Karnataka CET 2022: ಮಾಂಗಲ್ಯ ಸರ, ಮೂಗುತಿ, ಕಿವಿಯೋಲೆ, ಸರ, ಬಳೆ ನಿಷೇಧ! ಕಟ್ಟುನಿಟ್ಟಲ್ಲಿ ನಡೆಯಲಿದೆ ಸಿಇಟಿ

ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲೇ ಹಿಜಾಬ್ ತೆಗೆದಿಡಬೇಕು. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆಯೂ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು : PSI ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ಪರೀಕ್ಷೆ ಅಕ್ರಮದ ಬಳಿಕ ಎಲ್ಲ ಇಲಾಖೆಗಳು ಅಲರ್ಟ್ ಆಗಿವೆ. ಪರೀಕ್ಷೆ ಆಯೋಜನೆಗೂ ಮುನ್ನ ಹಲವು ಕಟ್ಟುಪಾಡುಗಳನ್ನ ಅಳವಡಿಸಿಕೊಂಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಜಾಮರ್ (Mobile Jammer) ಹಾಗೂ ಮೆಟಲ್ ಡಿಟೆಕ್ಟರ್​ಗಳ ಅಳವಡಿಕೆಗೂ (Metal Detectors) ಮುಂದಾಗಿದೆ. ಇತ್ತೀಚಿಗೆ ಕೇಳಿ ಬಂದ PSI ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳ ಅಕ್ರಮ (PSI Exam Scam) ಪರೀಕ್ಷಾರ್ಥಿಗಳನ್ನು ಆತಂಕಕ್ಕೆ ದೂಡಿದೆ. ಯಾವ ಪರೀಕ್ಷೆ ಬರೆದರೂ ಏನು ಪ್ರಯೋಜನ? ಎಲ್ಲಾ ಮೊದಲೇ ಡೀಲ್ ಆಗಿರುತ್ತೆ ಎಂಬ ಮನಸ್ಥಿತಿಯೂ ನಿರ್ಮಾಣವಾಗುತ್ತಿದೆ.  ಹೀಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಹೆಜ್ಜೆ ಮುಂದೆ ಹೋಗಲು ಯತ್ನಿಸುತ್ತಿದೆ.

ಸಿಇಟಿ ಪರೀಕ್ಷಾ ಕೇಂದ್ರಗಳ ಬಳಿ (CET Exam Centre) ಮೊಬೈಲ್ ಜಾಮರ್ ಹಾಗೂ ಮೆಟಲ್ ಡಿಡೆಕ್ಟರ್ ಗಳ ಅಳವಡಿಕೆ ಪ್ಲ್ಯಾನ್ ಮಾಡುತ್ತಿದೆ. ಸಿಇಟಿ ಪರೀಕ್ಷೆಯಿಂದಲೂ ಹಿಜಾಬ್​ಗೆ ಕಿಕ್ ಔಟ್ ಆಗಿದೆ. ಸಿಇಟಿ ಪರೀಕ್ಷೆ ಬರೆಯುವವರೂ ಹಿಜಾಬ್ ಧರಿಸುವಂತಿಲ್ಲ. ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬರುವವರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಸದ್ಯದಲ್ಲೇ ಸಮವಸ್ತ್ರ ಪಾಲನೆ ನಿಯಮ ಪ್ರಕಟ
ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲೇ ಹಿಜಾಬ್ ತೆಗೆದಿಡಬೇಕು. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆಯೂ ನಡೆಯಲಿದೆ. ಈ ಸಂಬಂಧ ಸರ್ಕಾರ ಹಾಗೂ ಹೈಕೋರ್ಟ್ ಆದೇಶ ಪಾಲನೆಗೆ ಕೆಇಎ ಮುಂದಾಗಿದೆ. ಯಾವುದೇ ಧರ್ಮ ಸೂಚಕ ವಸ್ತ್ರ ಧರಿಸಿ ಸಿಇಟಿ ಪರೀಕ್ಷೆಗೆ ಬರುವಂತಿಲ್ಲ. ಸದ್ಯದಲ್ಲೇ ಸಮವಸ್ತ್ರ ಪಾಲನೆ ನಿಯಮವನ್ನು ಕೆಇಎ ಪ್ರಕಟಿಸಲಿದೆ.


ಕಟ್ಟುನಿಟ್ಟಾಗಿ ನಡೆಯಲಿದೆ ಪರೀಕ್ಷೆ
ಸದ್ಯ ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಡೆಕ್ಟರ್​ ಅಳವಡಿಸಬೇಕೆಂದು ಕೆಇಎ ಬೋರ್ಡ್ ಚಿಂತನೆ ನಡೆಸಿದೆ. ಎಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್​ಗಳಿಗೆ ಪ್ರವೇಶ  ಕಲ್ಪಿಸುವ CET ಪರೀಕ್ಷೆಯನ್ನ ಈ ಬಾರಿ ಕಟ್ಟುನಿಟ್ಟಾಗಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: Electronics City Roads: ಗುಂಡಿ ಇಲ್ಲದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ರಸ್ತೆ, ಇದು ಕನಸಲ್ಲ ನಿಜ!

ನೀಟ್ ಮಾದರಿ ಅನುಸರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಾರಿ ಸಿಇಟಿ ಪರೀಕ್ಷೆಗೆ ಮಾಂಗಲ್ಯ ಸರ, ಮೂಗುತಿ, ಕಿವಿಯೋಲೆ, ಸರ, ಬಳೆ ಧರಿಸಿ ಬರುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ಆಭರಣಗಳನ್ನೂ ಪರೀಕ್ಷೆ ಬರೆಯುವಾಗ ಧರಿಸುವಂತಿಲ್ಲ. ಕೈಗಡಿಯಾರ ಮತ್ತು ಕ್ಯಾಲ್ಕುಲೇಟರ್​ಗಳಿಗೂ ನಿಷೇಧ ಹೇರಲಾಗಿದೆ.

ಏನೆಲ್ಲ  ನಿಯಮ ರೂಪಿಸಲು ಚಿಂತನೆ?
ಇನ್ನು ಈ ಬಾರಿ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 1.4 ಲಕ್ಷ ಪುರುಷ ವಿದ್ಯಾರ್ಥಿಗಳಿದ್ರೆ, 1.7 ಲಕ್ಷ ಮಹಿಳಾ ಅಭ್ಯರ್ಥಿಗಳಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಹದ್ದಿನ ಕಣ್ಣು ಇರಿಸಲು ಅಧಿಕಾರಿಗಳು ಮುಂದಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲು 200 ಮೀಟರ್ ವ್ಯಾಪ್ತಿಯಲ್ಲಿ 144ನೇ ವಿಧಿ ಜಾರಿಗೊಳಿಸಲಾಗುವುದು. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವುದು ಕಡ್ಡಾಯ ಎಂದು ಹೇಳಲಾಗಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭೆಗೆ ಜಗ್ಗೇಶ್! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಬಿಜೆಪಿ ಟಿಕೆಟ್

ರಾಜ್ಯದಲ್ಲಿ ಜೂನ್ 16, 17 ಮತ್ತು 18ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆಗೆ ಯಾವುದೇ ಸಮವಸ್ತ್ರ ನಿಗದಿ ಮಾಡಿಲ್ಲ. ಆದರೆ ಸರ್ಕಾರದ ವಸ್ತ್ರ ನಿಯಮವನ್ನು ನಾವು ಪಾಲಿಸುತ್ತೇವೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳ್ತಿದೆ. ಅದೇನೆ ಇರ್ಲಿ, ಪಿಎಸ್ ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಾದ ಅಕ್ರಮ ಇಂತಹ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಆಗದಿರಲಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಿರಲಿ ಅನ್ನೋದು ನಮ್ಮ ಆಶಯ.
Published by:guruganesh bhat
First published: