ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ; ಇಲ್ಲಿದೆ ಮೂರೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ

ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನ. 19ರಂದು ನಾಮಪತ್ರ ಪರಿಶೀಲನೆಯಾಗುತ್ತದೆ. ನ. 21, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿ. 9ರಂದು ಫಲಿತಾಂಶ ಪ್ರಕಟವಾಗುತ್ತದೆ.

news18
Updated:November 18, 2019, 7:19 AM IST
ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ; ಇಲ್ಲಿದೆ ಮೂರೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ
ಸಾಂದರ್ಭಿಕ ಚಿತ್ರ
  • News18
  • Last Updated: November 18, 2019, 7:19 AM IST
  • Share this:
ಬೆಂಗಳೂರು(ನ. 18): ಹಲವು ದಿನಗಳಿಂದ ಕುತೂಹಲ ಮೂಡಿಸುತ್ತಿರುವ 15 ಕ್ಷೇತ್ರಗಳ ಉಪಸಮರ ಇಂದು ಕ್ಲೈಮ್ಯಾಕ್ಸ್ ಹಂತ ಮುಟ್ಟಿದೆ. ಡಿಸೆಂಬರ್ 5ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಎಲ್ಲಾ ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾಗಿದೆ. ಜೆಡಿಎಸ್ ಮಹಾಲಕ್ಷ್ಮೀ ಲೇಔಟ್ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳನ್ನ ಹೊರತುಪಡಿಸಿ ಉಳಿದ ಕಡೆ ಅಭ್ಯರ್ಥಿಗಳನ್ನು ಹೆಸರಿಸಿದೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಬೆಮೆಲ್ ಕಾಂತರಾಜು ಅಥವಾ ಗಿರೀಶ್ ನಾಶಿ ಅವರಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಗೊಂದಲ್ಲಿರುವ ಜೆಡಿಎಸ್ ವರಿಷ್ಠರು ಇಂದು ನಿರ್ಧಾರ ಕೈಗೊಳ್ಳಲಿದ್ದಾರೆ..

ಮೂರು ಪಕ್ಷಗಳ ಬಹುತೇಕ ಅಭ್ಯರ್ಥಿಗಳು ಇಂದೇ ನಾಮಪತ್ರ ಸಲ್ಲಿಸುತ್ತಿದ್ಧಾರೆ. ಹೊಸಕೋಟೆಯಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್, ಗೋಕಾಕ್​ನಲ್ಲಿ ಜಾರಕಿಹೊಳಿ ಬ್ರದರ್ಸ್ ಮತ್ತು ಜೆಡಿಎಸ್ ಟಿಕೆಟ್​ನಿಂದ ಅಶೋಕ್ ಪೂಜಾರಿ; ಶಿವಾಜಿನಗರದಲ್ಲಿ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ಮೊದಲಾದವರು ಇಂದು ನಾಮಪತ್ರ ಸಲ್ಲಿಸುತ್ತಿರುವವರಲ್ಲಿ ಪ್ರಮುಖರು. ಶಿವಾಜಿನಗರದಲ್ಲಿ ರೋಷನ್ ಬೇಗ್ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಇಲ್ಲವೋ ಎಂಬುದು ಇವತ್ತೇ ನಿಶ್ಚಿತವಾಗಲಿದೆ. ಹಾಗೆಯೇ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಶಿವಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್​​​ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಅಥಣಿ ಕ್ಷೇತ್ರದ ಮತದಾರರ ಆಗ್ರಹ: ಉಪಚುನಾವಣೆ ಬಹಿಷ್ಕಾರ

ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನ. 19ರಂದು ನಾಮಪತ್ರ ಪರಿಶೀಲನೆಯಾಗುತ್ತದೆ. ನ. 21, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದ್ದು, ಡಿ. 9ರಂದು ಫಲಿತಾಂಶ ಪ್ರಕಟವಾಗುತ್ತದೆ.

15 ಕ್ಷೇತ್ರಗಳಿಗೆ ಇಲ್ಲಿಯವರೆಗೆ ಅಂತಿಮಗೊಂಡಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ:

1) ಅಥಣಿ:
ಬಿಜೆಪಿ: ಮಹೇಶ್ ಕುಮಟಳ್ಳಿಕಾಂಗ್ರೆಸ್: ಜಿ.ಬಿ. ಮಂಗಸೂಳಿ
ಜೆಡಿಎಸ್:

2) ಕಾಗವಾಡ:
ಬಿಜೆಪಿ: ಶ್ರೀಮಂತಗೌಡ ಪಾಟೀಲ್
ಕಾಂಗ್ರೆಸ್: ರಾಜು ಕಾಗೆ
ಜೆಡಿಎಸ್:

3) ಗೋಕಾಕ್:
ಬಿಜೆಪಿ: ರಮೇಶ್ ಜಾರಕಿಹೊಳಿ
ಕಾಂಗ್ರೆಸ್: ಲಖನ್ ಜಾರಕಿಹೊಳಿ
ಜೆಡಿಎಸ್: ಅಶೋಕ್ ಪೂಜಾರಿ

4) ಯಲ್ಲಾಪುರ:
ಬಿಜೆಪಿ: ಶಿವರಾಮ್ ಹೆಬ್ಬಾರ್
ಕಾಂಗ್ರೆಸ್: ಭೀಮಣ್ಣ ನಾಯ್ಕ
ಜೆಡಿಎಸ್: ಚೈತ್ರಾ ಗೌಡ

5) ಹಿರೇಕೆರೂರ:
ಬಿಜೆಪಿ: ಬಿ.ಸಿ. ಪಾಟೀಲ್
ಕಾಂಗ್ರೆಸ್: ಬಿ.ಹೆಚ್. ಬನ್ನಿಕೋಡ್
ಜೆಡಿಎಸ್: ಅಂಜಪ್ಪ ಜತ್ತಪ್ಪ ಕೋಡಿಹಳ್ಳಿ

6) ವಿಜಯನಗರ:
ಬಿಜೆಪಿ: ಆನಂದ್ ಸಿಂಗ್
ಕಾಂಗ್ರೆಸ್: ವಿ.ವೈ. ಘೋರ್ಪಡೆ
ಜೆಡಿಎಸ್: ಎನ್.ಎಂ. ನಬಿ

7) ಚಿಕ್ಕಬಳ್ಳಾಪುರ:
ಬಿಜೆಪಿ: ಡಾ. ಕೆ. ಸುಧಾಕರ್
ಕಾಂಗ್ರೆಸ್: ಎಂ. ಅಂಜನಪ್ಪ
ಜೆಡಿಎಸ್: ಕೆ.ಪಿ. ಬಚ್ಚೇಗೌಡ

8) ಕೆಆರ್ ಪುರ:
ಬಿಜೆಪಿ: ಭೈರತಿ ಬಸವರಾಜು
ಕಾಂಗ್ರೆಸ್: ಎಂ. ನಾರಾಯಣಸ್ವಾಮಿ
ಜೆಡಿಎಸ್: ಸಿ. ಕೃಷ್ಣಮೂರ್ತಿ

9) ಯಶವಂತಪುರ:
ಬಿಜೆಪಿ: ಎಸ್.ಟಿ. ಸೋಮಶೇಖರ್
ಕಾಂಗ್ರೆಸ್: ಪಿ. ನಾಗರಾಜ್
ಜೆಡಿಎಸ್: ಟಿಎನ್ ಜವರಾಯಿ ಗೌಡ

10) ಮಹಾಲಕ್ಷ್ಮೀ ಲೇಔಟ್:
ಬಿಜೆಪಿ: ಕೆ. ಗೋಪಾಲಯ್ಯ
ಕಾಂಗ್ರೆಸ್: ಎಂ. ಶಿವರಾಜು
ಜೆಡಿಎಸ್: ಬೆಮೆಲ್ ಕಾಂತರಾಜು / ಗಿರೀಶ್ ಕೆ. ನಾಶಿ
ಪಕ್ಷೇತರ: ವಾಟಾಳ್ ನಾಗರಾಜ್

11) ಹೊಸಕೋಟೆ:
ಬಿಜೆಪಿ: ಎಂಟಿಬಿ ನಾಗರಾಜ್
ಕಾಂಗ್ರೆಸ್: ಪದ್ಮಾವತಿ ಸುರೇಶ್
ಪಕ್ಷೇತರ: ಶರತ್ ಬಚ್ಚೇಗೌಡ

12) ಕೆಆರ್ ಪೇಟೆ:
ಬಿಜೆಪಿ: ನಾರಾಯಣಗೌಡ
ಕಾಂಗ್ರೆಸ್: ಕೆ.ಬಿ. ಚಂದ್ರಶೇಖರ್
ಜೆಡಿಎಸ್: ಬಿ.ಎಲ್. ದೇವರಾಜ್

13) ಹುಣಸೂರು:
ಬಿಜೆಪಿ: ಹೆಚ್. ವಿಶ್ವನಾಥ್
ಕಾಂಗ್ರೆಸ್: ಹೆಚ್.ಪಿ. ಮಂಜುನಾಥ್
ಜೆಡಿಎಸ್: ಸೋಮಶೇಖರ್

14) ಶಿವಾಜಿನಗರ:
ಬಿಜೆಪಿ: ಕೆ. ಶರವಣ
ಕಾಂಗ್ರೆಸ್: ರಿಜ್ವಾನ್ ಅರ್ಷದ್
ಜೆಡಿಎಸ್: ತನ್ವೀರ್ ಅಹ್ಮದ್
ಪಕ್ಷೇತರ: ವಾಟಾಳ್ ನಾಗರಾಜ್
ಪಕ್ಷೇತರ: ರೋಷನ್ ಬೇಗ್

15) ರಾಣೆಬೆನ್ನೂರು:
ಬಿಜೆಪಿ: ಅರುಣ್ ಕುಮಾರ್ ಪೂಜಾರ
ಕಾಂಗ್ರೆಸ್: ಕೆ.ಬಿ. ಕೋಳಿವಾಡ
ಜೆಡಿಎಸ್: ಮಲ್ಲಿಕಾರ್ಜುನ ಖೂಬಾ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ