ಇಂದು ಸಂಪುಟ ವಿಸ್ತರಣೆ: 10 ಮಂದಿ ಪ್ರಮಾಣ ವಚನ; ಮೂಲ ಬಿಜೆಪಿಗರಿಗಿಲ್ಲ ಯಾವುದೇ ಸ್ಥಾನ

ಈ ಹಿಂದೆ  10 ಮಂದಿ ನೂತನ ಶಾಸಕರು ಮತ್ತು ಮೂವರು ಮೂಲ ಬಿಜೆಪಿಗರನ್ನು ಅಂದರೆ 10+3 ಫಾರ್ಮುಲ ಅಡಿಯಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿತ್ತು. ಉಪಚುನಾವಣೆಯಲ್ಲಿ ಸೋತ ಹೆಚ್. ವಿಶ್ವನಾಥ್‍ ಮತ್ತು ಎಂಟಿಬಿ ನಾಗರಾಜ್​​ಗೆ ಮಾತ್ರ ಸಚಿವ ಸ್ಥಾನದ ಭಾಗ್ಯ ಇಲ್ಲ ಎಂಬುದನ್ನು ಖಚಿತಪಡಿಸಲಾಗಿದೆ.

ಸಿಎಂ ಬಿ.ಎಸ್​. ಯಡಿಯೂರಪ್ಪ

ಸಿಎಂ ಬಿ.ಎಸ್​. ಯಡಿಯೂರಪ್ಪ

 • Share this:
  ಬೆಂಗಳೂರು(ಫೆ.06): ಕರ್ನಾಟಕ ವಿಧಾನಸಭಾ ಉಪಚುನಾವಣೆ ಫಲಿತಾಂಶ ಹೊರಬಿದ್ದ ಸುಮಾರು ಎರಡು ತಿಂಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ನೂತನ ಬಿಜೆಪಿ ಶಾಸಕರ ಭಾರೀ ಒತ್ತಡದ ನಂತರ ನಿರೀಕ್ಷೆಯಂತೆ ವಿಧಾನಸಭಾ ಜಂಟಿ ಅಧಿವೇಶನಕ್ಕೆ ಮುನ್ನವೇ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಇಂದು ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ಸಿಎಂ ಬಿ.ಎಸ್​​ ಯಡಿಯೂರಪ್ಪ ಸಂಪುಟಕ್ಕೆ 10 ಮಂದಿ ಸೇರಲಿದ್ದಾರೆ. ರಾಜ್ಯಪಾಲ ವಿ.ಆರ್. ವಾಲಾ ಅವರೇ ಖುದ್ದು ನೂತನ ಸಚಿವರಿಗೆ ಪ್ರಮಾಣ ವಚನ ಭೋದಿಸಲಿದ್ಧಾರೆ.

  ಸದ್ಯ ಮೂಲ ಬಿಜೆಪಿಗರು ಎಷ್ಟು ಮಂದಿ? ಉಪಚುನಾವಣೆಯಲ್ಲಿ ಗೆದ್ದ ಎಷ್ಟು ಶಾಸಕರು ಸಚಿವರಾಗಲಿದ್ದಾರೆ? ಎಂಬ ಗೊದಲಕ್ಕೀಗ ಸಿಎಂ ಬಿ.ಎಸ್​​ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಜತೆಗೆ ಕರ್ನಾಟಕ ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ 10 ಜನರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಸ್ಪಷ್ಟಪಡಿಸಿದರು. 11 ಶಾಸಕರಲ್ಲಿ ಶಾಸಕ ಮಹೇಶ್ ಕುಮಟಳ್ಳಿಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

  ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪಗಿಂತ ಮಗ ಬಿ. ವೈ ವಿಜಯೇಂದ್ರ ಪ್ರಭಾವಿ: ಹೇಗಂತೀರಾ? ಇಲ್ಲಿ ಓದಿ..

  ಈ ಹಿಂದೆ  10 ಮಂದಿ ನೂತನ ಶಾಸಕರು ಮತ್ತು ಮೂವರು ಮೂಲ ಬಿಜೆಪಿಗರನ್ನು ಅಂದರೆ 10+3 ಫಾರ್ಮುಲ ಅಡಿಯಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗಿತ್ತು. ಉಪಚುನಾವಣೆಯಲ್ಲಿ ಸೋತ ಹೆಚ್. ವಿಶ್ವನಾಥ್‍ ಮತ್ತು ಎಂಟಿಬಿ ನಾಗರಾಜ್​​ಗೆ ಮಾತ್ರ ಸಚಿವ ಸ್ಥಾನದ ಭಾಗ್ಯ ಇಲ್ಲ ಎಂಬುದನ್ನು ಖಚಿತಪಡಿಸಲಾಗಿದೆ.

  ಭಾವಿ ಸಚಿವರ ಪಟ್ಟಿ:

  1. ರಮೇಶ್ ಜಾರಕಿಹೊಳಿ (ಗೋಕಾಕ್)

  2. ಎಸ್.ಟಿ. ಸೋಮಶೇಖರ್ (ಯಶವಂತಪುರ)

  3. ಗೋಪಾಲಯ್ಯ (ಮಹಾಲಕ್ಷ್ಮೀಲೇಔಟ್)

  4. ಬೈರತಿ ಬಸವರಾಜು (ಕೆ.ಆರ್.ಪುರಂ)

  5. ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ)

  6. ಬಿ.ಸಿ.ಪಾಟೀಲ್ (ಹಿರೆಕೇರೂರು)

  7. ನಾರಾಯಣಗೌಡ (ಕೆ.ಆರ್.ಪೇಟೆ)

  8. ಶ್ರೀಮಂತ ಪಾಟೀಲ್ (ಕಾಗವಾಡ)

  9. ಶಿವರಾಮ ಹೆಬ್ಬಾರ್ (ಯಲ್ಲಾಪುರ)

  10. ಆನಂದಸಿಂಗ್ (ವಿಜಯನಗರ)


  First published: