Reservation Issue - ಶೇ. 50ಕ್ಕಿಂತ ಹೆಚ್ಚು ಮೀಸಲಾತಿಗೆ ಸುಪ್ರೀಂಗೆ ಪ್ರಮಾಣಪತ್ರ: ಸಚಿವ ಸಂಪುಟ ಒಪ್ಪಿಗೆ

ಕುರುಬರು, ವೀರಶೈವ ಲಿಂಗಾಯತರು, ವಾಲ್ಮೀಕಿ ಸಮುದಾಯದವರು ಮೀಸಲಾತಿ ಹೋರಾಟ ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸುವ ನಿಲುವಿಗೆ ಒಪ್ಪಿಗೆ ನೀಡಿದೆ. ಇಂದು ಸಂಜೆ ಸುಪ್ರೀಂಗೆ ಪ್ರಮಾಣಪತ್ರ ಸಲ್ಲಿಕೆಯಾಗಲಿದೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

  • Share this:
    ಬೆಂಗಳೂರು(ಮಾ. 22): ವಿವಿಧ ಪ್ರಮುಖ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಇದೀಗ ಶೇ. 50ಕ್ಕೆ ಸೀಮಿತವಾಗಿರುವ ಮೀಸಲಾತಿ ಪ್ರಮಾಣವನ್ನು ಇನ್ನಷ್ಟು ಹೆಚ್ಚು ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಶೇ. 50ಕ್ಕಿಂತ ಹೆಚ್ಚು ಮೀಸಲಾತಿಗೆ ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಿದ್ಧಪಡಿಸಿದೆ. ಅಡ್ವೊಕೇಟ್ ಜನರಲ್ ಸಿದ್ಧಪಡಿಸಿದ ಅಫಿಡವಿಟ್​ಗೆ ಇಂದು ರಾಜ್ಯ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಇಂದು ಸಂಜೆಯೊಳಗೆ ಸುಪ್ರೀಂ ಕೋರ್ಟ್​ಗೆ ಈ ಪ್ರಮಾಣ ಪತ್ರ ಸಲ್ಲಿಕೆಯಾಗಲಿದೆ.

    ಮೀಸಲಾತಿ ಹೆಚ್ಚಿಸುವ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದ್ದು, ಇಂದು ಸಂಜೆಯೊಳಗೆ ರಾಜ್ಯದ ನಿಲುವು ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಹೆಚ್ಚಿಸುವ ಪ್ರಮಾಣಪತ್ರಕ್ಕೆ ಒಪ್ಪಿಗೆ ನೀಡಲಾಗಿದೆ.

    ಬಹುತೇಕ ಹಿಂದುಳಿದ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಮುಂದಿಟ್ಟಿವೆ. ಇದಕ್ಕೆ ಪೂರಕವಾಗಿ ತೀರ್ಮಾನ ಮಾಡಬೇಕಾದರೆ ಮೀಸಲಾತಿ ಪ್ರಮಾಣ ಏರಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪ್ರಮಾಣಪತ್ರದಲ್ಲಿ ಕಾರಣ ನೀಡಲಾಗಿದೆ.

    ಇದನ್ನೂ ಓದಿ: ಕೋವಿಡ್ ನಿಯಮಗಳ ಕಡ್ಡಾಯ ಪಾಲನೆ; ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅನುದಾನ: ಸಚಿವ ಸಂಪುಟದಿಂದ ಕೈಗೊಂಡ ನಿರ್ಣಯಗಳು ಇವು

    ಕುರುಬ ಸಮುದಾಯವು ಎಸ್​ಸಿ ಎಸ್​ಟಿಗೆ ತಮ್ಮನ್ನು ಸೇರಿಸಬೇಕೆಂದು ಹೋರಾಟ ನಡೆಸುತ್ತಿದೆ. ಲಿಂಗಾಯತ ಸಮುದಾಯಗಳೂ ಕೂಡ ತಮ್ಮ ಎಲ್ಲಾ ಉಪಪಂಗಡಗಳನ್ನ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ಬೇಡಿಕೆ ಇಟ್ಟು ಹೋರಾಡುತ್ತಿವೆ. ವಾಲ್ಮೀಕಿ ಸಮುದಾಯ ಕೂಡ ಮೀಸಲಾತಿ ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಲು ಬೇಡಿಕೆ ಇಟ್ಟಿದೆ. ಇವುಗಳೊಟ್ಟಿಗೆ ಒಕ್ಕಲಿಗ ಸಮುದಾಯದವರೂ ಕೂಡ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ನಡೆಸಲು ತುದಿಗಾಲಿನಲ್ಲಿದ್ದಾರೆ. ಇರುವ ಶೇ 50ರ ಮೀಸಲಾತಿ ಚೌಕಟ್ಟಿನಲ್ಲಿ ಇವುಗಳನ್ನ ಸೇರಿಸಿದರೆ ಈಗಾಗಲೇ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಶೋಷಿತ ವರ್ಗಗಳಿಗೆ ಅನ್ಯಾಯವಾಗುತ್ತದೆ. ಹೀಗಾಗಿ, ಮೀಸಲಾತಿ ಮಿತಿಯನ್ನು ಏರಿಸುವುದು ಅನಿವಾರ್ಯವಾಗುತ್ತದೆ ಎಂಬುದು ರಾಜ್ಯ ಸರ್ಕಾರದ ವಾದ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಯಾವ ತೀರ್ಪು ನೀಡುತ್ತದೆ ಎಂಬುದು ಕೌತುಕದ ವಿಷಯ.
    Published by:Vijayasarthy SN
    First published: