• Home
 • »
 • News
 • »
 • state
 • »
 • Karnataka Cabinet: ಬೊಮ್ಮಾಯಿ ಕ್ಯಾಬಿನೆಟ್​ ಸೇರಿದ 29 ಸಚಿವರು; ಮಂತ್ರಿ ಸ್ಥಾನ ಗ್ಯಾರಂಟಿ ಅಂದ್ಕೊಂಡು ಮಿಸ್ ಆದವರಿವರು..!

Karnataka Cabinet: ಬೊಮ್ಮಾಯಿ ಕ್ಯಾಬಿನೆಟ್​ ಸೇರಿದ 29 ಸಚಿವರು; ಮಂತ್ರಿ ಸ್ಥಾನ ಗ್ಯಾರಂಟಿ ಅಂದ್ಕೊಂಡು ಮಿಸ್ ಆದವರಿವರು..!

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಹೊಸದಾಗಿ ಸಂಪುಟ ಸೇರಿರುವವರು 6 ಸಚಿವರು ಮಾತ್ರ. ಈ ಬಾರಿ ಸಿಎಂ ಬೊಮ್ಮಾಯಿ ಹಿರಿಯರು ಮತ್ತು ಹಳಬರಿಗೆ ಮಾತ್ರ ಮಣೆ ಹಾಕಿದ್ದಾರೆ.

 • Share this:

  ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಒಟ್ಟು 29 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಸಿಎಂ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಹೈ ಕಮಾಂಡ್​ ಭೇಟಿ ಮಾಡಿ ಸಚಿವರ ಪಟ್ಟಿ ಫೈನಲ್​​​ ಆದ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆ ಬಳಿಕ ಸಚಿವ ಸ್ಥಾನ ಫಿಕ್ಸ್ ಆಗಿರುವ ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸಿಎಂ ಒಟ್ಟು 29 ಶಾಸಕರಿಗೆ ಕರೆ ಮಾಡಿ ಸಚಿವ ಸ್ಥಾನ ನೀಡಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.


  ಪ್ರಮಾಣ ವಚನ ಸ್ವೀಕರಿಸಿದ ಸಚಿವರು


  1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ


  2.ಆರ್.ಅಶೋಕ್- ಪದ್ಮನಾಭ ನಗರ


  3.ಅರವಿಂದ ಲಿಂಬಾವಳಿ- ಮಹದೇವಪುರ


  4.ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ


  5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು


  6.ಉಮೇಶ್ ಕತ್ತಿ- ಹುಕ್ಕೇರಿ


  7.ಎಸ್.ಟಿ.ಸೋಮಶೇಖರ್- ಯಶವಂತಪುರ


  8.ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ


  9.ಬೈರತಿ‌ ಬಸವರಾಜ - ಕೆ ಆರ್ ಪುರಂ


  10.ಮುರುಗೇಶ್ ನಿರಾಣಿ - ಬಿಳಿಗಿ


  11.ಶಿವರಾಂ ಹೆಬ್ಬಾರ್- ಯಲ್ಲಾಪುರ


  12.ಶಶಿಕಲಾ ಜೊಲ್ಲೆ- ನಿಪ್ಪಾಣಿ


  13.ಕೆಸಿ ನಾರಾಯಣ್ ಗೌಡ - ಕೆ‌ಆರ್ ಪೇಟೆ


  14.ಸುನೀಲ್ ಕುಮಾರ್ - ಕಾರ್ಕಳ


  15.ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ


  16.ಗೋವಿಂದ ಕಾರಜೋಳ-ಮುಧೋಳ


  17.ಮುನಿರತ್ನ- ಆರ್ ಆರ್ ನಗರ


  18.ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ


  19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್


  20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ


  21.ಹಾಲಪ್ಪ ಆಚಾರ್ - ಯಲ್ಬುರ್ಗ


  22.ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ


  23.ಕೋಟಾ ಶ್ರೀನಿವಾಸ ಪೂಜಾರಿ - ಎಂ ಎಲ್ ಸಿ


  24.ಪ್ರಭು ಚೌವ್ಹಾಣ್ - ಔರಾದ್


  25.ವಿ ಸೋಮಣ್ಣ - ಗೋವಿಂದ್ ರಾಜನಗರ


  26 ಎಸ್ ಅಂಗಾರ-ಸುಳ್ಯ


  27 ಆನಂದ್ ಸಿಂಗ್ - ಹೊಸಪೇಟೆ


  28.ಸಿ ಸಿ‌ ಪಾಟೀಲ್ - ನರಗುಂದ


  29.ಬಿಸಿ ನಾಗೇಶ್ - ತಿಪಟೂರು

  ಹೊಸದಾಗಿ ಸಂಪುಟ ಸೇರಿರುವವರು 6 ಸಚಿವರು ಮಾತ್ರ. ಈ ಬಾರಿ ಸಿಎಂ ಬೊಮ್ಮಾಯಿ ಹಿರಿಯರು ಮತ್ತು ಹಳಬರಿಗೆ ಮಾತ್ರ ಮಣೆ ಹಾಕಿದ್ದಾರೆ.


  ಹೊಸ ಸಚಿವರು


  1. ಸುನೀಲ್ ಕುಮಾರ್ - ಕಾರ್ಕಳ


  2. ಅರಗ ಜ್ಞಾನೇಂದ್ರ - ತೀರ್ಥ ಹಳ್ಳಿ


  3. ಮುನಿರತ್ನ- ಆರ್ ಆರ್ ನಗರ


  4. ಹಾಲಪ್ಪ ಆಚಾರ್ - ಯಲ್ಬುರ್ಗ


  5. ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ


  6. ಬಿ.ಸಿ ನಾಗೇಶ್ - ತಿಪಟೂರು


  ಬೊಮ್ಮಾಯಿ ಸಂಪುಟದಲ್ಲಿ ಕೆಲವು ಶಾಸಕರನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗಿದೆ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಭಾರೀ ನಿರಾಸೆ ಉಂಟಾಗಿದೆ.  ಅರವಿಂದ್ ಲಿಂಬಾವಳಿ ಅವರು ಸಿಎಂ ರೇಸ್​ನಲ್ಲಿದ್ದರು. ಆದರೆ ಮಂತ್ರಿ ಸ್ಥಾನವೂ ಸಿಗದಿರುವುದು ಭಾರೀ ಬೇಸರ ತರಿಸಿದೆ.


  ಸಚಿವ ಸ್ಥಾನ ಕಳೆದುಕೊಂಡವರು


  • ಆರ್ ಶಂಕರ್

  • ಸಿಪಿ ಯೋಗೇಶ್ವರ್

  • ಅರವಿಂದ್ ಲಿಂಬಾವಳಿ

  • ಶ್ರೀಮಂತ ಪಾಟೀಲ್

  • ಸುರೇಶ್ ಕುಮಾರ್

  • ಜಗದೀಶ್ ಶೆಟ್ಟರ್

  • ಲಕ್ಷಣಸವದಿ  ಇನ್ನು  ಬಿಸ್​ ಯಡಿಯೂರಪ್ಪ ನೀಡಿದ್ದ ಲಿಸ್ಟ್​​​ಗೂ ಬಿಜೆಪಿ ಹೈಕಮಾಂಡ್​ ಮನ್ನಣೆ ಕೊಡಲಿಲ್ಲ.


  ಬಿಎಸ್​ವೈ ನೀಡಿದ್ದ ಪಟ್ಟಿ


  • ಎಂಪಿ ರೇಣುಕಾಚಾರ್ಯ

  • ಮಾಡಾಳು ವೀರೂಪಾಕ್ಷಪ್ಪ

  • ಹರತಾಳು ಹಾಲಪ್ಪ

  • ರಾಜೂಗೌಡ ನಾಯಕ್

  • ಎಂಪಿ ಕುಮಾರಸ್ವಾಮಿ

  • ಪ್ರೀತಂಗೌಡ

  • ಶಿವನಗೌಡ ನಾಯಕ್

  • ಬಾಲಚಂದ್ರ ಜಾರಕಿಹೊಳಿ

  • ತಿಪ್ಪಾರೆಡ್ಡಿ  ಈ ಬಾರಿ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ  ಪ್ರಾತಿನಿಧ್ಯ ಸಿಗಲಿಲ್ಲ.

  • ಮೈಸೂರು

  • ಕಲಬುರ್ಗಿ

  • ರಾಮನಗರ

  • ಕೊಡಗು

  • ರಾಯಚೂರು

  • ಹಾಸನ

  • ವಿಜಯಪುರ

  • ಬಳ್ಳಾರಿ

  • ದಾವಣಗೆರೆ

  • ಕೋಲಾರ

  • ಯಾದಗಿರಿ

  • ಚಿಕ್ಕಮಗಳೂರು


  ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ.

  ಈ ಬಾರಿ ಸಂಪುಟದಲ್ಲಿ ಡಿಸಿಎಂ ಅಂದ್ರೆ ಉಪಮುಖ್ಯಮಂತ್ರಿ ಸ್ಥಾನವನ್ನು ಕೈಬಿಡಲಾಗಿದೆ. ಡಿಸಿಎಂ ಹುದ್ದೆಗೆ ಕತ್ತರಿ ಹಾಕಿರುವ ಬಿಜೆಪಿ ಹೈಕಮಾಂಡ್, ಅನಗತ್ಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡಿದೆ. ಡಿಸಿಎಂ ಹುದ್ದೆ ವಿಚಾರದಲ್ಲಿ ತಾರತಮ್ಯ ಮಾಡುತ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿರಿಯ ಶಾಸಕರ ಅಸಮಾಧಾನಗೊಳ್ಳಲಿದ್ದಾರೆ. ಡಿಸಿಎಂ ಹುದ್ದೆಯಿಂದ ಯಾವುದೇ ಲಾಭವೂ ಇಲ್ಲ. ಹೆಸರಿಗಷ್ಟೆ ಡಿಸಿಎಂ ಹುದ್ದೆ. ಆದರೆ ಸಾಂವಿಧಾನಕ ಮನ್ನಣೆ ಇಲ್ಲ. ಅನಗತ್ಯ ಗೊಂದಲ ಸೃಷ್ಟಿ ಕಾರಣಕ್ಕೆ ಡಿಸಿಎಂ ಹುದ್ದೆ ರದ್ದು ಮಾಡಲಾಗಿದೆ.

  Published by:Latha CG
  First published: