ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಎಂ ಮತ್ತೆ ನಿರಾಸೆ; ನಾಳೆಯೂ ಸಂಪುಟ ವಿಸ್ತರಣೆಯಿಲ್ಲ

Karnataka Cabinet Expansion: ನಾಳೆಯೂ ರಾಜ್ಯ ಸಂಪುಟ ವಿಸ್ತರಣೆ ಅನುಮಾನ ಎನ್ನಲಾಗುತ್ತಿದೆ. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

  • Share this:
ಬೆಂಗಳೂರು (ನ. 29): ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯ ತಲೆನೋವು ಇನ್ನೂ ಬಗೆಹರಿದಿಲ್ಲ. ಹಾಗೇ, ಸಚಿವ ಸ್ಥಾನದ ಆಕಾಂಕ್ಷಿಗಳ ಅಸಮಾಧಾನವೂ ಶಮನವಾಗಿಲ್ಲ. ಈಗಾಗಲೇ ಮಂತ್ರಿಗಿರಿಯ ಆಕಾಂಕ್ಷಿಗಳು ದೆಹಲಿಗೆ ತೆರಳಿ ಹಿರಿಯ ನಾಯಕರ​ ಮೂಲಕವೂ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ. ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಆಕಾಂಕ್ಷಿಗಳಿಗೆ ಸಿಎಂ ಯಡಿಯೂರಪ್ಪ ಮತ್ತೆ ನಿರಾಸೆ ಮಾಡಿದ್ದಾರೆ. ನಾಳೆಯೂ ರಾಜ್ಯ ಸಂಪುಟ ವಿಸ್ತರಣೆಯಾಗುವುದು ಅನುಮಾನ ಎನ್ನಲಾಗುತ್ತಿದೆ. ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ.

ಇಂದು ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಗೆ ಕಾಯಬೇಕು ಎಂದಷ್ಟೇ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನ ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿಲ್ಲ. ಆ ಬಗ್ಗೆ ನಾನು, ನೀವು ಇಬ್ಬರೂ ಕಾಯಬೇಕು ಎಂದಷ್ಟೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಬಿಎಸ್​ವೈ ಪರ ನಿಲ್ಲಲು ಎಸ್​ಟಿಎಸ್ ಕರೆದಿದ್ದ ಮಿತ್ರಮಂಡಳಿ ಸಭೆ ಫ್ಲಾಪ್; ಬುಸುಗುಟ್ಟಿದ ಸದಸ್ಯರು

ಇದರಿಂದ ನಾಳೆ ಸಚಿವರಾಗುತ್ತೇವೆ ಎಂದು ಆಸೆಯಿಟ್ಟುಕೊಂಡಿದ್ದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಬಿಜೆಪಿಯಲ್ಲಿ ಈಗಾಗಲೇ ಬಂಡಾಯದ ಕಾವು ಏರತೊಡಗಿದೆ. ಉಪಚುನಾವಣೆಯಲ್ಲಿ ಗೆಲುವು ಕಂಡಿರುವ ಶಾಸಕರಿಗೆ ಸೇರಿದಂತೆ ಹಲವು ಶಾಸಕರು ಮಂತ್ರಿಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪನವರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ತೊರೆದು ಬಂದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ವಲಸಿಗರ ಬೇಡಿಕೆಗೂ ಇಲ್ಲವೆನ್ನಲಾಗದೆ, ಮೂಲ ಬಿಜೆಪಿಗರ ವಿರೋಧವನ್ನೂ ಕಟ್ಟಿಕೊಳ್ಳಲಾಗದೆ ಸಿಎಂ ಯಡಿಯೂರಪ್ಪ ಚಡಪಡಿಸುತ್ತಿದ್ದಾರೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಚಿತ್ರದುರ್ಗ, ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಸಿಎಂ ಚಿತ್ರದುರ್ಗಕ್ಕೆ ಹೊರಟಿದ್ದಾರೆ.
Published by:Sushma Chakre
First published: