• Home
 • »
 • News
 • »
 • state
 • »
 • Karnataka Cabinet Meeting: ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಈ ವಿಚಾರಗಳ ಬಗ್ಗೆ ಚರ್ಚೆ

Karnataka Cabinet Meeting: ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ; ಈ ವಿಚಾರಗಳ ಬಗ್ಗೆ ಚರ್ಚೆ

ದಟ್ಟ ಮಂಜಿನ ಕ್ಲಿಯರೆನ್ಸ್ ಸಿಕ್ಕ ಬಳಿಕ ಅರ್ಧ ಗಂಟೆ ತಡವಾಗಿ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯ್ತು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ಸಿಎಂ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

ದಟ್ಟ ಮಂಜಿನ ಕ್ಲಿಯರೆನ್ಸ್ ಸಿಕ್ಕ ಬಳಿಕ ಅರ್ಧ ಗಂಟೆ ತಡವಾಗಿ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಯ್ತು. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು ಸಿಎಂ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ವಿಚಾರವಾಗಿಯೂ  ಇಂದು ಸಂಪುಟ ಸಚಿವರ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಸಭೆ ನಡೆಸಿ ಹಬ್ಬ ಆಚರಣೆ ಬಗ್ಗೆ ಸಂಪುಟ ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ.

 • Share this:

  ಬೆಂಗಳೂರು(ಸೆ.4):  ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ(Cabinet Meeting) ನಡೆಯಲಿದೆ. ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಕ್ಯಾಬಿನೆಟ್​ ಸಚಿವರು(Cabinet Ministers) ಸಭೆಯಲ್ಲಿ ಭಾಗವಹಿಸಲಿದ್ದು, ವಿವಿಧ ವಿಚಾರಗಳನ್ನು ಪ್ರಸ್ತಾಪ ಮಾಡಲಿದ್ದಾರೆ. ಜೊತೆಗೆ ಇದೇ ಸೆ.10 ರಂದು ಗಣೇಶ ಹಬ್ಬ(Ganesha Chaturthi) ನಡೆಯಲಿದ್ದು, ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಅವಕಾಶ ನೀಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.


  ಸಂಪುಟ ಸಭೆಯಲ್ಲಿ ಚರ್ಚೆಯಾಗಲಿರುವ ವಿಷಯಗಳು(Karnataka Cabinet Meeting Toay)


  • ಹೇಮಾವತಿ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ 26 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ 98.50 ಕೋಟಿ ಬಿಡುಗಡೆಗೆ ಅನುಮೋದನೆ ಸಾಧ್ಯತೆ.

  • ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ 10 ಕೋಟಿ ಸಾಲದ ಕ್ಯಾಶ್ ಕ್ರೆಡಿಟ್ ಸೌಲಭ್ಯವನ್ನು 20 ಕೋಟಿಗೆ ಹೆಚ್ಚಳ ಮಾಡಲು ಅನುಮತಿ ನೀಡುವ ಸಾಧ್ಯತೆ.

  • ಬಂಡವಾಳ ಹೂಡಿಕೆಗಾಗಿ ಸಮಾಲೋಚಕ ಪಾಲುದಾರರಾಗಿರುವ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್​ನ್ನು 12 ತಿಂಗಳು ಮುಂದುವರೆಸಲು ನಿರ್ಧಾರ

  • ಮೈಸೂರು ಅರಮನೆ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ವಿರುದ್ಧ ಉಪ ಲೋಕಾಯುಕ್ತರು ನೀಡಿದ್ದ ಶಿಫಾರಸ್ಸನ್ನು ತಿರಸ್ಕರಿಸುವ ಸಾಧ್ಯತೆ.

  • ಅನುಕಂಪದ ನೇಮಕಾತಿಗೆ 3 ವರ್ಷ ಡಿಪ್ಲೋಮಾವನ್ನ ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆ ಎಂದು ಪರಿಣಗಣಿಸಲು ಒಪ್ಪಿಗೆ.

  • ಕರ್ನಾಟಕ ರಾಜ್ಯ ಸಿವಿಲ್ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ 2021ಕ್ಕೆ ಅನುಮೋದನೆ ಸಾಧ್ಯತೆ

  • ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ 2021 ಕ್ಕೆ ಅನುಮೋದನೆ ಸಾಧ್ಯತೆ

  • ಒಂದು ಲಕ್ಷ ಬಹುಮಹಡಿ ಮನೆ ನಿರ್ಮಾಣ ವಸತಿ ಯೋಜನೆಯ 2928 ಮನೆಗಳ ನಿರ್ಮಾಣಕ್ಕೆ 11 ಟೆಂಡರ್‌ಗಳಿಗೆ ಹಾಗೂ 4556 ಮನೆಗಳ ಅಂದಾಜು ಪಟ್ಟಿಗೆ 13ನೇ S.L.E.C.A.H ಷರತ್ತುಗಳಿಗೆ ವಿನಾಯಿತಿ ಸಾಧ್ಯತೆ

  • ಸೂರ್ಯನಗರ 2ನೇ ಹಂತದ ವಸತಿ ಯೋಜನೆಗೆ ಆನೇಕಲ್‌ನಾ ಲಿಂಗಾಪುರದಲ್ಲಿ ಸ್ವಾಧೀನಕ್ಕೆ ಒಳಪಟ್ಟಿರುವ 118 ಎಕರೆಗೆ 50:50 ರ ಅನುಪಾತದಲ್ಲಿ ಅಭಿವೃದ್ಧಿಗೆ ಒಪ್ಪಿಗೆ ನೀಡುವ ಸಾಧ್ಯತೆ

  • ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರದಲ್ಲಿ 25 ಕೋಟಿ ವೆಚ್ಚದಲ್ಲಿ ಪಾರಂಪರಿಕ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸಾಧ್ಯತೆ

  • ಮೊಳಕಾಲ್ಮೂರು ಮಿನಿ ವಿಧಾನಸೌಧಕ್ಕೆ 10.97 ಕೋಟಿ ಪರಿಷ್ಕೃತ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ

  • ಕುಮಟಾ ಮಿನಿ ವಿಧಾನಸೌಧದ ಕಾಮಗಾರಿ 12.28 ಕೋಟಿ ಆಡಳಿತಾತ್ಮಕ ಅನುಮೋದನೆ ಸಾಧ್ಯತೆ

  • ಸಬ್ ರಿಜಿಸ್ಟರ್ ಕಚೇರಿಯ ಯುಪಿಎಸ್ ಬ್ಯಾಟರಿ ಅಳವಡಿಕೆಗಳಿಗೆ 12.65 ಕೋಟಿ ನೀಡುವ ಸಾಧ್ಯತೆ

  • 2021-22 ನೇ ಸಾಲಿನಲ್ಲಿ ಐಟಿಐಗೆ ದಾಖಲಾದ ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ 13,061  ಟೂಲ್ ಕಿಟ್ ಖರೀದಿಗೆ 17 ಕೋಟಿ ಬಿಡುಗಡೆ ಸಾಧ್ಯತೆ


  ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ವಿಚಾರವಾಗಿಯೂ  ಇಂದು ಸಂಪುಟ ಸಚಿವರ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ. ಸಭೆ ನಡೆಸಿ ಹಬ್ಬ ಆಚರಣೆ ಬಗ್ಗೆ ಸಂಪುಟ ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ. ಸಂಪುಟ ಸಚಿವರು ಯಾವ ರೀತಿ ಹಬ್ಬ ಆಚರಣೆ ಮಾಡಬಹುದು ಎಂದು ಸಲಹೆ ನೀಡಲಿದ್ದಾರೆ. ಸಿಎಂ ಬೊಮ್ಮಾಯಿ ಅಂತಿಮವಾಗಿ ಆ ಸಲಹೆಗಳನ್ನು ಪಡೆದು, ಆಚರಣೆ ಬಗ್ಗೆ ನಿರ್ಧಾರ ಮಾಡಲಿದ್ದಾರೆ.


  ಇದನ್ನೂ ಓದಿ:Morning Digest: ಅಫ್ಘನಿಸ್ತಾನದಲ್ಲಿ ಇಂದು ತಾಲಿಬಾನ್ ಸರ್ಕಾರ ರಚನೆ?, ರಾಜ್ಯದಲ್ಲಿ ಇನ್ನೂ 3 ದಿನ ಮಳೆ; ಇಂದಿನ ಪ್ರಮುಖ ಸುದ್ದಿಗಳಿವು


  ನಾಳೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಗಳ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ಬೇಕಾ ಬೇಡ್ವಾ..? ಒಂದು ವೇಳೆ ಅವಕಾಶ ಕೊಟ್ರೆ ಯಾವೆಲ್ಲಾ ಬಿಗಿ ಕ್ರಮ ಮಾಡಬೇಕು ಎಂಬುದರ ಬಗ್ಗೆ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.

  Published by:Latha CG
  First published: