HOME » NEWS » State » KARNATAKA CABINET EXPANSION IN AUGUST YEDDYURAPPA AWAITS OF DELHI LEADERS PERMISSION MAK

ಆಗಸ್ಟ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ; ದೆಹಲಿ ನಾಯಕರ ಇಶಾರೆಗೆ ಕಾಯುತ್ತಿರುವ ಯಡಿಯೂರಪ್ಪ

ಕೊನೆಗೂ ಬಿಎಸ್‌ವೈ ಆಗಸ್ಟ್‌ ತಿಂಗಳಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚಣೆ ಮಾಡಲಿದ್ದಾರೆ. ಕಳೆದ ಒಂದು ವರ್ಷದಿಂದ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸದ ಕೆಲವರಿಗೆ ಕೋಕ್‌ ಕೊಟ್ಟು ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಅಲ್ಲದೆ, ಉಳಿದಿರುವ ಖಾತೆಗಳನ್ನೂ ಸಮರ್ಥರಿಗೆ ಹಂಚಲಿದ್ದಾರೆ. ಈಗಾಗಲೇ ಯಾರ್‍ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿ ಅವರ ಬಳಿ ಸಿದ್ದವಿದೆ ಎಂದು ಹೇಳಲಾಗುತ್ತಿದೆ.

news18-kannada
Updated:July 30, 2020, 2:09 PM IST
ಆಗಸ್ಟ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಪಕ್ಕಾ; ದೆಹಲಿ ನಾಯಕರ ಇಶಾರೆಗೆ ಕಾಯುತ್ತಿರುವ ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ.
  • Share this:
ಬೆಂಗಳೂರು (ಜುಲೈ 30); ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೊನೆಗೂ ಸಂಪುಟ ವಿಸ್ತರಣೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆಗಸ್ಟ್‌ ತಿಂಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಖಚಿತವಾಗಿದ್ದು, ಹೈಕಮಾಂಡ್‌ ನಾಯಕರು ಒಪ್ಪಿಗೆ ಸೂಚಿಸುತ್ತಿದ್ದಂತೆ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಇನ್ನೂ 6 ಸಂಪುಟ ದರ್ಜೆಯ ಸಚಿವ ಸ್ಥಾನ ಉಳಿದಿದೆ. ಆದರೆ, ಈ 6 ಸ್ಥಾನಕ್ಕೆ ಬಿಜೆಪಿಯಲ್ಲಿ ಕನಿಷ್ಟ 20ಕ್ಕೂ ಹೆಚ್ಚು ಸಚಿವ ಸ್ಥಾನ ಆಕಾಂಕ್ಷಿಗಳು ಇದ್ದಾರೆ. ಇನ್ನೂ ಉತ್ತರ ಕರ್ನಾಟಕ ಮೂಲದ ಪ್ರಬಲ ನಾಯಕ ಉಮೇಶ್‌ ಕತ್ತಿ ಆದಿಯಾಗಿ ಈ ಪಟ್ಟಿ ಬಹುದೊಡ್ಡದಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ವರ್ಷವಾದರೂ ಸಹ ಬಿಎಸ್‌ವೈ ಸಂಪುಟ ವಿಸ್ತರಣೆ ಮಾಡಿರಲಿಲ್ಲ.

ಸಚಿವ ಸ್ಥಾನಕ್ಕಾಗಿ ಅನೇಕ ನಾಯಕರು ಲಾಬಿ ನಡೆಸಿದ್ದರೂ ಸಹ ಸಂಪುಟ ವಿಸ್ತರಣೆ ಮಾಡುವ ದುಸ್ಸಾಹಸಕ್ಕೆ ಯಡಿಯೂರಪ್ಪ ಕೈಹಾಕಿರಲಿಲ್ಲ. ಆದರೆ, ಒಂದು ವರ್ಷದ ಬಳಿಕ ಕೊನೆಗೂ ಬಿಎಸ್‌ವೈ ಆಗಸ್ಟ್‌ ತಿಂಗಳಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚಣೆ ಮಾಡಲಿದ್ದಾರೆ.

ಕಳೆದ ಒಂದು ವರ್ಷದಿಂದ ತಮ್ಮ ಖಾತೆಯನ್ನು ಸರಿಯಾಗಿ ನಿಭಾಯಿಸದ ಕೆಲವರಿಗೆ ಕೋಕ್‌ ಕೊಟ್ಟು ಹೊಸಬರಿಗೆ ಅವಕಾಶ ನೀಡಲಿದ್ದಾರೆ. ಅಲ್ಲದೆ, ಉಳಿದಿರುವ ಖಾತೆಗಳನ್ನೂ ಸಮರ್ಥರಿಗೆ ಹಂಚಲಿದ್ದಾರೆ. ಈಗಾಗಲೇ ಯಾರ್‍ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿ ಅವರ ಬಳಿ ಸಿದ್ದವಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಯೋಗಿ ಆದಿತ್ಯನಾಥ್ ವಿರುದ್ಧ ಹೈಕೋರ್ಟ್​ನಲ್ಲಿ ದೂರು ನೀಡಿದ್ದ ಪತ್ರಕರ್ತ ಪರ್ವೆಜ್​ಗೆ ಗ್ಯಾಂಗ್ ರೇಪ್ ಕೇಸ್​ನಲ್ಲಿ ಜೀವಾವಧಿ ಶಿಕ್ಷೆ

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಬಿಎಸ್‌ವೈ ಹೈಕಮಾಂಡ್‌ ನಾಯಕರ ಸಮಯಾವಕಾಶ ಕೇಳಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಆಗಸ್ಟ್‌ 02 ನೇ ವಾರದಲ್ಲಿ ಯಡಿಯೂರಪ್ಪ ದೆಹಲಿಗೆ ತಲುಪಲಿದ್ದಾರೆ. ದೆಹಲಿ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ ನಂತರ ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕೊನೆಯ ಕಸರತ್ತು ನಡೆಯಲಿದೆ ಎಂದು ತಿಳಿದುಬಂದಿದೆ.
Published by: MAshok Kumar
First published: July 30, 2020, 2:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories