ಬಿಎಸ್ ಯಡಿಯೂರಪ್ಪ ಸಂಪುಟ: ರಮೇಶ್ ಜಾರಕಿಹೊಳಿಗೆ ಜಲ ಸಂಪನ್ಮೂಲ; 10 ಸಚಿವರಿಗೆ ಖಾತೆ ಹಂಚಿಕೆ

ಇಂದು ಬೆಳಗ್ಗೆ  ಖಾತೆ ಹಂಚಿಕೆ ಪಟ್ಟಿ ಸಿದ್ದಪಡಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಈ ಪಟ್ಟಿಗೆ ಅನುಮೋದನೆಯನ್ನು ರಾಜ್ಯಪಾಲ ವಾಜುಭಾಯಿ ವಾಲಾ ನೀಡಿದ್ದು, ಅಧಿಕೃತ ಪಟ್ಟಿಯನ್ನು ಸಿಎಂ ಪ್ರಕಟಿಸಿದ್ದಾರೆ.

 ಸಿಎಂ ಯಡಿಯೂರಪ್ಪ

ಸಿಎಂ ಯಡಿಯೂರಪ್ಪ

 • Share this:
ಬೆಂಗಳೂರು(ಫೆ. 10): ಸಚಿವ ಸಂಪುಟ ವಿಸ್ತರಣೆಗೊಂಡ ಐದು ದಿನಗಳ ಬಳಿಕ ನೂತನ ಸಚಿವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ. ನೂತನ ಸಚಿವರ ಬೇಡಿಕೆಯಂತೆಯೆ ಖಾತೆ ಹಂಚಿಕೆ ಮಾಡಲಾಗಿದ್ದು, ಸಿಎಂ ಮತ್ತೊಮ್ಮೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬೆಳಗ್ಗೆ ಖಾತೆ ಹಂಚಿಕೆ ಪಟ್ಟಿ ಸಿದ್ದಪಡಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಈ ಪಟ್ಟಿಗೆ ಅನುಮೋದನೆಯನ್ನು ರಾಜ್ಯಪಾಲ ವಾಜುಬಾಯಿ ವಾಲಾ ನೀಡಿದ್ದಾರೆ.

ಸಚಿವ ಸ್ಥಾನ ಪ್ರಮಾಣವಚನಕ್ಕೂ ಮುನ್ನವೇ ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದ ರಮೇಶ್​ ತಮ್ಮ ಇಷ್ಟದ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನೂತನ ಸಚಿವರ ಖಾತೆ:

 • ರಮೇಶ್ ಜಾರಕಿಹೊಳಿ-ಜಲಸಂಪನ್ಮೂಲ

 • ಡಾ.ಕೆ.ಸುಧಾಕರ್​-ವೈದ್ಯಕೀಯ ಶಿಕ್ಷಣ

 • ಎಸ್​.ಟಿ,ಸೋಮಶೇಖರ್- ಸಹಕಾರ

 • ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ

 • ಬಿ.ಸಿ.ಪಾಟೀಲ್ - ಅರಣ್ಯ ಖಾತೆ

 • ಶಿವರಾಮ್ ಹೆಬ್ಬಾರ್-ಕಾರ್ಮಿಕ ಖಾತೆ

 • ಆನಂದ್​ ಸಿಂಗ್- ಆಹಾರ, ನಾಗರಿಕ ಪೂರೈಕೆ

 • ಶ್ರೀಮಂತ ಪಾಟೀಲ್- ಸಕ್ಕರೆ ಖಾತೆ

 • ನಾರಾಯಣಗೌಡ- ಪೌರಾಡಳಿತ, ತೋಟಗಾರಿಕೆ

 • ಭೈರತಿ ಬಸವರಾಜ್- ನಗರಾಭಿವೃದ್ದಿ


ಅಶೋಕ್​ ಕೈ ತಪ್ಪಿದ ಪೌರಾಡಳಿತ: 

ಈ ಹಿಂದೆ ಸಚಿವ ಆರ್​ ಅಶೋಕ್​ ಬಳಿ ಇದ್ದ ಪೌರಾಡಳಿತ ಖಾತೆಯನ್ನು ಕೆಆರ್​ ಪೇಟೆ ಶಾಸಕ ನಾರಾಯಣಗೌಡಗೆ ನೀಡಲಾಗಿದೆ. ಶನಿವಾರ ಸಿಎಂ ಬಿಎಸ್​ ಯಡಿಯೂರಪ್ಪ ​ ಅವರನ್ನು ಭೇಟಿಯಾಗಿದ್ದ ಆರ್​ ಅಶೋಕ್​ ಖಾತೆ ಬದಲಾವಣೆ ಕುರಿತು ಚರ್ಚೆ ನಡೆಸಿದ್ದರು. ನೂತನ ಸಚಿವರ ಓಲೈಸುವ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ ಅನಿವಾರ್ಯವಾಗಿದ್ದು, ಇದನ್ನು ಬಿಟ್ಟು ಕೊಡಲು ಯಾವುದೇ ಬೇಸರವಿಲ್ಲ ಎಂದು ಕೂಡ ಅವರು ತಿಳಿಸಿದ್ದರು.

ಅಕ್ಕಿ ಕಡಿತ ಮಾಡಿದ ಜೊಲ್ಲೆಗೆ ಶಾಕ್​

ಸರ್ಕಾರದ ದಾಸೋಹದ ಮೂಲಕ ಮಠ-ಮಂದಿರಗಳಿಗೆ ಅಕ್ಕಿ ಪೂರೈಸುತ್ತಿದ್ದ ಈ ಹಿಂದಿನ ಸರ್ಕಾರದ ಯೋಜನೆಯನ್ನು ಬಿಜೆಪಿ ಸರ್ಕಾರ ದಿಢೀರ್​ ಎಂದು ನಿಲ್ಲಿಸಿತು. ಸಿದ್ದಗಂಗಾ ಸೇರಿದಂತೆ ಅನೇಕ ಮಠಗಳಿಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಅಕ್ಕಿ ಗೋಧಿ ಪೂರೈಕೆಯಾಗದೇ ಸುದ್ದಿಯಾಗಿತ್ತು. ಈ ಮೂಲಕ ಸರ್ಕಾರದ ನಡೆಗೆ ವಿಪಕ್ಷಗಳು ಹರಿಹಾಯ್ದವು. ಸರ್ಕಾರದ ನಡೆ ಮುಜುಗರಕ್ಕೆ ಈಡಾಗುವುದರ ಜೊತೆ ಈ ಬಗ್ಗೆ ಆಹಾರ, ನಾಗರಿಕ ಪೂರೈಕೆ ಸಚಿವೆಯಾಗಿದ್ದ ಶಶಿಕಲಾ ಜೊಲ್ಲೆಗೆ ಸಿಎಂ ಕ್ಲಾಸ್​ ತೆಗೆದುಕೊಂಡಿದ್ದರು. ಈ ಹಿನ್ನೆಲೆ ಶಶಿಕಲಾ ಜೊಲ್ಲೆ ಬಳಿ ಇದ್ದ ಆಹಾರ, ನಾಗರಿಕ ಪೂರೈಕೆ ಖಾತೆಯನ್ನು ಅವರಿಂದ ಕಿತ್ತು ಆನಂದ್​ ಸಿಂಗ್​ಗೆ ನೀಡಲಾಗಿದೆ. ಈಗ ಶಶಿಕಲಾ ಬಳಿ ಮಹಿಳಾ ಮಕ್ಕಳ ಖಾತೆ ಒಂದೇ ಉಳಿದಿದೆ. ನ

ಕೇಳಿದ ಖಾತೆಯೇ ಬೇರೆ, ಕೊಟ್ಟಿದ್ದೇ ಬೇರೆ: 

ಖಾತೆ ಹಂಚಿಕೆ ಬಳಿಕ ಮಾತನಾಡಿದ ಕೆ ಸುಧಾಕರ್​, ಸಿಎಂ ಯಡಿಯೂರಪ್ಪ ಬಳಿ ನಾನು ಇಂಧನ ಖಾತೆ ಕೇಳಿದ್ದೆ. ಆದರೆ, ಈಗ ಅವರು, ವೈದ್ಯಕೀಯ ಖಾತೆ ನೀಡಿದ್ದಾರೆ. ಆದರೂ ಬೇಸರವಿಲ್ಲ. ವೈದ್ಯಕೀಯ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಇನ್ನು ಕೆಲವು ತಿಂಗಳು ಸಮಯಾವಕಾಶ ಮಾಡಿಕೊಡಿ. ಹೇಗೆ ಕೆಲಸ ಮಾಡುತ್ತೇನೆ ಎಂದು ತೋರಿಸುತ್ತೇನೆ ಎಂದರು.

ಸಿಎಂ ಬಳಿಯೇ ಉಳಿದು ಕೊಂಡ ಬೆಂಗಳೂರು ನಗರಾಭಿವೃದ್ಧಿ

ಮೂಲ ಬಿಜೆಪಿಗರು ಸೇರಿದಂತೆ ನೂತನ ಸಚಿವರಿಂದ ಅತಿಹೆಚ್ಚು ಬೇಡಿಕೆ ಪಡೆದಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಸಿಎಂ ತಮ್ಮಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಆರ್​ ಅಶೋಕ್​ ಲಾಬಿ ಮಾಡಿದ್ದ ಈ ಖಾತೆಗೆ ನೂತನ ಸಚಿವರ ಭೈರತಿ ಬಸವರಾಜ್​ ಕೂಡ ಬೇಡಿಕೆ ಇಟ್ಟಿದ್ದರು. ಆದರೆ, ಸಿಎಂ ಅವರಿಗೆ ಕೇವಲ ನಗರಾಭಿವೃದ್ಧಿ ಖಾತೆ ನೀಡುವ ಮೂಲಕ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.
First published: