Karnataka Cabinet Expansion: ಪ್ರಮಾಣ ವಚನ ಸ್ವೀಕರಿಸಿದ ಶೆಟ್ಟರ್, ಈಶ್ವರಪ್ಪ, ಅಶೋಕ್, ಸುರೇಶ್ ಕುಮಾರ್, ಶ್ರೀರಾಮುಲು ಸೇರಿ 17 ಸಚಿವರು

BS Yeddyurappa Cabinet: ಬಿಜೆಪಿ ಹೈಕಮಾಂಡ್​​ ಕೊನೆಗೂ ನೂತನ ಸಚಿವರ ಪಟ್ಟಿ ಫೈನಲ್ ಮಾಡಿದೆ. 17 ಸಚಿವರ ಹೆಸರನ್ನು ವರಿಷ್ಠರು ಫೈನಲ್ ಮಾಡಿದ್ದಾರೆ. ಒಬ್ಬ ಪಕ್ಷೇತರ ಸೇರಿದಂತೆ 16 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Ganesh Nachikethu | news18
Updated:August 20, 2019, 11:34 AM IST
Karnataka Cabinet Expansion: ಪ್ರಮಾಣ ವಚನ ಸ್ವೀಕರಿಸಿದ ಶೆಟ್ಟರ್, ಈಶ್ವರಪ್ಪ, ಅಶೋಕ್, ಸುರೇಶ್ ಕುಮಾರ್, ಶ್ರೀರಾಮುಲು ಸೇರಿ 17 ಸಚಿವರು
ಯಡಿಯೂರಪ್ಪ
Ganesh Nachikethu | news18
Updated: August 20, 2019, 11:34 AM IST
ಬೆಂಗಳೂರು(ಆಗಸ್ಟ್​​.20): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗಿದೆ. ನಿನ್ನೆ ಮಧ್ಯರಾತ್ರಿಯೇ ಬಿಜೆಪಿ ಹೈಕಮಾಂಡ್​ ಕೊನೆಗೂ ಪಟ್ಟಿ ಅಂತಿಮಗೊಳಿಸಿದ್ದು, 17 ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ ಮುಳಬಾಗಿಳು ಪಕ್ಷೇತರ ಶಾಸಕ ಎಚ್​​. ನಾಗೇಶ್ ಅವರಿಗೆ ಕೂಡ​​ ಸಚಿವರಾಗುವ ಅವಕಾಶ ಸಿಕ್ಕಿದೆ.

ಸೋಮವಾರ ರಾತ್ರಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಫೋನ್​​ ಮಾಡಿ ಸಚಿವರ ಪಟ್ಟಿಯನ್ನು ಅಧಿಕೃತವಾಗಿ ತಿಳಿಸಿದರು. ಬಳಿಕ ಹೈಕಮಾಂಡ್​​ ಅಂತಿಮಗೊಳಿಸಿದ್ದ ಶಾಸಕರಿಗೆ ಯಡಿಯೂರಪ್ಪನವರೇ ಖುದ್ದು ಫೋನ್​​ ಮಾಡಿ, ಇಂದು ಬೆಳಗ್ಗೆ 11.30ಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸುವಂತೆ ಸೂಚಿಸಿದ್ದರು.

ಅಧಿಕೃತ ಪಟ್ಟಿ


ಇದನ್ನೂ ಓದಿ: Phone Tapping Case: ಫೋನ್​​ ಟ್ಯಾಪಿಂಗ್​​ ಇತಿಹಾಸ ಬಿಚ್ಚಿಟ್ಟ ಮಾಜಿ ಪ್ರಧಾನಿ ದೇವೇಗೌಡ

ಬಿಜೆಪಿ ಹೈಕಮಾಂಡ್​​ ಕೊನೆಗೂ ನೂತನ ಸಚಿವರ ಪಟ್ಟಿ ಫೈನಲ್ ಮಾಡಿದೆ. 17 ಸಚಿವರ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದಾರೆ. ಇದರಂತೆಯೇ ಈಗ ಓರ್ವ ಪಕ್ಷೇತರ ಸೇರಿದಂತೆ 17 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

ಸಚಿವರ ಅಂತಿಮ ಪಟ್ಟಿ ಹೀಗಿದೆ...
Loading...


  • 01. ಗೋವಿಂದ ಕಾರಜೋಳ

  • 02. ಅಶ್ಚಥ್ ನಾರಯಣ್

  • 03. ಲಕ್ಷ್ಮಣ್ ಸವಧಿ

  • 04. ಕೆ ಎಸ್ ಈಶ್ಚರಪ್ಪ

  • 05. ಆರ್ ಅಶೋಕ್

  • 06. ಜಗದೀಶ್ ಶೆಟ್ಟರ್

  • 07. ಶ್ರೀರಾಮುಲು

  • 08. ಸುರೇಶ್ ಕುಮಾರ್

  • 09. ವಿ ಸೋಮಣ್ಣ

  • 10. ಸಿ ಟಿ ರವಿ

  • 11. ಬಸವರಾಜ್ ಬೊಮ್ಮಾಯಿ

  • 12. ಕೋಟಾ ಶ್ರೀನಿವಾಸ್ ಪೂಜಾರಿ

  • 13. ಮಾಧುಸ್ವಾಮಿ

  • 14. ಸಿ ಸಿ ಪಾಟೀಲ್

  • 15. ಹೆಚ್ ನಾಗೇಶ್

  • 16. ಪ್ರಭು ಚೌಹಾಣ್

  • 17. ಶಶಿಕಲಾ ‌ಜೊಲ್ಲೆ


--------------
First published:August 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...