Basavaraj Bommai: ಸಿಎಂ ಬೊಮ್ಮಾಯಿಗೆ ಕೊರೊನಾ; ದೆಹಲಿ ಪ್ರವಾಸ ರದ್ದು

ಕೊವಿಡ್ ಖಚಿತಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ಪ್ರಯಾಣವನ್ನು ರದ್ದುಪಡಿಸಿದ್ದಾರೆ.

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

 • Share this:

  ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ  ಕೊರೊನಾ ದೃಢಪಟ್ಟಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೊರೊನಾ ಪಾಸಿಟಿವ್ (CM Basavarj Bommai Tested Covid 19 Positive) ಆಗಿರುವುದನ್ನು ಖಚಿತಪಡಿಸಿದ್ದಾರೆ. ಕೊವಿಡ್ ಖಚಿತಪಟ್ಟ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ದೆಹಲಿ ಪ್ರಯಾಣವನ್ನು ರದ್ದುಪಡಿಸಿದ್ದಾರೆ. ತಮಗೆ ಕೊವಿಡ್ 19 ಖಚಿತಪಟ್ಟಿದೆ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. "ನನಗೆ ಇಂದು ಕೋವಿಡ್-19 ಸೋಂಕು ದೃಢಪಟ್ಟಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

  ಸಿಎಂ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 6, ಶನಿವಾರ) ಆಜಾದಿ ಕಾ ಅಮೃತ್‌ ಮಹೋತ್ಸವದ ರಾಷ್ಟ್ರೀಯ ಸಮಿತಿಯ 3ನೇ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ದೆಹಲಿಯಲ್ಲಿ ನಡೆಯಬೇಕಿದ್ದ ಈ ಸಭೆಯಲ್ಲಿ ಸಿಎಂ ಬೊಮ್ಮಾಯಿ ಕೊವಿಡ್ 19 ಖಚಿತಪಟ್ಟ ಕಾರಣ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.

  ನಿನ್ನೆಯಷ್ಟೇ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಿಎಂ
  ಕೈಮಗ್ಗ ಮತ್ತು ಜವಳಿ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 5 ರಂದು ಉದ್ಘಾಟಿಸಿದ್ದರು.

  ಇದನ್ನೂ ಓದಿ: National Handloom Day: ಕೈಮಗ್ಗ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ ಉದ್ಘಾಟನೆ

  ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, “8ನೇ ಅಂತರಾಷ್ಟ್ರೀಯ ಕೈಮಗ್ಗಕ್ಕೆ ಶುಭಾಶಯ ಕೊರುತ್ತಾ ಕೈಮಗ್ಗ ಅಂದ್ರೆ ಸ್ವಾವಲಂಬನೆ ಸಂಕೇತ ಇದು ಸ್ವತಂತ್ರ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ ಹಾಗೂ ಕೈಮಗ್ಗದ ಚರಕದ ಬಗ್ಗೆ ಮಹತ್ವವನ್ನ ತಿಳಿಸಿದ ಮಹಾತ್ಮ ಗಾಂಧಿಯವರು ನಮ್ಮ ಬಟ್ಟೆಯನ್ನ ನಾವೇ ತಯಾರು ಮಾಡಬೇಕೆಂದು ಕರೆ ಕೊಟ್ಟವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಆತ್ಮ ನಿರ್ಭರ್ ಭಾರತ್ ಎಂದು ಕರೆ ಕೊಟ್ಟಿತ್ತು ಎಂದು ವಿವರಿಸಿದ್ದರು.

  ಅನೇಕ ಯೋಜನೆಗಳನ್ನು ಕೈಮಗ್ಗಕ್ಕೆ ಮೀಸಲು
  ಇದರಲ್ಲಿ ಕೈಮಗ್ಗ ಒಂದು ಕೂಡ, ಇದು ನೇಕಾರರು ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಇಂದು ಮೇಳವನ್ನ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನ ಕೂಡ ಕೊಡ್ತಾ ಇದ್ದೇವೆ.  ಅನೇಕ ಯೋಜನೆಗಳನ್ನ ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ ಈ ಕ್ಷೇತ್ರ ಅತಿ ಹೆಚ್ಚು ಉದ್ಯೋಗ ಕೊಡುತ್ತದೆ ” ಎಂದು ಕರೆ ಕೊಟ್ಟಿದ್ದರು.

  ಉತ್ತರ ಕನ್ನಡಕ್ಕೂ ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ
  ಉತ್ತರ ಕನ್ನಡ  ಜಿಲ್ಲೆಯ ಭಟ್ಕಳ ಮಳೆ‌ಹಾನಿ  ಪ್ರದೇಶಕ್ಕೆ ಇವತ್ತು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು. ನಾಡದೊರೆ ಜೊತೆಯಾಗಿ ಕಂದಾಯ ಸಚಿವ ಆರ್.ಅಶೋಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಉಸ್ತುವಾರಿ ಸಚಿವ ಕೋಟಾ ಶ್ರಿನಿವಾಸ ಪೂಜಾರಿ ಸಾಥ್ ನೀಡಿದ್ರು. ಭಟ್ಕಳದ ಮುಟ್ಟಳ್ಳಿಯಲ್ಲಿ ಉಂಟಾದ ಗುಡ್ಡ ಕುಸಿತದಿಂದ ಜೀವ ಕಳೆದುಕೊಂಡ ಕುಟುಂಬದವರಿಗೆ ಸಾಂತ್ವನ‌ ಹೇಳಿ ಪರಿಹಾರ ಚೆಕ್ (Compensation Check) ವಿತರಿಸಿದರು.

  ಇದನ್ನೂ ಓದಿ: Amit Shah: ಪ್ರವೀಣ್ ನೆಟ್ಟಾರು ಹತ್ಯೆ, ಕಾರ್ಯಕರ್ತರ ರಾಜೀನಾಮೆ ಶಾಕ್! ಬಸವರಾಜ ಬೊಮ್ಮಾಯಿ ಮೇಲೆ ಅಮಿತ್ ಶಾ ಅಸಮಾಧಾನ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್​ ಭೇಟಿ
  ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಿಂದೆಂದು ಕಂಡು ಕೇಳರಿಯದ ಪ್ರವಾಹ ಎದುರಾಗಿದೆ. ಪ್ರವಾಹದಿಂದ ಹತ್ತಾರು ಗ್ರಾಮಗಳು ಜಲಾವೃತವಾಗಿದ್ರೆ ಇನ್ನು ಕೆಲವು ಕಡೆ ಆಸ್ತಿಪಾಸ್ತಿ ಹಾನಿ‌ ಆಗಿತ್ತು. ಏಕಾಏಕಿ ಸುರಿದ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಅಕ್ಷರಶ ತತ್ತರಿಸಿ ಹೋಗಿತ್ತು. ಇದರ ಜತೆಗೆ ಭಟ್ಕಳ ತಾಲೂಕಿನ ಮುಟ್ಟಳ್ಳಿ ಗ್ರಾಮದಲ್ಲಿ ಮನೆ‌ ಮೇಲೆ ಗುಡ್ಡ‌ ಕುಸಿತ ಉಂಟಾಗಿ ಮನೆಯಲ್ಲಿ ವಾಸವಿದ್ದ ನಾಲ್ವರು ಧಾರುಣವಾಗಿ ಸಾವನ್ನಪ್ಪಿದ್ದರು.
  Published by:guruganesh bhat
  First published: