Karnataka Bypolls Results 2019: ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು; ರಮೇಶ್​ ಜಾರಕಿಹೊಳಿ

Karnataka By-Election Results 2019: ಈಗಷ್ಟೇ ಗೆಲುವು ಸಾಧಿಸಿದ್ದೇವೆ. ಪಕ್ಷದಲ್ಲಿ ಸ್ಥಾನಮಾನ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನ ಮಾಡಲಾಗುತ್ತದೆ. ಕೆಟ್ಟ ಸರ್ಕಾರ ತೆಗೆಯಲು ಈ ತೀರ್ಮಾನ ಮಾಡಿದ್ದೇವೆ. ಅದಕ್ಕೆ ರಾಜೀನಾಮೆ ನೀಡಿದೇವು. ಮನುಷ್ಯ ಯಾವಾಗಲೂ ಹಠವಾದಿಯಾಗಬೇಕು. ಬಿಜೆಪಿಯಿಂದ ಹೊಸ ಅಧ್ಯಾಯ ಆರಂಭವಾಗಿದೆ

Seema.R | news18-kannada
Updated:December 9, 2019, 2:20 PM IST
Karnataka Bypolls Results 2019: ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು; ರಮೇಶ್​ ಜಾರಕಿಹೊಳಿ
ರಮೇಶ್ ಜಾರಕಿಹೊಳಿ, ಬಿ.ಎಸ್.​ ಯಡಿಯೂರಪ್ಪ.
  • Share this:
ಬೆಳಗಾವಿ (ಡಿ.09):  ಇದು ನಮ್ಮ ಗೆಲುವಿಗಿಂತ ಯಡಿಯೂರಪ್ಪ, ಅಮಿತ್​ ಷಾ ಗೆಲುವು. ಈ ಗೆಲುವು ಹೊಸ ಇತಿಹಾಸ ಸೃಷ್ಟಿಸಿದೆ. ಅನರ್ಹಗೊಂಡಿದ್ದ ನಮಗೆ ಜನತಾ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ ಎಂದು ಬಿಜೆಪಿ ಶಾಸಕರ ರಮೇಶ್​ ಜಾರಕಿಹೊಳಿ ತಿಳಿಸಿದರು. 

ತಮ್ಮ ಗೆಲುವಿನಗ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ಅವರು, ತಮ್ಮನ್ನು ಗೆಲ್ಲಿಸಿದ ಗೋಕಾಕ್​ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು. ತಮ್ಮ ಗೆಲುವಿನ ಮೂಲಕ ನಮ್ಮನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮುಖಕ್ಕೆ ಹೊಡೆದಂತೆ ಆಗಿದೆ ಎಂದರು.

 

ಇನ್ನು ಉಪಚುನಾವಣೆಯನ್ನು ನಮ್ಮ ವಿರೋಧ ಪಕ್ಷದ ಶಾಸಕರಾದ ಸತೀಶ್​ ಜಾರಕಿಹೊಳಿ ಒಳ್ಳೆಯ ರೀತಿಯ ಚುನಾವಣೆ ಮಾಡಿದರು. ಅದಕ್ಕೆ ಅವರಿಗೆ ಅಭಿನಂದನೆಗಳನ್ನು ಹೇಳುತ್ತೇನೆ. ಪಕ್ಷದಿಂದ ಹೊರ ಬಂದಿದ್ದರೂ ಸಿದ್ದರಾಮಯ್ಯ ಇಂದಿಗೂ ನಮ್ಮ ನಾಯಕ ಎನ್ನುವುದರ ಜೊತೆಗೆ ಎಂಟಿಬಿ ನಾಗರಾಜ್​  ಸೋಲಿಗೆ ಸಿದ್ದರಾಮಯ್ಯ ಅವರೇ  ಕಾರಣ ಎಂದು ಆರೋಪಿಸಿದರು.

ಈಗಷ್ಟೇ ಗೆಲುವು ಸಾಧಿಸಿದ್ದೇವೆ. ಪಕ್ಷದಲ್ಲಿ ಸ್ಥಾನಮಾನ ಬಗ್ಗೆ ಮುಂದಿನ ದಿನದಲ್ಲಿ ತೀರ್ಮಾನ ಮಾಡಲಾಗುತ್ತದೆ. ಕೆಟ್ಟ ಸರ್ಕಾರ ತೆಗೆಯಲು ಈ ತೀರ್ಮಾನ ಮಾಡಿದ್ದೇವೆ. ಅದಕ್ಕೆ ರಾಜೀನಾಮೆ ನೀಡಿದೇವು. ಮನುಷ್ಯ ಯಾವಾಗಲೂ ಹಠವಾದಿಯಾಗಬೇಕು. ಬಿಜೆಪಿಯಿಂದ ಹೊಸ ಅಧ್ಯಾಯ ಆರಂಭವಾಗಿದೆ ಎಂದರು

ತಮ್ಮ ವಿರುದ್ಧ ಸ್ಪರ್ಧಿಸಿದ್ದ ಲಖನ್​ ನನ್ನ ತಮ್ಮ ಅಲ್ಲ ಎಂದು ಪ್ರಚಾರದ ವೇಳೆ ತಿಳಿಸಿದ್ದೆ. ಆದರೆ, ಈಗ ಚುನಾವಣೆ ಮುಗಿದಿದೆ. ಇಂದಿನಿಂದ ಲಖನ್ ಜಾರಕಿಹೊಳಿ ನನ್ನ ತಮ್ಮ ಎಂದರು.

ಇದನ್ನು ಓದಿ: ಹುಲಿಯಾ ಅಲ್ಲ ಇನ್ಮೇಲೆ ರಾಜಹುಲಿ: ಸಿದ್ದರಾಮಯ್ಯರನ್ನು ಕೆಣಕಿದ ಬಸವರಾಜ ಬೊಮ್ಮಯಿತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್​,  ಅವರು ಆರೋಪಿಸಿದಂತೆ ಭ್ರಷ್ಟಾಚಾರ ಬಗ್ಗೆ ತೀರ್ಮಾನ ಮಾಡಿದರೆ ಇಂದೇ ರಾಜೀನಾಮೆ ನೀಡಲು ಸಿದ್ದ. ಗ್ರಾಮೀಣ ಕ್ಷೇತ್ರದಲ್ಲಿ ಅನೇಕ ಅಕ್ರಮ ಚಟುವಟಿಕೆ ನಡೆಯುತ್ತಿವೆ‌. ಈ ಬಗ್ಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳುತ್ತೇನೆ. ಹೈದರಾಬಾದ್ ಗೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆದಿಲ್ಲ.  ಆಕೆಯಿಂದಲೇ ಕಾಂಗ್ರೆಸ್ ಪಕ್ಷ ಹಾಳಾಗಿದೆ. ಸಿದ್ದರಾಮಯ್ಯ ಜತೆಗೆ ಇರೋ ಲಫಂ ಗರು ಎಂದರು.

ಮಂಡ್ಯದಲ್ಲಿ ಮೊದಲ ಬಾರಿ ಬಿಜೆಪಿ ಖಾತೆ ತೆಗೆದ ಬಗ್ಗೆ ವ್ಯಕ್ತಪಡಿಸಿದ ಅವರು,  ಎಚ್ ಡಿ ಕೆ ಸೋತಿದ್ದಾರೆ ಅವರ ಕಥೆ ಮುಗಿತು.
First published: December 9, 2019, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading