ಕುಂದಗೋಳ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕಾರ; 23 ಪೈಕಿ 22 ಕ್ರಮಬದ್ಧ

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಶಿವಳ್ಳಿ ಅವರು ಬಿಜೆಪಿಯ ಚಿಕ್ಕನಗೌಡ್ರ ವಿರುದ್ಧ 634 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.

Ganesh Nachikethu | news18
Updated:April 30, 2019, 6:49 PM IST
ಕುಂದಗೋಳ ಉಪಚುನಾವಣೆ: ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕಾರ; 23 ಪೈಕಿ 22 ಕ್ರಮಬದ್ಧ
ಚುನಾವಣಾ ಆಯುಕ್ತ ಸಂಜೀವ್ ಕುಮಾರ್
 • News18
 • Last Updated: April 30, 2019, 6:49 PM IST
 • Share this:
ಬೆಂಗಳೂರು(ಏ.30): ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ಇಂದು ನಡೆಸಲಾಗಿದೆ. ರಾಜ್ಯ ಚುನಾವಣೆ ಆಯೋಗ ಸಲ್ಲಿಕೆಯಾಗಿದ್ದ ಒಟ್ಟು 23 ನಾಮಪತ್ರಗಳ ಪರಿಶೀಲಿಸಿದೆ. 23 ನಾಮಪತ್ರಗಳ ಪೈಕಿ ಒಂದನ್ನು ತಿರಸ್ಕರಿಸಿ 22 ಕ್ರಮಬದ್ಧವಾಗಿದೆ ಎಂದು ತಿಳಿಸಿದೆ.

ಬಿಜೆಪಿಯಿಂದ ಸಿ.ಎಸ್​​ ಚಿಕ್ಕನಗೌಡ, ಕಾಂಗ್ರೆಸ್‌ನಿಂದ ಕುಸುಮಾ ಶಿವಳ್ಳಿ ಸೇರಿದಂತೆ ಒಟ್ಟು 23 ಅಭ್ಯರ್ಥಿಗಳು ಕುಂದಗೋಳದಲ್ಲಿ ನಾಮಪತ್ರ ಸಲ್ಲಿಸಿದ್ದರು. ಇಂದು ಈ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು, ಪಕ್ಷೇತರ ಅಭ್ಯರ್ಥಿ ದಯಾನಂದ ಚಿಕ್ಕಮಠ ಎಂಬುವರ ನಾಮಪತ್ರ ತಿರಸ್ಕರಿಸಿದ್ದಾರೆ.

ದಯಾನಂದ ಚಿಕ್ಕಮಠ ಇಲ್ಲಿನ ಬೈಲಹೊಂಗಲ ತಾಲೂಕಿನ ನಿವಾಸಿ. ನಾಮಪತ್ರ ಅರ್ಜಿ ಸಲ್ಲಿಕೆ ವೇಳೆ ತಮ್ಮ ಗುರುತಿನ ಚೀಟಿ ಬಗೆಗಿನ ಪ್ರಮಾಣೀಕೃತ ಪ್ರತಿಯನ್ನು ನೀಡಿರಲಿಲ್ಲ. ಬೈಲಹೊಂಗಲ ಚುನಾವಣಾಧಿಕಾರಿಗಳಿಂದ ಪ್ರಮಾಣೀಕೃತ ಪ್ರತಿ ಪಡೆದು ಸಲ್ಲಿಸಿರಲಿಲ್ಲ. ಹಾಗಾಗಿ ನಾಮಪತ್ರ ತಿರಸ್ಕಾರವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕುಂದಗೋಳ- ಚಿಂಚೋಳಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳು ಅಂತಿಮ; ಕಾಂಗ್ರೆಸ್​​ ಕಸರತ್ತು

ಇನ್ನು ಕುಂದಗೋಳ ಉಪಚುನಾವಣೆಗೆ 23 ಅಭ್ಯರ್ಥಿಗಳು ಸಲ್ಲಿಸಿದ್ದ ನಾಮತ್ರಗಳ ಪೈಕಿ 22 ಮಾತ್ರ ಕ್ರಮಬದ್ಧವಾಗಿವೆ. ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆಯಲು ಮೇ 2ನೇ ತಾರೀಖು ಕೊನೆಯ ದಿನವಾಗಿದೆ. ಬಳಿಕ ಎಷ್ಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ? ಎಂಬುದು ಅಂತಿಮವಾಗಲಿದೆ.

ಮೇ 19ರಂದು ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗುತ್ತದೆ. ಸಚಿವರಾಗಿದ್ದ ಸಿ.ಎಸ್. ಶಿವಳ್ಳಿಯವರ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಹಾಗೂ ಬಿ.ಎಸ್​. ಯಡಿಯೂರಪ್ಪ ಅವರ ಸಂಬಂಧಿ ಎಸ್.ಐ. ಚಿಕ್ಕನಗೌಡರ್, ಕಾಂಗ್ರೆಸ್​ನಿಂದ ಸಿ.ಎಸ್​. ಶಿವಳ್ಳಿಯವರ ಪತ್ನಿ ಕುಸುಮಾವತಿ ಶಿವಳ್ಳಿ ಕಣದಲ್ಲಿದ್ದಾರೆ.

ಇದನ್ನೂ ಓದಿ: ಆಂಧ್ರದಲ್ಲಿ ಐಪಿಎಲ್​​ ಜತೆಗೆ ಎಲೆಕ್ಷನ್​​​ ಬೆಟ್ಟಿಂಗ್ ಜೋರು; ಗೆಲ್ಲುವ ಕ್ಷೇತ್ರಗಳ ಮೇಲೆ ಹಣದ ಹೊಳೆಯನ್ನೇ ಹರಿಸುತ್ತಿರುವ ಜನಸೇನಾ2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಶಿವಳ್ಳಿ ಅವರು ಬಿಜೆಪಿಯ ಚಿಕ್ಕನಗೌಡ್ರ ವಿರುದ್ಧ 634 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು.
------------
First published:April 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres