ಅಬೆಂಗಳೂರು(ಜು.29): ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ ಆದ ಬಳಿಕ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆಯಾಗುತ್ತಿದೆ. ನಿನ್ನೆ ಸಂಪುಟ ಸಭೆ ನಡೆಸಿದ್ದ ಸಿಎಂ ದೆಹಲಿಗೆ ಹೋಗುವುದಾಗಿ ತಿಳಿಸಿದ್ದರು. ಆದರೆ ಸದ್ಯದ ಮಾಹಿತಿ ಪ್ರಕಾರ ಶೀಘ್ರದಲ್ಲೇ ಸಂಪುಟ ರಚನೆ ಆಗೋದು ಅನುಮಾನ. ಸಂಪುಟ ರಚನೆ ಕುರಿತು ಮಾತನಾಡಿರುವ ಸಿಎಂ ಬೊಮ್ಮಾಯಿ, ಸಂಪುಟ ರಚನೆ ಈ ಸಲದ ದೆಹಲಿ ಭೇಟಿ ವೇಳೆ ಫೈನಲ್ ಆಗಲ್ಲ. ಈ ಭೇಟಿಯಲ್ಲಿ ಸಂಪುಟ ರಚನೆ ಬಗ್ಗೆ ವರಿಷ್ಠರ ಜತೆ ಚರ್ಚೆ ಮಾಡಲ್ಲ. ಮತ್ತೊಂದು ಭೇಟಿ ವೇಳೆ ಸಂಪುಟ ರಚನೆ ಕುರಿತು ಚರ್ಚೆ ಮಾಡ್ತೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪ್ರಧಾನಿ ಮೋದಿ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡ್ದೆ. ಶುಭಾಶಯ ತಿಳಿಸಿದ್ರೂ ಒಳ್ಳೆಯ ಆಡಳಿತ ನೀಡುವಂತೆ ಮೋದಿ ಹೇಳಿದರು. ದೆಹಲಿಗೆ ಹೋಗಲು ಸಮಯ ಕೇಳಿದ್ದೇನೆ. ಸಮಯ ಕೊಟ್ರೆ ಹೋಗ್ತೇನೆ. ಸಮಯ ಕೊಟ್ರೆ ನಾಳೆ ಬೆಳಗ್ಗೆ ಹೋಗುವ ಯೋಚನೆ ಇದೆ ಎಂದರು.
ಇದನ್ನೂ ಓದಿ:Gold Price Today: ಕೊಂಚ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ ಯಥಾಸ್ಥಿತಿ
ದೆಹಲಿಗೆ ವರಿಷ್ಠರು ಸಮಯ ಕೊಟ್ಟ ತಕ್ಷಣ ಹೋಗ್ತೇನೆ. ದೆಹಲಿಗೆ ಹೋಗಿ ಪ್ರಧಾನಿಗಳನ್ನು, ಗೃಹ ಸಚಿವರನ್ನು, ರಾಜನಾಥ್ ಸಿಂಗ್, ನಡ್ಡಾಜಿಯವರನ್ನು ಭೇಟಿ ಮಾಡುವ ಕಾರ್ಯಕ್ರಮ ಇದೆ. ಈ ಭೇಟಿಯನ್ನು ಸದ್ಬಳಕೆ ಮಾಡಿಕೊಳ್ತೇನೆ. ನಮ್ಮ ರಾಜ್ಯದ ಕೇಂದ್ರ ಸಚಿವರು, ಸಂಸದರ ಜತೆ ಚರ್ಚೆ ಮಾಡ್ತೇನೆ. ರಾಜ್ಯಕ್ಕೆ ಬರಬೇಕಾದ ಬಾಕಿ ಅನುದಾನಗಳ ಬಗ್ಗೆ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.
ಜಿಎಸ್ಟಿ ವಿಚಾರವನ್ನೂ ನಾನೇ ನೋಡ್ತಿರೋದು. ಈ ವರ್ಷದ 18 ಸಾವಿರ ಕೋಟಿ ಪರಿಹಾರ ಕೊಡುವುದು ಬಾಕಿ ಇದೆ. ಕಳೆದ ವರ್ಷ 12 ಸಾವಿರ ಕೋಟಿಯನ್ನು ಸಾಲದಲ್ಲಿ ಕೊಟ್ಟಿದ್ರು. ಈ ಸಲವೂ ಸಾಲವನ್ನು ಅವರೇ ಸೆಸ್ ಮೂಲಕ ತೀರಿಸುವ ಯೋಜನೆ ಇದೆ. ಅದರ ಮೂಲಕ ಪರಿಹಾರ ಕೊಡಲು ಕೇಂದ್ರ ಒಪ್ಪಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ಪೂರ್ತಿ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:Karnataka Weather Updates: ಕರ್ನಾಟಕದಲ್ಲಿ ತಗ್ಗಿದ ಮಳೆ; ಈ ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ವರುಣನ ಆರ್ಭಟ
ಇನ್ನು, ರಾಜ್ಯದಲ್ಲಿ ಮಳೆಯಿಂದ ಆದ ಹಾನಿ ಕುರಿತು ಮಾತನಾಡಿದ ಸಿಎಂ, ಉತ್ತರ ಕನ್ನಡ ಜಿಲ್ಲೆಯಲ್ಲಿಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಮೂವರು ಮೃತಪಟ್ಟಿದಾರೆ. ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಾರ್ಯಗಳಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ