ಅಮಿತ್ ಶಾ-ಬಿಎಸ್​ವೈ ಭೇಟಿ ಮುಕ್ತಾಯ; 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ

ನೆನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿ ಕೇವಲ ಐದು ನಿಮಿಷಕ್ಕಷ್ಟೇ ಸೀಮಿತವಾದ್ದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಆಗಿರಲಿಲ್ಲ. ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ ಭೇಟಿಯಾಗುವಂತೆ ಅಮಿತ್ ಶಾ ತಿಳಿಸಿದ್ದರು.

HR Ramesh | news18-kannada
Updated:January 31, 2020, 5:37 PM IST
ಅಮಿತ್ ಶಾ-ಬಿಎಸ್​ವೈ ಭೇಟಿ ಮುಕ್ತಾಯ; 11 ಶಾಸಕರ ಪೈಕಿ 10 ಮಂದಿಗೆ ಸಚಿವ ಸ್ಥಾನ
ಸಿಎಂ ಬಿಎಸ್​ವೈ ಮತ್ತು ಅಮಿತ್ ಶಾ.
  • Share this:
ನವದೆಹಲಿ: ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಭೇಟಿ ಮುಕ್ತಾಯವಾಗಿದೆ. ಸುಮಾರು 25 ನಿಮಿಷಗಳ ಕಾಲ ಚರ್ಚೆ ನಡೆಸಿದರು. ಮೂಲಗಳ ಪ್ರಕಾರ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ನೀಡಲು ಅಮಿತ್​ ಶಾ ಸೂಚಿಸಿದ್ದಾರೆ. ಮಹೇಶ್​ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್​ ಇಬ್ಬರಲ್ಲಿ ಒಬ್ಬರು ಸಚಿವ ಸ್ಥಾನ ವಂಚಿತರಾಗಲಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್​ವೈ, ನಮ್ಮ ಎಲ್ಲ ಸಲಹೆಗಳಿಗೆ ಅವಿತ್ ಶಾ ಒಪ್ಪಿಗೆ ನೀಡಿದ್ದಾರೆ. ನೀವು ಯಾವಾಗ ಬೇಕಿದ್ದರೂ ಸಂಪುಟ ವಿಸ್ತರಣೆ ಮಾಡಿ ಎಂದು ಹೇಳಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಕೆಲವರೊಂದಿಗೆ ಚರ್ಚಿಸಿ, ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆ ಮಾಡಲಾಗುವುದು. ನಾನು ಅಂದುಕೊಂಡಂತೆ ಎಲ್ಲವೂ ಆಗಿದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಸಿಎಂ ಬಿಎಸ್​ವೈ ನಗುಮುಖದಿಂದಲೇ ಮಾತನಾಡಿದ್ದು, ವಿಶೇಷವಾಗಿತ್ತು.

ಸಚಿವ ಸಂಪುಟ ವಿಸ್ತರಣೆಗಾಗಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಗುರುವಾರ ದೆಹಲಿಗೆ ಆಗಮಿಸಿದ್ದರು. ನೆನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆದರೆ, ಈ ಭೇಟಿ ಕೇವಲ ಐದು ನಿಮಿಷಕ್ಕಷ್ಟೇ ಸೀಮಿತವಾದ್ದರಿಂದ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಆಗಿರಲಿಲ್ಲ. ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ ಭೇಟಿಯಾಗುವಂತೆ ಅಮಿತ್ ಶಾ ತಿಳಿಸಿದ್ದರು.
ಆದರೆ, ಇಂದು ಬೆಳಗ್ಗೆಯಿಂದ ಅಮಿತ್ ಶಾ ಭೇಟಿಗಾಗಿ ಬಿಎಸ್​ವೈ ಕಾದು ಕುಳಿತಿದ್ದರು. ಸಂಜೆ 4 ಗಂಟೆಗೆ ಅಮಿತ್ ಶಾ ಅವರ ಭೇಟಿಗೆ ಅವಕಾಶ ಸಿಕ್ಕಿತು. ಬಳಿಕ ಬಿಎಸ್​ವೈ ಅವರು ಸಂಸತ್​ ಭವನದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇದನ್ನು ಓದಿ: ಬಿಜೆಪಿ ಸೇರಿದ ಶಾಸಕರಿಗೆ ಶುಕ್ರದೆಸೆಯೋ, ಶನಿ ಕಾಟವೋ?; ಬಿಎಸ್​ವೈಗೆ ಮಾತ್ರ ಕಾಯುವುದೇ ಕಾಯಕ
First published: January 31, 2020, 5:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading