ರಾಜಕೀಯದಲ್ಲಿ ಇದೆಲ್ಲ ಸಹಜ, ಭವಿಷ್ಯದಲ್ಲಿ ಸಚಿವನಾಗುವ ನಿರೀಕ್ಷೆಯಿದೆ; ಎಚ್. ವಿಶ್ವನಾಥ್ ವಿಶ್ವಾಸ

ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಚ್​. ವಿಶ್ವನಾಥ್ ಈ ಬಾರಿಯ ಉಪ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು. ಚುನಾವಣೆಯಲ್ಲಿ ಸೋತರೂ ಸಚಿವ ಸ್ಥಾನ ಬೇಕೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದೆ ಪಟ್ಟು ಹಿಡಿದಿದ್ದರು.

ಹೆಚ್. ವಿಶ್ವನಾಥ್

ಹೆಚ್. ವಿಶ್ವನಾಥ್

  • Share this:
ಬೆಂಗಳೂರು (ಫೆ. 6): ನೂತನ ಸಚಿವರ ಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಯಲ್ಲಿ ಒಳಗಿಂದೊಳಗೆ ಅಸಮಾಧಾನ ತಲೆದೋರಿದೆ. ಮಂತ್ರಿ ಸ್ಥಾನದಿಂದ ವಂಚಿತರಾಗಿರುವ ಎಚ್​. ವಿಶ್ವನಾಥ್ ತಮ್ಮ ಅಸಮಾಧಾನದ ನಡುವೆಯೂ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜೊತೆಗಿದ್ದವರು ಸಚಿವರಾಗುತ್ತಿರುವುದು ಸಂತೋಷ ತಂದಿದೆ. ನೂತನ ಸಚಿವರಿಂದ ಅಭಿವೃದ್ಧಿ ಸಾಧ್ಯವಾಗಲಿ. ಸಂದರ್ಭ, ಸಮಯ ಬಂದಾಗ ನನಗೂ ಸ್ಥಾನ ಸಿಗುತ್ತದೆ. ರಾಜಕಾರಣದಲ್ಲಿ ಇದೆಲ್ಲ ಸಹಜ. ಮುಂದಿನ ದಿನಗಳಲ್ಲಿ ಸಚಿವನಾಗುವ ನಿರೀಕ್ಷೆ ಇದೆ ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಿಗಿರಿ ಸಿಗದಿದ್ದಕ್ಕೆ ನೋವಿದೆ, ನೆಟ್ಟಗಿರುವ ಮರ ಬೇಗ ಉರುಳಿ ಬೀಳುತ್ತದೆ; ಮಹೇಶ್ ಕುಮಟಳ್ಳಿ ಬೇಸರ

ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಚ್​. ವಿಶ್ವನಾಥ್ ಈ ಬಾರಿಯ ಉಪ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದರು. ಚುನಾವಣೆಯಲ್ಲಿ ಸೋತರೂ ಸಚಿವ ಸ್ಥಾನ ಬೇಕೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದೆ ಪಟ್ಟು ಹಿಡಿದಿದ್ದರು. ಅದಕ್ಕಾಗಿ ನಾನಾ ಮಾರ್ಗಗಳಲ್ಲಿ ಲಾಬಿಯನ್ನೂ ನಡೆಸಿದ್ದರು. ಎಚ್​. ವಿಶ್ವನಾಥ್​ ಪರವಾಗಿ ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಕೆಲವು ವಲಸಿಗ ಶಾಸಕರು ಕೂಡ ಬ್ಯಾಟಿಂಗ್ ಮಾಡಿದ್ದರು.

ರಮೇಶ್ ಜಾರಕಿಹೊಳಿ (ಗೋಕಾಕ್), ಎಸ್.ಟಿ. ಸೋಮಶೇಖರ್ (ಯಶವಂತಪುರ), ಗೋಪಾಲಯ್ಯ (ಮಹಾಲಕ್ಷ್ಮೀಲೇಔಟ್), ಬೈರತಿ ಬಸವರಾಜು (ಕೆ.ಆರ್.ಪುರಂ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೆಕೇರೂರು), ನಾರಾಯಣಗೌಡ (ಕೆ.ಆರ್.ಪೇಟೆ), ಶ್ರೀಮಂತ ಪಾಟೀಲ್ (ಕಾಗವಾಡ), ಶಿವರಾಮ ಹೆಬ್ಬಾರ್ (ಯಲ್ಲಾಪುರ), ಆನಂದಸಿಂಗ್ (ವಿಜಯನಗರ) ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
First published: