ಇಂದು ಉಪಚುನಾವಣೆ ಫಲಿತಾಂಶ ಪ್ರಕಟ; ಅರ್ಹರಾ, ಅನರ್ಹರಾ ಬೆಳಿಗ್ಗೆ 11ಕ್ಕೆ ನಿರ್ಧಾರ

Karnataka Bypolls Results | ಉಪಚುನಾವಣೆಯ ಫಲಿತಾಂಶ, ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೂರು ಪಕ್ಷಗಳಿಗೂ ಬಹಳ ಮುಖ್ಯವಾಗಿದೆ. ಈ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಕ್ಷಿಪ್ರ ಬೆಳವಣಿಗೆಗೂ ಸಾಕ್ಷಿಯಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇದೇ ಚುನಾವಣೆ ಮೇಲೆ ನಿಂತಿದ್ದರೆ, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಬಂದರೆ ಹಾಲಿ ಸರ್ಕಾರ ಉರುಳಿಸಿ, ತಂತ್ರಗಾರಿಕೆ ಮೂಲಕ ಮತ್ತೆ ಸರ್ಕಾರ ರಚಿಸುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ.

HR Ramesh | news18-kannada
Updated:December 9, 2019, 6:32 AM IST
ಇಂದು ಉಪಚುನಾವಣೆ ಫಲಿತಾಂಶ ಪ್ರಕಟ; ಅರ್ಹರಾ, ಅನರ್ಹರಾ ಬೆಳಿಗ್ಗೆ 11ಕ್ಕೆ ನಿರ್ಧಾರ
ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ
 • Share this:
ಬೆಂಗಳೂರು: ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಡೆದಿದ್ದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಫಲಿತಾಂಶದ ಮೇಲೆ ಬಿಜೆಪಿ ಸರ್ಕಾರದ ಅಳಿವು-ಉಳಿವು ನಿಂತಿರುವುದರಿಂದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ.

ಅಥಣಿ, ಕಾಗವಾಡ, ಗೋಕಾಕ್‌, ಯಲ್ಲಾಪುರ, ಹಿರೇಕೆರೂರು, ರಾಣೇಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ಶಿವಾಜಿನಗರ, ಹೊಸಕೋಟೆ, ಕೆ.ಆರ್‌.ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆದಿತ್ತು. ಇಂದು ಬೆಳಗ್ಗೆ 7ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಮಧ್ಯಾಹ್ನದೊಳಗೆ ಯಾರಿಗೆ ಗೆಲುವಿನ ಹೂ ಮಾಲೆ, ಯಾರಿಗೆ ಸೋಲಿನ ಕಹಿ ಎಂಬುದು ಬಹುತೇಕ ತಿಳಿಯಲಿದೆ. ಮತ ಎಣಿಕೆಗೆ ರಾಜ್ಯ ಚುನಾವಣೆ ಆಯೋಗವೂ ಆಯಾ ತಾಲೂಕು ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆದಯಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹಾಗೂ ಗೆದ್ದ ಅಭ್ಯರ್ಥಿ ಪಟಾಕಿ ಸಿಡಿಸಲು ಹಾಗೂ ಸ್ಥಳದಲ್ಲಿ ಸಂಭ್ರಮಾಚರಿಸಲು ಅನುಮತಿ ನಿರಾರಿಸಿದೆ.

ಈ ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿಯ -15, ಕಾಂಗ್ರೆಸ್​ನ -15, ಜೆಡಿಎಸ್‌ -12, ಎನ್‌ಸಿಪಿ - 1, ಬಿಎಸ್‌ಪಿ 2, ನೋಂದಾಯಿತ ಪ್ರಾದೇಶಿಕ ಪಕ್ಷ - 45, ಪಕ್ಷೇತರ - 75 ಅಭ್ಯರ್ಥಿಗಳು ಸೇರಿದಂತೆ ಒಟ್ಟಾರೆ 165 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಇವರಲ್ಲಿ ಯಾರು ವಿಧಾನಸಭೆಗೆ ಪ್ರವೇಶ ಪಡೆಯಲಿದ್ದಾರೆ? ಹಾಗೂ ಉಪಚುನಾವಣೆಗೆ ಕಾರಣರಾಗಿರುವ ಅನರ್ಹರು, ಅರ್ಹರಾಗುತ್ತಾರಾ ಎಂಬುದು ಬೆಳಗ್ಗೆ 11 ಗಂಟೆ ಹೊತ್ತಿಗೆ ತಿಳಿಯಲಿದೆ.

ಅನರ್ಹರ ಆತಂಕವೇನು?

ಅನರ್ಹರಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಒಂದು ವೇಳೆ ಅವರು ಈ ಚುನಾವಣೆಯಲ್ಲಿ ಗೆದ್ದರಷ್ಟೇ ಅವರ ಮುಂದಿನ ರಾಜಕೀಯ ಹಾದಿ ಸುಗಮವಾಗಲಿದೆ. ಇಲ್ಲವಾದಲ್ಲಿ ಬಹುತೇಕ ಅವರ ರಾಜಕೀಯ ಜೀವನವೇ ಮಬ್ಬಾಗಲಿದೆ. ಇದರ ಜೊತೆಗೆ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದವರನ್ನು ಜನರು ಸೋಲಿಸಿರುವುದು ಅನರ್ಹರಲ್ಲಿ ಆತಂಕ ತಂದೊಡ್ಡಿದೆ. ಅದೇ ರೀತಿ ಇಲ್ಲಿಯೂ ಕೂಡ ಜನರು ತಮ್ಮನ್ನು ಸೋಲಿಸಿಬಿಟ್ಟರೆ ಮುಂದೇನು ಎಂಬ ಚಿಂತೆಯಲ್ಲಿ ಅನರ್ಹರು ಮುಳುಗಿದ್ದಾರೆ.

ಮೂರು ಪಕ್ಷಗಳಿಗೂ ಮುಖ್ಯವಾಗಿರುವ ಫಲಿತಾಂಶ

ಉಪಚುನಾವಣೆಯ ಫಲಿತಾಂಶ, ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಮೂರು ಪಕ್ಷಗಳಿಗೂ ಬಹಳ ಮುಖ್ಯವಾಗಿದೆ. ಈ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಯಾವ ರೀತಿಯ ಕ್ಷಿಪ್ರ ಬೆಳವಣಿಗೆಗೂ ಸಾಕ್ಷಿಯಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿ ಸರ್ಕಾರದ ಅಳಿವು-ಉಳಿವು ಇದೇ ಚುನಾವಣೆ ಮೇಲೆ ನಿಂತಿದ್ದರೆ, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಬಂದರೆ ಹಾಲಿ ಸರ್ಕಾರ ಉರುಳಿಸಿ, ತಂತ್ರಗಾರಿಕೆ ಮೂಲಕ ಮತ್ತೆ ಸರ್ಕಾರ ರಚಿಸುವ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಇದೇ ಯೋಚನೆಯಲ್ಲಿಯೇ ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡರು ಡಿಸೆಂಬರ್ 9ರ ನಂತರ ಭಾರೀ ಬದಲಾವಣೆಯಾಗಲಿದೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಇನ್ನು ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಈವರೆಗೂ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸದ ದಳ ಫಲಿತಾಂಶದ ಬಳಿಕ ಯಾವ ನಿರ್ಧಾರ ತಳೆಯಲಿದೆ ಎಂಬ ಕುತೂಹಲವೂ ಮೂಡಿದೆ.ಇದನ್ನು ಓದಿ: ಕರ್ನಾಟಕ ಉಪಚುನಾವಣೆ; 15 ಕ್ಷೇತ್ರಗಳಿಗೆ ಮತದಾನ; 165 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಡಿಸೆಂಬರ್ 5ರಂದು ನಡೆದ ಉಪಚುನಾವಣೆಯಲ್ಲಿ ಶೇ.67.9ರಷ್ಟು ಮತದಾನವಾಗಿತ್ತು.  ಅಥಣಿ, ಯಲ್ಲಾಪುರ, ಹಿರೇಕೆರೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪೇಟೆ ಹಾಗೂ ಹುಣಸೂರಿನಲ್ಲಿ ಶೇ.70ಕ್ಕಿಂತ ಅಧಿಕ ಮತದಾನವಾಗಿತ್ತು. ಉಳಿದಂತೆ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮತದಾನವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಶೇ.86.04 ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದ್ದರೆ, ಕೆ.ಆರ್.ಪುರಂನಲ್ಲಿ ಶೇ.37.05 ಕಡಿಮೆ ಪ್ರಮಾಣದ ಮತದಾನವಾಗಿತ್ತು.

ಅಥಣಿ, ಯಲ್ಲಾಪುರ, ಹಿರೇಕೆರೂರು, ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್.ಪೇಟೆ ಹಾಗೂ ಹುಣಸೂರಿನಲ್ಲಿ ಶೇ.80ಕ್ಕಿಂತ ಅಧಿಕ ಮತದಾನವಾಗಿದೆ. ಉಳಿದಂತೆ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚಿನ ಮತದಾನವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಶೇ.86.04 ಅತ್ಯಧಿಕ ಪ್ರಮಾಣದಲ್ಲಿ ಮತದಾನವಾಗಿದ್ದರೆ, ಕೆ.ಆರ್.ಪುರಂನಲ್ಲಿ ಶೇ.46.74 ಕಡಿಮೆ ಪ್ರಮಾಣದ ಮತದಾನವಾಗಿದೆ.

ಎಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿತ್ತು?

 1. ಅಥಣಿ- ಶೇ.75.37

 2. ಕಾಗವಾಡ- ಶೇ.76.24

 3. ಗೋಕಾಕ್- ಶೇ.73.03

 4. ಯಲ್ಲಾಪುರ- ಶೇ.77.53

 5. ಹಿರೇಕೆರೂರು- ಶೇ.79.03

 6. ರಾಣೇಬೆನ್ನೂರು- ಶೇ.73.93

 7. ವಿಜಯನಗರ- ಶೇ.65.02

 8. ಚಿಕ್ಕಬಳ್ಳಾಪುರ- ಶೇ.86.84

 9. ಕೆ.ಆರ್ ಪುರಂ- ಶೇ.46.74

 10. ಯಶವಂತಪುರ- ಶೇ.59.10

 11. ಮಹಾಲಕ್ಷ್ಮಿ ಲೇಔಟ್- ಶೇ.51.21

 12. ಶಿವಾಜಿನಗರ- ಶೇ.48.05

 13. ಹೊಸಕೋಟೆ- ಶೇ.90.90

 14. ಕೆ.ಆರ್ ಪೇಟೆ- ಶೇ.80.52

 15. ಹುಣಸೂರು- ಶೇ.80.59


First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ