ಇಂದು ಕರ್ನಾಟಕ ಉಪಚುನಾವಣೆ ಫಲಿತಾಂಶ; ನಿಜವಾಗುತ್ತಾ ಸಿವೋಟರ್​​ ಮತಗಟ್ಟೆ ಸಮೀಕ್ಷೆ?

Karnataka ByElection Results 2019: ಸಿವೋಟರ್​​​ ಸೇರಿದಂತೆ ಹಲವು ಮಾಧ್ಯಮಗಳು ತಾ ಮುಂದು ನಾ ಮುಂದು ಎನ್ನುವಂತೆ ಸ್ಪರ್ಧೆಗೆ ಬಿದ್ದು ರಾಜ್ಯದ 15 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ಭವಿಷ್ಯ ನುಡಿದು ಬಿಟ್ಟಿವೆ. ಇವರ ಸಮೀಕ್ಷೆಯಂತೆ ಬಿಜೆಪಿ ರಾಜ್ಯದ 15 ಕ್ಷೇತ್ರಗಳ ಪೈಕಿ ಬಹುತೇಕ ಸೀಟುಗಳು ಗೆಲ್ಲಲಿದೆ ಎಂಬುದು ಸಾರಾಂಶ.

news18-kannada
Updated:December 9, 2019, 6:38 AM IST
ಇಂದು ಕರ್ನಾಟಕ ಉಪಚುನಾವಣೆ ಫಲಿತಾಂಶ; ನಿಜವಾಗುತ್ತಾ ಸಿವೋಟರ್​​ ಮತಗಟ್ಟೆ ಸಮೀಕ್ಷೆ?
ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ.
 • Share this:
ಬೆಂಗಳೂರು(ಡಿ.09): ಕರ್ನಾಟಕ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗ ಎಲ್ಲರ ದೃಷ್ಟಿಯಂತೂ ಫಲಿತಾಂಶದ ಮೇಲೆ ನೆಟ್ಟಿದೆ. ಈಗಾಗಲೇ ಸಿವೋಟರ್​​​ ಸೇರಿದಂತೆ ಹಲವು ಮಾಧ್ಯಮಗಳು ತಾ ಮುಂದು ನಾ ಮುಂದು ಎನ್ನುವಂತೆ ಸ್ಪರ್ಧೆಗೆ ಬಿದ್ದು ರಾಜ್ಯದ 15 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ಭವಿಷ್ಯ ನುಡಿದು ಬಿಟ್ಟಿವೆ. ಇವರ ಸಮೀಕ್ಷೆಯಂತೆ ಬಿಜೆಪಿ ರಾಜ್ಯದ 15 ಕ್ಷೇತ್ರಗಳ ಪೈಕಿ ಬಹುತೇಕ ಸೀಟುಗಳು ಗೆಲ್ಲಲಿದೆ ಎಂಬುದು ಸಾರಾಂಶ. ಹಾಗಾದರೆ ಇದು ನಿಜಕ್ಕೂ ನಿಜವಾಗುತ್ತಾ ಅಥವಾ ಸಮೀಕ್ಷೆ ಹುಸಿಯಾಗುತ್ತಾ ಎನ್ನುವುದೀಗ ಯಕ್ಷ ಪ್ರಶ್ನೆ. ಇಂತಹ ಎಲ್ಲ ಪ್ರಶ್ನೆಗಳು ಮತ್ತು ಕುತೂಹಲಗಳು ಕರ್ನಾಟಕ ಉಪಚುನಾವಣೆ ಸುತ್ತ ಗಿರಕಿ ಹೊಡೆಯುತ್ತಿವೆ. ಆದರೆ ಈ ಎಲ್ಲ ಪ್ರಶ್ನೆಗಳಿಗೆ ಇಂದು ನಡೆಯುವ ಮತ ಎಣಿಕೆ ಮಾತ್ರ ಉತ್ತರ ನೀಡಬಲ್ಲದು ಎನ್ನುವುದು ವಾಸ್ತವ.

ಹೌದು, ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ಈ ಉಪಚುನಾವಣೆ ಫಲಿತಾಂಶದ ಮೇಲೆ ನಿಂತಿದೆ. ಡಿಸೆಂಬರ್​​ 5ನೇ ತಾರೀನಂದು ರಾಜ್ಯದ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಶೇ.67.90 ದಾಖಲಾಗಿದೆ. ಸಿವೋಟರ್ ಚುನಾವಣೋತ್ತರ ಸಮೀಕ್ಷೆ ಭವಿಷ್ಯದಂತೆ ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಸರ್ಕಾರ ಸೇಫ್​​ ಎನ್ನಲಾಗುತ್ತಿದೆ. ಬಿಜೆಪಿಗೆ 9- 12, ಕಾಂಗ್ರೆಸ್‌ಗೆ 3-6 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಹಾಗಾಗಿ ಒಂದು ವೇಳೆ ಸಮೀಕ್ಷೆ ನಿಜವಾದರೆ, ಕಾಂಗ್ರೆಸ್​​-ಜೆಡಿಎಸ್​ ಮರುಮೈತ್ರಿ ಕನಸು ಭಗ್ನಗೊಂಡತೆ. ಈ ಸಮೀಕ್ಷೆಯೂ ಹುಸಿಯಾಗಿ ಕಾಂಗ್ರೆಸ್​ ಬಹುತೇಕ ಸೀಟುಗಳು ಗೆದ್ದರೆ, ಜೆಡಿಎಸ್​​ನ ಮುಂದಿನ ನಡೆಯೇನು ಎಂಬುದೀಗ ಕುತೂಹಲ.

ಹೀಗಿದೆ ಸಿವೋಟರ್ ಸಮೀಕ್ಷೆ:


 • ಬಿಜೆಪಿ 9-12

 • ಕಾಂಗ್ರೆಸ್ 3-6

 • ಜೆಡಿಎಸ್ 0-1
 • ಇತರರು 0-1


ಕ್ಷೇತ್ರವಾರು ಗೆಲುವು ಹೀಗಿದೆ:

 • ಹೊಸಕೋಟೆ- ಬಿಜೆಪಿ

 • ವಿಜಯನಗರ- ಬಿಜೆಪಿ

 • ಕಾಗವಾಡ- ಬಿಜೆಪಿ

 • ಹಿರೇಕೆರೂರು- ಬಿಜೆಪಿ

 • ಮಹಾಲಕ್ಷ್ಮೀ ಲೇಔಟ್- ಬಿಜೆಪಿ

 • ಯಶವಂತಪುರ- ಬಿಜೆಪಿ

 • ಕೆ. ಆರ್ ಪುರಂ- ಬಿಜೆಪಿ

 • ಗೋಕಾಕ್- ಬಿಜೆಪಿ

 • ಅಥಣಿ- ಬಿಜೆಪಿ

 • ರಾಣೆಬೆನ್ನೂರು- ಬಿಜೆಪಿ/ಕಾಂಗ್ರೆಸ್

 • ಚಿಕ್ಕಬಳ್ಳಾಪುರ- ಬಿಜೆಪಿ/ಕಾಂಗ್ರೆಸ್

 • ಶಿವಾಜಿನಗರ- ಬಿಜೆಪಿ/ಕಾಂಗ್ರೆಸ್

 • ಕೆಆರ್ ಪೇಟೆ- ಕಾಂಗ್ರೆಸ್/ಜೆಡಿಎಸ್

 • ಯಲ್ಲಾಪುರ- ಕಾಂಗ್ರೆಸ್

 • ಕೆಆರ್ ಪುರ- ಕಾಂಗ್ರೆಸ್

 • ಹುಣಸೂರು- ಕಾಂಗ್ರೆಸ್


ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ; ಸಿವೋಟರ್​​ ಸಮೀಕ್ಷೆ ಪ್ರಕಟ; ಬಿಜೆಪಿಗೆ ಮೇಲುಗೈ, ಕಾಂಗ್ರೆಸ್​​-ಜೆಡಿಎಸ್​​ಗೆ ಭಾರೀ ಮುಖಭಂಗ
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ