ವಿಜಯನಗರ, ಯಶವಂತಪುರ, ಅಥಣಿ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ

ಕಾಗವಾಡದಲ್ಲಿ ಬಿಜೆಪಿಯಿಂದ ಪಕ್ಷಾಂತವಾದ ರಾಜು ಕಾಗೆ ಅವರು ಸ್ಪರ್ಧಿಸುವುದು ನಿಶ್ಚಿತವಾಗಿದೆ. ಗೋಕಾಕ್​ನಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ. ಶಿವಾಜಿನಗರದಲ್ಲಿ ಸಲೀಂ ಅಹ್ಮದ್ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.

news18
Updated:November 14, 2019, 12:58 PM IST
ವಿಜಯನಗರ, ಯಶವಂತಪುರ, ಅಥಣಿ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿಗಳ ಕೊರತೆ
ಪ್ರಿಯಾಕೃಷ್ಣ
  • News18
  • Last Updated: November 14, 2019, 12:58 PM IST
  • Share this:
ಬೆಂಗಳೂರು(ನ. 14): ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 18, ಅಂದರೆ ಸೋಮವಾರವೇ ಕೊನೆಯ ದಿನವಾಗಿದೆ. ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ. ಇನ್ನೂ ಮೂರ್ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ದೊಡ್ಡ ತಲೆನೋವು ಎದುರಾಗಿಲ್ಲ. ಆದರೆ, ಅಥಣಿ, ವಿಜಯನಗರ ಮತ್ತು ಯಶವಂತಪುರ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಅಕ್ಷರಶಃ ತಲೆನೋವು ತಂದಿದೆ. ಇಲ್ಲಿ ಹಲವು ಸಂಭಾವ್ಯ ಅಭ್ಯರ್ಥಿಗಳನ್ನು ಆರಿಸಿಟ್ಟಿದ್ದರೂ ಯಾರೂ ಕೂಡ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕ್ಷಣದವರೆಗೂ ಕಾಂಗ್ರೆಸ್ ನಾಯಕರು ಈ ಮೂರು ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟದಲ್ಲೇ ತೊಡಗಿಸಿಕೊಂಡಿದ್ಧಾರೆ.

ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಸಂಭಾವ್ಯ ಅಭ್ಯರ್ಥಿಗಳೂ ಸಿಗುತ್ತಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಸಂತೋಷ್ ಲಾಡ್ ಅವರನ್ನು ನಿಲ್ಲಸಲು ನಿರ್ಧರಿಸಲಾಗಿತ್ತು. ಆದರೆ, ಲಾಡ್ ಅದೇಕೋ ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಿ.ವೈ. ಘೋರ್ಪಡೆ ಅವರನ್ನು ವಿಜಯನಗರದಿಂದ ಸ್ಪರ್ಧಿಸುವಂತೆ ಒತ್ತಡ ಹಾಕಲಾಗುತ್ತಿದೆ. ಆದರೆ, ಘೋರ್ಪಡೆ ಸ್ಪರ್ಧಿಸಲು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಇದನ್ನೂ ಓದಿ: ರೋಷನ್​ ಬೇಗ್​, ಎಂಟಿಬಿ ಹೊರತುಪಡಿಸಿ ಉಳಿದ 15ಅನರ್ಹರು ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಯಶವಂತಪುರದಲ್ಲಿ ಪ್ರಿಯಕೃಷ್ಣ ಅವರು ನಿಲ್ಲುವುದು ಬಹುತೇಕ ಖಚಿತ ಎನ್ನಲಾಗುತ್ತಿತ್ತು. ಆದರೆ, ಅವರೂ ಕೂಡ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಪ್ರಿಯಕೃಷ್ಣ ಒಲ್ಲೆ ಎನ್ನುತ್ತಿರುವಂತೆಯೇ ಮಾಜಿ ಶಾಸಕ ದಿವಂಗತ ಸ್ಲಂ ರಮೇಶ್ ಅವರ ಪತ್ನಿ ಅವರು ಟಿಕೆಟ್​ಗಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಇವರನ್ನು ನಿಲ್ಲಿಸಲು ಪಕ್ಷ ಹಿಂದೇಟು ಹಾಕುತ್ತಿದೆ.

ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿರುವ ಅಭ್ಯರ್ಥಿಗಳು:
1) ಯಲ್ಲಾಪುರ: ಭೀಮಣ್ಣ ನಾಯ್ಕ್
2) ಹಿರೇಕೆರೂರು: ಬಿಎಚ್ ಬನ್ನಿಕೋಡ3) ರಾಣೆಬೆನ್ನೂರು: ಕೆ.ಬಿ. ಕೋಳಿವಾಡ
4) ಚಿಕ್ಕಬಳ್ಳಾಪುರ: ಎಂ. ಆಂಜನಪ್ಪ
5) ಕೆಆರ್ ಪುರಂ: ಎಂ. ನಾರಾಯಣಸ್ವಾಮಿ
6) ಮಹಾಲಕ್ಷ್ಮೀ ಲೇಔಟ್: ಎಂ. ಶಿವರಾಜ್
7) ಹೊಸಕೋಟೆ: ಪದ್ಮಾವತಿ ಸುರೇಶ್
8) ಹುಣಸೂರು: ಹೆಚ್.ಪಿ. ಮಂಜುನಾಥ್

ಕಾಗವಾಡದಲ್ಲಿ ಬಿಜೆಪಿಯಿಂದ ಪಕ್ಷಾಂತವಾದ ರಾಜು ಕಾಗೆ ಅವರು ಸ್ಪರ್ಧಿಸುವುದು ನಿಶ್ಚಿತವಾಗಿದೆ. ಗೋಕಾಕ್​ನಲ್ಲಿ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡಿದ್ದಾರೆ. ಶಿವಾಜಿನಗರದಲ್ಲಿ ಸಲೀಂ ಅಹ್ಮದ್ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಈಗ ತಲೆನೋವಾಗಿ ಉಳಿದಿರುವುದು ಅಥಣಿ, ವಿಜಯನಗರ ಮತ್ತು ಯಶವಂತಪುರ ಕ್ಷೇತ್ರಗಳು ಮಾತ್ರ.)

(ವರದಿ: ಚಿದಾನಂದ ಪಟೇಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 14, 2019, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading