HOME » NEWS » State » KARNATAKA CABINET EXPANSION BJP MLC H VISHWANATH URGES KARNATAKA CM BS YEDIYURAPPA TO EXPAND THE CABINET SCT

ಸಂಪುಟ ಪುನಾರಚನೆ ಮಾಡುವುದು ಉತ್ತಮ; ಹಾಲಿ ಸಚಿವರಿಗೆ ಶಾಕ್ ನೀಡಿದ ಹೆಚ್​. ವಿಶ್ವನಾಥ್

Karnataka Cabinet Expansion: ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ನಾನು ಮಾಡಿದ ತ್ಯಾಗಕ್ಕೆ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಹೆಚ್​. ವಿಶ್ವನಾಥ್ ಹೇಳಿದ್ದಾರೆ.

news18-kannada
Updated:November 11, 2020, 3:14 PM IST
ಸಂಪುಟ ಪುನಾರಚನೆ ಮಾಡುವುದು ಉತ್ತಮ; ಹಾಲಿ ಸಚಿವರಿಗೆ ಶಾಕ್ ನೀಡಿದ ಹೆಚ್​. ವಿಶ್ವನಾಥ್
ಹೆಚ್. ವಿಶ್ವನಾಥ್
  • Share this:
ಬೆಂಗಳೂರು (ನ. 11): ಸಚಿವ ಸ್ಥಾನದ ಆಕಾಂಕ್ಷಿ ಹೆಚ್. ವಿಶ್ವನಾಥ್ ಹಾಲಿ ಸಚಿವರಿಗೆ ಶಾಕ್ ನೀಡಿದ್ದು, ಸಾರ್ವತ್ರಿಕ ಚುನಾವಣೆಯ ದೃಷ್ಟಿಯಿಂದ ರಾಜ್ಯದಲ್ಲಿ ಸಂಪುಟ ಪುನಾರಚನೆ ಮಾಡುವುದು ಒಳ್ಳೆಯದು. ಹೊಸ ಮಂತ್ರಿಮಂಡಲ, ಹೊಸ ಯೋಜನೆಗಳು, ಹೊಸತನದೊಂದಿಗೆ ಪಕ್ಷ ಚುನಾವಣೆಗೆ ಸಜ್ಜಾಗಬೇಕು. ನಾನು ಮಾಡಿದ ತ್ಯಾಗಕ್ಕೆ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಾಲಿ ಸಚಿವರನ್ನು ಕೈಬಿಟ್ಟರೆ ಒಳ್ಳೆಯದು ಎಂಬ ಸಂದೇಶ ರವಾನಿಸಿದ್ದಾರೆ.

ನಾನು ದೆಹಲಿ ಮಾರ್ಗವಾಗಿ ಮಹಾಕಾಳ ದರುಶನಕ್ಕೆ ಹೋಗಿದ್ದೆ. ದೇಶ ಹಾಗೂ ನಾಡಿಗೆ ಒಳ್ಳೆಯದಾಗಲಿ ಎಂದು ಕೈ ಮುಗಿಯುತ್ತೇನೆ. ಹಾಗೇ ಸ್ವಾರ್ಥಕ್ಕೂ ಕೈ ಮುಗಿಯುತ್ತೇವೆ. ಅದೇರೀತಿ, ನನಗೂ ಒಳ್ಳೆಯದು ಮಾಡಪ್ಪ ಎಂದು ಕೇಳಿಕೊಂಡು ಬಂದಿದ್ದೇನೆ‌. ಈ ಬಾರಿ ನನಗೆ ಒಳ್ಳೆಯದು ಆಗುವ ನಂಬಿಕೆಯಿದೆ ಎನ್ನುವ ಮೂಲಕ ಎಂಎಲ್​ಸಿ ಹೆಚ್​. ವಿಶ್ವನಾಥ್​ ಪರೋಕ್ಷವಾಗಿ ಸಚಿವ ಸ್ಥಾನಕ್ಕಾಗಿಯೇ ದೇವರ ದರ್ಶನ ಮಾಡಿ ಬಂದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಬೆಂಕಿ ದುರಂತ; ಬಿಬಿಎಂಪಿ ವೈಫಲ್ಯವೂ ಇದೆ ಎಂದ ಕಮಿಷನರ್ ಮಂಜುನಾಥ್ ಪ್ರಸಾದ್

ನಾನು ನಿನ್ನೆ ಮೊನ್ನೆಯವನಲ್ಲ. ನಾನು ಎಲ್ಲರ ಹತ್ತಿರ ಹೋಗಿ ನನ್ನ ಹೆಸರು ಹೇಳಿ ಎಂದು ಹೇಳುವ ಅವಶ್ಯಕತೆಯೂ ಇಲ್ಲ. ನಾನು ಹಿರಿಯವನು, ಹಿರಿತನಕ್ಕೆ, ತ್ಯಾಗಕ್ಕೆ ಬೆಲೆ ಸಿಗುತ್ತದೆ. ನಾನು ಮಾಡಿದ ತ್ಯಾಗಕ್ಕೆ ಅವಕಾಶ ಸಿಕ್ಕೇ ಸಿಗುವ ವಿಶ್ವಾಸವಿದೆ. ಈ ಸ್ವರೂಪದ ಮೂಲಕ ನಾನು ಸಚಿವ ಸ್ಥಾನದ ಅಲ್ಲದೆ ಬೇರೆ ಏನು ಕೇಳಲಿ? ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು. ಮುಂದಿನ ಸಾರ್ವತ್ರಿಕ ಚುನಾವಣೆಗೆ ನಾವು ಸಜ್ಜಾಗಬೇಕು. ಮುಂದೆ ಸಾಮಾನ್ಯವಾಗಿ ಚುನಾವಣೆ ನಡೆಸೋದು ಪಕ್ಷ. ಉಪ‌ ಚುನಾವಣೆ ನಡೆಸೋದು ಸರ್ಕಾರ. ಹೀಗಾಗಿ ಮುಂದೆ ನಾವು ಎಲ್ಲ ರೀತಿಯಲ್ಲೂ ಸಜ್ಜಾಗಬೇಕು. ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಸಂಪುಟ ಪುನಾರಚನೆ ಮಾಡೋದು ಒಳ್ಳೆಯದು ಎಂದು ಹೆಚ್​. ವಿಶ್ವನಾಥ್ ಹೇಳಿದ್ದಾರೆ.

ಹೊಸ ಮಂತ್ರಿ ಮಂಡಲದ ಜೊತೆ, ಹೊಸ ಕಾರ್ಯಕ್ರಮದ ಮೂಲಕ, ಹೊಸತನದ ಗಾಳಿಯೊಡನೆ ಪಕ್ಷ ಸಜ್ಜಾಗಬೇಕು. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು ಎನ್ನುವ ಮೂಲಕ ಹೆಚ್​. ವಿಶ್ವನಾಥ್ ಹಾಲಿ ಸಚಿವರಿಗೆ ಶಾಕ್ ನೀಡಿದ್ದಾರೆ. ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದು. ಆದರೆ ಸಿಎಂ ಹಾಲಿ ಸಚಿವರನ್ನು ಕೈ ಬಿಡುತ್ತಾರೋ, ಬಿಡುವುದಿಲ್ಲವೋ ಎಂದು ನಾನೇನೂ ಹೇಳುವುದಿಲ್ಲ. ಆದರೆ ಸಂಪುಟ ಪುನಾರಚನೆ ಮಾಡಿ ಹೋದರೆ ಮುಂದೆ ಚುನಾವಣೆಗೆ ಒಳ್ಳೆಯದಾಗುತ್ತದೆ ಎಂದು ಹೆಚ್​. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
Published by: Sushma Chakre
First published: November 11, 2020, 3:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading