ ಭಾರೀ ಲಾಬಿ ನಡೆಯುತ್ತಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಬಾಬುರಾವ್ ಚಿಂಚನಸೂರ ಅವರ ಬೆಂಬಲಿಗರು, ತಮ್ಮ ನಾಯಕನ ಪರವಾಗಿ ವಕಾಲತ್ತು ವಹಿಸಿ, ಅವರಿಗೆ ಮಂತ್ರಿಗಿರಿ ನೀಡುವಂತೆ ಮನವಿ ಮಾಡಿದ್ದರು.

ಫೋನ್ ಕದ್ದಾಲಿಕೆ ಸದ್ದು; ಸರ್ಕಾರ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲಿ; ಶಾಸಕ ಯತ್ನಾಳ್ ಆಗ್ರಹ!

ಯಾರಿಗೆಲ್ಲ ಸಿಗಲಿದೆ ಸಚಿವಸ್ಥಾನ?
Loading...

ಮೊದಲ ಹಂತದಲ್ಲಿ ಶಾಸಕರಾದ ಬಿ. ಶ್ರೀರಾಮುಲು, ಮಾಧುಸ್ವಾಮಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ, ಅಶ್ವತ್ಥನಾರಾಯಣ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಜಿಲ್ಲಾವಾರು, ಜಾತಿವಾರು ಲೆಕ್ಕಾಚಾರದಲ್ಲಿ ಈ ಬಾರಿ ಸಚಿವ ಸ್ಥಾನ ನೀಡಲು ಬಿಜೆಪಿ ಲೆಕ್ಕಾಚಾರ ಹಾಕಿದೆ ಎನ್ನಲಾಗಿದೆ. ಹಾಗಿದ್ದರೆ ಬಿಜೆಪಿಯ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ? ಎಂಬುದಕ್ಕೆ ಇಲ್ಲಿದೆ ಮಾಹಿತಿ.

 • ಬಸವರಾಜ್ ಬೊಮ್ಮಾಯಿ- ಲಿಂಗಾಯತ-ಹುಬ್ಬಳ್ಳಿ

 • ಬಸವರಾಜ್ ಪಾಟೀಲ್ ಯತ್ನಾಳ್- ಲಿಂಗಾಯತ- ವಿಜಯಪುರ

 • ಮಾಧುಸ್ವಾಮಿ - ಲಿಂಗಾಯತ - ತುಮಕೂರು

 • ಉಮೇಶ್ ಕತ್ತಿ - ಲಿಂಗಾಯತ - ಬೆಳಗಾವಿ

 • ರೇಣುಕಾಚಾರ್ಯ - ಲಿಂಗಾಯತ - ದಾವಣಗೆರೆ

 • ದತ್ತಾತ್ರೇಯ ಪಾಟೀಲ್ ರೇವೂರ-ಲಿಂಗಾಯತ-ಬೀದರ್

 • ಎಸ್.ಎ. ರಾಮದಾಸ್ - ಬ್ರಾಹ್ಮಣ - ಮೈಸೂರು

 • ಆರ್. ಅಶೋಕ್ - ಒಕ್ಕಲಿಗ - ಬೆಂಗಳೂರು

 • ಡಾ. ಅಶ್ವತ್ಥ ನಾರಾಯಣ - ಒಕ್ಕಲಿಗ - ಬೆಂಗಳೂರು

 • ಕೆ.ಜಿ. ಬೋಪಯ್ಯ - ಒಕ್ಕಲಿಗ - ಮಡಿಕೇರಿ

 • ಕೆ.ಎಸ್. ಈಶ್ವರಪ್ಪ - ಕುರುಬ - ಶಿವಮೊಗ್ಗ

 • ಕೋಟಾ ಶ್ರೀನಿವಾಸ್ ಪೂಜಾರಿ - ಬಿಲ್ಲವ - ಉಡುಪಿ

 • ಗೋವಿಂದ ಕಾರಜೋಳ - ದಲಿತ - ಬಾಗಲಕೋಟೆ

 • ಅಂಗಾರ - ದಲಿತ - ದಕ್ಷಿಣ ಕನ್ನಡ

 • ಶ್ರೀರಾಮುಲು- ವಾಲ್ಮೀಕಿ - ಚಿತ್ರದುರ್ಗ/ಬಳ್ಳಾರಿ

 • ಶಿವನಗೌಡ ನಾಯಕ್ - ವಾಲ್ಮೀಕಿ - ರಾಯಚೂರು

 • ಪೂರ್ಣಿಮಾ - ಯಾದವ - ಚಿತ್ರದುರ್ಗ

 • ನಾಗೇಶ್- ಪಕ್ಷೇತರ/ ದಲಿತ ಬಲಗೈ -ಕೋಲಾರ


ಇಂದು ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದ ನಂತರ ಈ ಪಟ್ಟಿಗೆ ಗ್ರೀನ್​ ಸಿಗ್ನಲ್ ಸಿಗಲಿದೆಯಾ? ಇಲ್ಲವಾ? ಎಂಬುದು ಗೊತ್ತಾಗಲಿದೆ. ಸಂಭಾವ್ಯ ಸಚಿವರ ಪಟ್ಟಿಗೆ ಅನುಮೋದನೆ ಸಿಕ್ಕರೆ ಸೋಮವಾರವೇ ಸಚಿಪ ಸಂಪುಟ ವಿಸ್ತರಣೆಯಾಗಲಿದೆ.

(ವರದಿ: ಧರಣೀಶ್​ ಬೂಕನಕೆರೆ)

 

First published:August 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...