• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Cabinet Expanstion: 24 ಶಾಸಕರಿಗೆ ಒಲಿದು ಬಂದ 'ಮಂತ್ರಿ ಭಾಗ್ಯ'! 'ಕೈ' ಲಿಸ್ಟ್‌ನಲ್ಲಿ ಯಾರ ಯಾರ ಹೆಸರಿದೆ?

Karnataka Cabinet Expanstion: 24 ಶಾಸಕರಿಗೆ ಒಲಿದು ಬಂದ 'ಮಂತ್ರಿ ಭಾಗ್ಯ'! 'ಕೈ' ಲಿಸ್ಟ್‌ನಲ್ಲಿ ಯಾರ ಯಾರ ಹೆಸರಿದೆ?

ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ರಾಜ್ಯ ರಾಜಕಾರಣದ ಚೆಂಡು ರಾಷ್ಟ್ರ ರಾಜಧಾನಿಗೆ ತಲುಪಿ 3 ದಿನ ಆಯ್ತು. ಪಟ್ಟಿ ಫೈನಲ್ ಮಾಡೋಕೆ ಸಿದ್ದು, ಡಿಕೆಶಿ, ಖರ್ಗೆ ಸೇರಿದಂತೆ ಕಾಂಗ್ರೆಸ್​ ವರಿಷ್ಠರು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಕಡೆಗೂ ಒಂದು ಪಟ್ಟಿ ತಯಾರು ಮಾಡಿದ್ದಾರೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಬಹುಮತದ ಸರ್ಕಾರ (Government) ರಚಿಸಿದರೂ ಸಿದ್ದರಾಮಯ್ಯ (Siddaramaiah) ಸಿಎಂ ಆಗೋದಕ್ಕೆ ಡಿಕೆ ಶಿವಕುಮಾರ್​​ (DK Shivakumar) ಜೊತೆಗೆ ಗುದ್ದಾಡಬೇಕಾಯಿತು. ಶನಿವಾರ ನೂತನ ಸಚಿವರ ಪ್ರಮಾಣ ವಚನ (Oath) ಅಂತ ಘೋಷನೆಯಾಗಿದ್ದು, ರಾಜಭವನಕ್ಕೆ ಸಚಿವರ ಪಟ್ಟಿ (Ministers List) ರವಾನೆಯಾಗಿದೆ. ನಾಳೆ ಬೆಳಗ್ಗೆ 11:45ಕ್ಕೆ ಪ್ರಮಾಣವಚನ ಸ್ವೀಕರಿಸುವುದು ಪಕ್ಕಾ ಆಗಿದೆ.


ಭದ್ರತೆಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ


ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಹಿನ್ನಲೆಯಲ್ಲಿ ರಾಜಭವನ ಸುತ್ತಮುತ್ತ ಬಿಗಿ ಪೊಲೀಸ್ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, 2 ಡಿಸಿಪಿ, 4 ಎಸಿಪಿ, 10 ಇನ್ಸ್ ಪೆಕ್ಟರ್ ಸೇರಿದಂತೆ ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಮಫ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಹೆಚ್ಚಿನ ಭದ್ರತೆಗೆ ಕೆಎಸ್​ಆರ್​ಪಿ, ಸಿಎಆರ್​ ತುಕಡಿಗಳ ನಿಯೋಜಿಸಲಾಗಿದೆ.
ರಾಜ್ಯ ರಾಜಕಾರಣದ ಚಂಡು ರಾಷ್ಟ್ರ ರಾಜಧಾನಿಗೆ ತಲುಪಿ 3 ದಿನ ಆಯ್ತು. ಪಟ್ಟಿ ಫೈನಲ್ ಮಾಡೋಕೆ ಸಿದ್ದು, ಡಿಕೆಶಿ, ಖರ್ಗೆ ಸೇರಿದಂತೆ ಕಾಂಗ್ರೆಸ್​ ವರಿಷ್ಠರು ಮೀಟಿಂಗ್ ಮೇಲೆ ಮೀಟಿಂಗ್ ಮಾಡಿ ಕಡೆಗೂ ಒಂದು ಪಟ್ಟಿ ತಯಾರು ಮಾಡಿದ್ದಾರೆ.


ನೂತನ ಸಚಿವರ ಪಟ್ಟಿ


ಯಾರಿಗೆ ಸಚಿವ ಸ್ಥಾನ?


ಸಿಎಂ ಸಿದ್ದರಾಮಯ್ಯ ಬಣದಿಂದ 14 ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು, ಭೈರತಿ ಸುರೇಶ್ (ಸಣ್ಣ ಕೈಗಾರಿಕೆ/ ಪೌರಾಡಳಿತ), ಕೆ.ವೆಂಕಟೇಶ್ (ಅರಣ್ಯ), ಕೃಷ್ಣ ಬೈರೇಗೌಡ (ಕೃಷಿ), ಡಾ.ಎಚ್.ಸಿ ಮಹದೇವಪ್ಪ (ಆರೋಗ್ಯ), ಶಿವರಾಜ ತಂಗಡಗಿ (ಯುವ ಸಬಲೀಕರಣ), ನಾಗೇಂದ್ರ (ಎಸ್​​ಟಿ ವಾಲ್ಮೀಕಿ),  ಕೆ.ಎನ್. ರಾಜಣ್ಣ (ಸಹಕಾರ), ಮಂಕಾಳ ವೈದ್ಯ (ಮೀನುಗಾರಿಕೆ), ಎಂ.ಬಿ ಪಾಟೀಲ್, ಜಮೀರ್ ಅಹ್ಮದ್ ಖಾನ್ (ವಕ್ಫ್), ಕೆ.ಜೆ ಜಾರ್ಜ್ (ಮೊದಲ ಲಿಸ್ಟ್), ಸತೀಶ್ ಜಾರಕಿಹೊಳಿ (ಮೊದಲ ಲಿಸ್ಟ್).


ಡಿಸಿಎಂ ಡಿ.ಕೆ. ಶಿವಕುಮಾರ್ ಬಣದಿಂದ ಲಕ್ಷ್ಮಿ ಹೆಬ್ಬಾಳ್ಕರ್ (ಮಹಿಳೆ), ಶಿವಾನಂದ ಪಾಟೀಲ್ (ಕನ್ನಡ ಸಂಸ್ಕೃತಿ), ಚಲುವರಾಯಸ್ವಾಮಿ (ಆಹಾರ), ಡಾ.ಎಂ.ಸಿ ಸುಧಾಕರ್, ಪಿ.ನರೇಂದ್ರಸ್ವಾಮಿ, ಎಚ್.ಕೆ. ಪಾಟೀಲ್ (ಗ್ರಾಮೀಣಾಭಿವೃದ್ಧಿ), ಮಧು ಬಂಗಾರಪ್ಪ, ಡಿ.ಸುಧಾಕರ್, ಭೋಸರಾಜು ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ.

top videos


  ಉಳಿದಂತೆ ಹೈಕಮಾಂಡ್ ನಿಂದ 10 ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು, ಈಶ್ವರ್‌ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್, ಶರಣಬಸಪ್ಪ ದರ್ಶನಾಪುರ, ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ. ಈಗಾಗಲೇ ಡಾ.ಜಿ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಹೆಚ್ ಮುನಿಯಪ್ಪ, ರಾಮಲಿಂಗಾರೆಡ್ಡಿ ಅವರು ಮಂತ್ರಿ ಪದವಿ ಪಡೆದುಕೊಂಡಿದ್ದಾರೆ.

  First published: