HOME » NEWS » State » KARNATAKA CABINET EXPANSION BS YEDIYURAPPA WILL KEEP HIS PROMISE SAYS EXCISE MINISTER H NAGESH OVER CABINET EXPANSION SCT

ಬಿಜೆಪಿ ಸರ್ಕಾರ ರಚನೆಗೆ ನಾನೇ ಮುಖ್ಯ ಕಾರಣ, ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ; ಹೆಚ್. ನಾಗೇಶ್ ವಿಶ್ವಾಸ

H Nagesh: ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಬಿಜೆಪಿ ಸರ್ಕಾರ ಬರೋದಕ್ಕೂ ನಾನೇ ಟರ್ನಿಂಗ್ ಪಾಯಿಂಟ್. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಸಂಪುಟದಿಂದ ಕೈ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ.

news18-kannada
Updated:January 11, 2021, 12:48 PM IST
ಬಿಜೆಪಿ ಸರ್ಕಾರ ರಚನೆಗೆ ನಾನೇ ಮುಖ್ಯ ಕಾರಣ, ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ; ಹೆಚ್. ನಾಗೇಶ್ ವಿಶ್ವಾಸ
ಅಬಕಾರಿ ಸಚಿವ ಹೆಚ್ ನಾಗೇಶ್.
  • Share this:
ಬೆಂಗಳೂರು (ಜ. 11): ರಾಜ್ಯ ಸಂಪುಟ ವಿಸ್ತರಣೆಗೆ ಈಗಾಗಲೇ ಮುಹೂರ್ತ ಫಿಕ್ಸ್​ ಆಗಿದೆ. 7 ಸಚಿವರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಇದರ ಜೊತೆಗೆ ಕೆಲವು ಹಾಲಿ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎನ್ನಲಾಗುತ್ತಿದೆ. ಆ ಪಟ್ಟಿಯಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರ ಹೆಸರೂ ಕೇಳಿಬರುತ್ತಿದೆ. ಹೀಗಾಗಿ, ಇಂದು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಹೆಚ್​. ನಾಗೇಶ್, ನನ್ನನ್ನು ಸಂಪುಟದಿಂದ ಕೈ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಎಂಬ ವಿಶ್ವಾಸ ನನಗಿದೆ. ಈ ಸರ್ಕಾರ ರಚನೆಯಾಗಲು ನಾನೇ ಮುಖ್ಯ ಕಾರಣ. ನನ್ನನ್ನು ಸಂಪುಟದಿಂದ ಕೈ ಬಿಡುವ ಅನಿವಾರ್ಯ ಪರಿಸ್ಥಿತಿಯೇ ಬರುವುದಿಲ್ಲ ಎಂದಿದ್ದಾರೆ.

ನನ್ನನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂದು ಯಾವುದೋ ಪತ್ರಿಕೆಯ ಸುದ್ದಿ ನೋಡಿ ನನಗೆ ಶಾಕ್ ಆಯ್ತು. ಸಮ್ಮಿಶ್ರ ಸರ್ಕಾರದ ಕಷ್ಟಕಾಲದಲ್ಲಿ ನಾನು ಮಂತ್ರಿಯಾಗಿದ್ದೆ. ಬಿಜೆಪಿ ಸರ್ಕಾರ ರಚನೆಗೆ ನನ್ನಿಂದಲೇ ಟರ್ನಿಂಗ್ ಪಾಯಿಂಟ್ ಸಿಕ್ಕಿತು. ನನ್ನನ್ನು ಸಂಪುಟದಿಂದ ಕೈ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ಎಂಬ ವಿಶ್ವಾಸ ನನಗಿದೆ. ನೀನು ಮೂರೂವರೆ ವರ್ಷ ಸಚಿವನಾಗಿರುತ್ತೀಯ ಎಂದು ಸಿಎಂ ಯಡಿಯೂರಪ್ಪ ನನಗೆ ಮಾತು ಕೊಟ್ಟಿದ್ದಾರೆ. ಸಿಎಂ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಇದುವರೆಗೂ ನನ್ನನ್ನು ಕೈ ಬಿಡುವ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೆ. ನನ್ನನ್ನು ಸಂಪುಟದಿಂದ ಕೈ ಬಿಡುವ ಮಾತೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾನು ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವನು. ಆಮೇಲೆ ಅಲ್ಲಿ ರಾಜೀನಾಮೆ ನೀಡಿ ಬಿಜೆಪಿಗೆ ಬಂದವನು. ಆಗ ನನ್ನನ್ನು ಎಷ್ಟೋ ಜನರು ಏನೇನೋ ಟೀಕೆ ಮಾಡಿದ್ದರು. ಹೀಗಿದ್ದರೂ ನಾನು ಅಲ್ಲಿ ರಾಜೀನಾಮೆ ಕೊಟ್ಟು ಬಂದಿದ್ದೇನೆ. ನನ್ನ ರೀತಿ ಯಾರು ಮಾಡ್ತಾರೆ ಹೇಳಿ? ಈ ಸರ್ಕಾರ ರಚನೆಗೆ ನಾನೇ ಪ್ರಮುಖ ಕಾರಣ. ಬಿಜೆಪಿ ಸರ್ಕಾರ ಬರೋದಕ್ಕೂ ನಾನೇ ಟರ್ನಿಂಗ್ ಪಾಯಿಂಟ್. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೆಚ್. ನಾಗೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: Cabinet Expansion: ಸಂಪುಟ ವಿಸ್ತರಣೆ ಬಗ್ಗೆ ಮುಗಿಯದ ಗೊಂದಲ; ಹೈಕಮಾಂಡ್​ನಿಂದ ಸಿಕ್ಕಿಲ್ಲ ಸ್ಪಷ್ಟ ಅನುಮತಿ

ನನ್ನನ್ನು ಸಂಪುಟದಿಂದ ಕೈ ಬಿಡುವ ಅನಿವಾರ್ಯ ಪರಿಸ್ಥಿತಿಯೇ ಬರುವುದಿಲ್ಲ. ಒಂದು ವೇಳೆ ನನ್ನನ್ನು ಕೈ ಬಿಡುವ ಸಂದರ್ಭ ಬಂದಾಗ ನಾನು ಮಾತನಾಡುತ್ತೇನೆ. ಆದರೆ ಯಡಿಯೂರಪ್ಪನವರ ಮೇಲೆ ನನಗೆ ನಂಬಿಕೆಯಿದೆ. ಯಾವುದೇ ಕಾರಣಕ್ಕೂ ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ನನ್ನನ್ನು ಸಂಪುಟದಿಂದ ಕೈ ಬಿಡೋ ಬಗ್ಗೆ ಹೈಕಮಾಂಡ್ ಮಾಡಿರೋ ತೀರ್ಮಾನದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ನನ್ನನ್ನು ಕೈ ಬಿಡುವುದಿಲ್ಲ ಎಂದು ನಂಬಿಕೆಯಿದೆ ಎಂದು ಹೆಚ್. ನಾಗೇಶ್ ಹೇಳಿದ್ದಾರೆ.

ಸಂಪುಟದಿಂದ ನನ್ನನ್ನು ಕೈ ಬಿಡುವ ವಿಚಾರವಾಗಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ‌ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದು ಸಚಿವ ಹೆಚ್. ನಾಗೇಶ್ ಹೇಳಿದ್ದಾರೆ.
ಒಂದೆರಡು ದಿನಗಳ ಮೊದಲು ಕೋಲಾರದಲ್ಲಿ ಮಾತನಾಡಿದ್ದ ಸಚಿವ ಹೆಚ್. ನಾಗೇಶ್, ಒಂದುವೇಳೆ ಸಂಪುಟದಲ್ಲಿ ಬದಲಾವಣೆ ಮಾಡುವುದಾದರೆ ನನಗೆ ಇಂಧನ ಖಾತೆ ನೀಡಲಿ. ನನಗೆ ಇಂಧನ ಇಲಾಖೆಯಲ್ಲಿ 34 ವರ್ಷದ ಅನುಭವವಿದೆ. ನನ್ನ ಹಿನ್ನಲೆಯನ್ನು ಅಧ್ಯಯನ ಮಾಡಿ ಸಿಎಂ ಯಡಿಯೂರಪ್ಪ ಇಂಧನ ಖಾತೆಯನ್ನು ನೀಡಲಿ. ನನಗೆ ಕಾರಣಾಂತರಗಳಿಂದ ಇಂಧನ ಖಾತೆ ತಪ್ಪಿ, ಅಬಕಾರಿ ಇಲಾಖೆ ಸಿಕ್ಕಿತು. ಸಂಪುಟ ಪುನಾರಚನೆ ವೇಳೆ ಇಂಧನ ಖಾತೆ ನೀಡಿದರೆ ಒಳ್ಳೆಯದು ಎಂದು ಹೇಳಿದ್ದರು. ಇದೀಗ ಅವರಿಗೆ ಸಚಿವ ಸ್ಥಾನ ಉಳಿಯುತ್ತದೋ, ಇಲ್ಲವೋ ಎಂಬುದೇ ಅನುಮಾನವಾಗಿದೆ.
Published by: Sushma Chakre
First published: January 11, 2021, 12:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories