ನೂತನ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿ ರಾಜ್ಯ ಸರ್ಕಾರ ಆದೇಶ

ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ರಾಜ್ಯ ಸರ್ಕಾರ ಸರ್ಕಾರ ಆದೇಶ ಹೊರಡಿಸಿದೆ

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

  • Share this:
ಬೆಂಗಳೂರು(ಫೆ.06) : ಕೊನೆಗೂ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇಂದು ರಾಜಭವನದ ಗಾಜಿನ ಮನೆಯಲ್ಲಿ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ್ದಾರೆ.

ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿರುವ ಸಚಿವರಿಗೆ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ರಾಜ್ಯ ಸರ್ಕಾರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಯಾರಿಗೆ ಯಾವ ಖಾತೆ ಎನ್ನುವುದು ಮಾತ್ರ ಇನ್ನು ಹಂಚಿಕೆಯಾಗಿಲ್ಲ.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಜೊತೆಯಲ್ಲಿಯೇ ವಿಧಾನಸೌಧಕ್ಕೆ ತೆರಳಿರುವ ನೂತನ ಸಚಿವರು, ಸಿಎಂ ಜೊತೆ ಸಭೆ ನಡೆಸಿದರು. ಈ ವೇಳೆ ತಮಗೆ ಯಾವ ಖಾತೆ ನೀಡಬೇಕು ಹಾಗೂ ಯಾವ ಕೊಠಡಿ ಬೇಕು ಎಂಬ ಬಗ್ಗೆ ಪಟ್ಟಿ ಸಲ್ಲಿಸಿದರು. ಈ ವೇಳೆ ನೂತನ ಸಚಿವ ರಮೇಶ್ ಜಾರಕಿಹೊಳಿ ವಿಧಾನಸೌಧದ 336-337ನೇ ಕೊಠಡಿ ನೀಡುವಂತೆ ಮನವಿ ಮಾಡಿದ್ದರು. ಆದರೆ  ಅವರಿಗೆ 342/342ಎ ಕೊಠಡಿಯನ್ನು ನೀಡಲಾಗಿದೆ.

Room01
ಸಚಿವರಿಗೆ ಹಂಚಿಕೆಯಾದ ಕೊಠಡಿಗಳು


Room02
ಸಚಿವರಿಗೆ ಹಂಚಿಕೆಯಾದ ಕೊಠಡಿಗಳು


 ನೂತನ ಸಚಿವರಿಗೆ ಹಂಚಿಕೆಯಾದ ಕೊಠಡಿಗಳು

1.ಎಸ್ ಟಿ ಸೋಮಶೇಖರ್ -ವಿಕಾಸಸೌಧ -38/39

2.ರಮೇಶ್ ಜಾರಕಿಹೊಳಿ - ವಿಧಾನಸೌಧ - 342/342 ಎ

3.ಆನಂದಸಿಂಗ್ - ವಿಕಾಸಸೌಧ - 36/37

4.ಡಾ. ಕೆ. ಸುಧಾಕರ್ - ವಿಧಾನಸೌಧ -339/339 ಎ

5.ಭೈರತಿ ಬಸವರಾಜು - ವಿಧಾನಸೌಧ - 337/337 ಎ

6.ಶಿವರಾಮ್​​​ ಹೆಬ್ಬಾರ್ - ವಿಧಾನಸೌಧ 258/257 ಎ

7.ಬಿ. ಸಿ. ಪಾಟೀಲ್ - ವಿಕಾಸಸೌಧ 406/407

8.ಕೆ ಗೋಪಾಲಯ್ಯ - ವಿಧಾನಸೌಧ 257/253 ಎ

9.ನಾರಾಯಣಗೌಡ - ವಿಕಾಸಸೌಧ 234/235

10.ಶ್ರೀಮಂತ ಪಾಟೀಲ - ವಿಧಾನಸೌಧ - 301/301 ಎ

ಇದನ್ನೂ ಓದಿ : ಅದೇ ಖಾತೆ, ಅದೇ ಕೊಠಡಿಗೆ ಪಟ್ಟು: ಡಿಕೆಶಿ ಮೇಲಿನ ಸೇಡು ಬಿಟ್ಟಿಲ್ಲವಾ ರಮೇಶ್ ಜಾರಕಿಹೊಳಿ?
First published: