LIVE NOW

Karnataka Bypoll Results 2019 Live: ಮತದಾರರಿಗೆ ಬಿಎಸ್​ವೈ ಅಭಿನಂದನೆ; ಅಭಿವೃದ್ಧಿ ಕಡೆ ಗಮನ ಕೊಡುವಂತೆ ಶಾಸಕರಿಗೆ ಸೂಚನೆ

Live Karnataka Bypoll Results 2019 Updates: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ. ಹೀಗಾಗಿ ಸೋಲಿನ ನೈತಿಕ ಹೊಣೆ ಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.

Kannada.news18.com | December 9, 2019, 7:14 PM IST
facebook Twitter Linkedin
Last Updated December 9, 2019
auto-refresh
Karnataka By-election Results 2019 LIVE Updates: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದೆ. ಹೀಗಾಗಿ ಸೋಲಿನ ನೈತಿಕ ಹೊಣೆ ಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. Read More
6:49 pm (IST)

ಉಪ ಚುನಾವಣೆ ಗೆಲುವು ಹರ್ಷ ತಂದಿದೆ

ಅಸ್ಥಿರ ವ್ಯವಸ್ಥೆ ಹೋಗಿ ಸ್ಥಿರ ಸರ್ಕಾರ ಬಂದಿದೆ

ಉಡುಪಿಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

ಬಿಜೆಪಿಯಿಂದ ಪರಿಣಾಮಕಾರಿ ಆಡಳಿತ ಕೊಡುತ್ತೇವೆ

ಜೆಡಿಎಸ್ ಶೂನ್ಯ ಸಂಪಾದನೆ ಮಾಡಿದೆ

ಕಣ್ಣೀರು, ಕೇಕೆ ಹಾಕಿದರೆ ಗೆಲುವು ಸಿಗಲ್ಲ

ಉಡುಪಿಯಲ್ಲಿ ಸಚಿವ ಶ್ರೀನಿವಾಸ ಪೂಜಾರಿ ಹೇಳಿಕೆ

 

BJP ಮಂತ್ರಿ ಮಂಡಲ ವಿಸ್ತರಣೆ ವಿಚಾರ

ಸಾಕಷ್ಟು ಸಚಿವ ಸ್ಥಾನಗಳು ಖಾಲಿಯಿವೆ

ಮುಖ್ಯಮಂತ್ರಿಗಳ ಬಳಿ ಹಲವು ಖಾತೆಗಳಿವೆ

ಗೆದ್ದವರಿಗೆ ಅವಕಾಶ ಕೊಡಲು ಉಳಿಸಿಕೊಂಡಿದ್ದಾರೆ

ಪಕ್ಷವನ್ನು ಗಮನದಲ್ಲಿಟ್ಟುಕೊಂಡು ಖಾತೆ ಹಂಚುತ್ತಾರೆ

ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

 

ಬಿಜೆಪಿಗೆ ಬೆಂಬಲಿಸುವುದಾಗಿ ಹೇಳಿದ್ದ ಶರತ್ ಬಚ್ಚೇಗೌಡ

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಗೆಲುವು

ಜನರ ತೀರ್ಮಾನ ಗೌರವದಿಂದ ಸ್ವೀಕರಿಸಿದ್ದೇವೆ

ಮುಂದೆ ಏನು ಅನ್ನೋದನ್ನು ಪಕ್ಷ ತೀರ್ಮಾನ ಮಾಡುತ್ತದೆ

ಈ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ

 

ಯಡಿಯೂರಪ್ಪ ಈ ವಯಸ್ಸಿನಲ್ಲಿ ಓಡಾಟ ಮಾಡಿದ ಫಲ ಇದು

ಬಿಜೆಪಿ ಮತ್ತು ಬಿಎಸ್ ವೈ ಟೀಕಿಸುವವರು ಇನ್ನಾದರು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು

 

ಕೇಂದ್ರದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ

ಇಡೀ ಪಕ್ಷವನ್ನು ಒಟ್ಟಾಗಿ ಒಂದಾಗಿ ತೆಗೆದುಕೊಂಡು ಹೋಗುವ ಸಚಿವರ ತಂಡ ರಚನೆಯಾಗುತ್ತದೆ

ರಾಜ್ಯಾಧ್ಯಕ್ಷರು, ಸಿಎಂ , ಹೈಕಮಾಂಡ್ ತೀರ್ಮಾನಕ್ಕೆ ಇಡೀ ರಾಜ್ಯ ಬದ್ಧವಾಗಿರಬೇಕು

 

6:19 pm (IST)

ಪುತ್ರ ವಾತ್ಸಲ್ಯಕ್ಕಾಗಿ ನನ್ನನ್ನು ಸೋಲಿಸಿದ್ರು

ಬಚ್ಚೇಗೌಡ ವಿರುದ್ಧ MTB ನಾಗರಾಜ್ ವಾಗ್ದಾಳಿ

ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ

ಬಿಜೆಪಿ ನಾಯಕರು ತಕ್ಷಣ ಕ್ರಮಕೈಗೊಳ್ಳಬೇಕು

ಸ್ಥಾನಮಾನ ಕೊಡುವ ಬಗ್ಗೆ ಭರವಸೆ ನೀಡಿಲ್ಲ

ಬಿಜೆಪಿ ತೀರ್ಮಾನದ ಮೇಲೆ ಮುಂದಿನ ನಡೆ

ಹೊಸಕೋಟೆ ಪರಾಜಿತ ಅಭ್ಯರ್ಥಿ MTB ಹೇಳಿಕೆ

ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪಕ್ಷದ ನಾಯಕರು ಈ ಕೂಡಲೇ ಕ್ರಮಕೈಗೊಳ್ಳಬೇಕು

 ಸೋಲಿನ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೆನೆ

ಸ್ಥಾನಮಾನ ಕೊಡುವ ಬಗ್ಗೆ ಇನ್ನೂ ಭರವಸೆ ನೀಡಿಲ್ಲ

ಬಿಜೆಪಿ ಪಕ್ಷದ ನಾಯಕರುಗಳ  ಮುಂದಿನ ತಿರ್ಮಾನದ ಗಮನಿಸಿ ಮುಂದಿನ ನಡೆ

ಗರುಡಚಾರ್ ಪಾಳ್ಯದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಚ್ಚೇಗೌಡರ ವಿರುದ್ಧ ತೀವ್ರ ವಾಗ್ದಾಳಿ

 ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಾಗ್ದಾಳಿ

5:56 pm (IST)

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

ಈ ಫಲಿತಾಂಶದಿಂದ ದಾಖಲೆ ನಿರ್ಮಾಣ ಮಾಡಿದ್ದೇವೆ.

ನಮ್ಮ ಪಕ್ಷದ ಮುಖಂಡರರು ಒಳ್ಳೆಯ ಕೆಲಸ ಮಾಡಿದ್ದಾರೆ

ಗೊತ್ತಿಲ್ಲದ ಊರಿನಲ್ಲಿ ಸಮರ್ಥವಾಗಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ.

ಲೋಕಸಭೆಯಂತೆ ವಿಧಾನಸಭೆಯಲ್ಲಿ ದೊಡ್ಡ ಅಂತರದಿಂದ ಗೆದ್ದಿದ್ದೇವೆ

ಎಲ್ಲಾ ಕಡೆ ಈ ಅಂತರದಿಂದ ಗೆದ್ದಿದ್ರೆ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಏನಾಗಿದೆ ಅಂತಾ ಯೋಚನೆ ಮಾಡಿ

ಮೂರುವರೇ ವರ್ಷ ನಮ್ಮ ಶಾಸಕರು, ಸಚಿವರು, ಕಾರ್ಯಕರ್ತರು ಜನರ ಆಪೇಕ್ಷೆಯಂತೆ ಮುಂದೆ ಹೋಗ್ತೇವೆ

ಮುಂದೆ 150 ಸ್ಥಾನ ಗೆಲ್ಲುವ ಗುರಿಯೊಂದಿಗೆ ಹೆಜ್ಜೆ ಇಡಬೇಕು

ಎಲ್ಲರ ಸಹಾಯದಿಂದ ನಾವು ಮುಂದೆ ಹೋಗಬೇಕು.

ಬರುವ ಬಜೆಟ್ ನಲ್ಲಿ ಕೃಷಿ, ನೀರಾವರಿ, ರೈತನ ಅಭಿವೃದ್ಧಿಗೆ ಒತ್ತು

ಕೈಗಾರಿಕೆಗೆ, ರಾಜ್ಯದ ಅಭಿವೃದ್ಧಿ ಗೆ ಒತ್ತ ಕೊಡಬೇಕು

ಪ್ರಧಾನಿ ನರೇಂದ್ರ ಮೋದಿ ಕೂಡ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಕೊಟ್ಟಿದ್ದಾರೆ

ಇಡೀ ದೇಶದ ಗಮನ ಸೆಳೆದಿತ್ತು ಈ ಫಲಿತಾಂಶ ಏನಾಗುತ್ತೋ ಏನೋ ಅಂತಾ.

ಕಾಂಗ್ರೆಸ್, ಜೆಡಿಎಸ್ ಬಗ್ಗೆ ಟೀಕೆ ಮಾಡೋದ್ರಿಂದ ನಮಗೇನು ಉಪ ಯೋಗವಿಲ್ಲ

ಅವರು ಹೀನಾಯ ಸೋಲು ಅನುಭವಿಸಿದ್ದಾರೆ.

ಅವರು ಉತ್ತರ ಕೊಡದೆ ಇರುವ ಪರಿಸ್ಥಿತಿಗೆ ಬಂದಿದ್ದಾರೆ.

ಅವರು‌ ಏನಾದರೂ ಮಾಡಿಕೊಳ್ಳಲಿ

ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟ ಸಿಎಂ ಯಡಿಯೂರಪ್ಪ

ಆದರೆ ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಕೆಲಸ ಮಾಡಬೇಕು

ಪಕ್ಷ ಸಂಘಟನೆ ಹಾಗೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕು

ನಿರೀಕ್ಷೆ ಮೀರಿ ಗೆಲುವು ಕೊಟ್ಟ ಜನರ ಋಣ ತೀರಿಸಬೇಕು

ಮಂಡ್ಯದಲ್ಲಿ ಜೆಡಿಎಸ್ ಗೆ ಉಸಿರುಕಟ್ಟುವ ವಾತಾವರಣ ಇದೆ

ಇದನ್ನು ನಾವು ಬಳಸಿಕೊಂಡು ಮುಂದೆ ಅಲ್ಲಿ ಬಿಜೆಪಿ ಗೆಲ್ಲುವ ಕೆಲಸ ಮಾಡಬೇಕು

ಸರ್ಕಾರ ಪಕ್ಷ ಒಟ್ಟಾಗಿ ಹೋದಾಗ ಮಾತ್ರ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬಹುದು

ಈ ಗೆಲುವು ಸಾಮೂಹಿಕ ನೇತೃತ್ವದ ಗೆಲುವು

ಅಂತರವನ್ನು ನಾವು ಕಲ್ಪನೆ ಕೂಡ ಮಾಡಿಕೊಳ್ಳೋಕೆ ಆಗಲ್ಲ

ಬೆಂಗಳೂರಲ್ಲಿ ಇಷ್ಟು ದೊಡ್ಡ ಅಂತರ ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಬೇಕು

ಪ್ರಮಾಣೀಕ ಎಲ್ಲರಿಗೂ ಮುಖ್ಯ

ಹೀಗಾಗಿ ಪ್ರಾಮಾಣೀಕತೆಯಿಂದ ನಾವು ಕೆಲಸ ಮಾಡಬೇಕು

ಮೂರು ತಿಂಗಳ ಒಳಗೆ ಬೆಂಗಳೂರು ಸುಧಾರಣೆ ಆಗಬೇಕು

ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು

ಅಶೋಕ್ ಅವ್ರೇ ಎಂದು ವೇಧಿಕೆಯಲ್ಲಿ ಕುಳಿತಿದ್ದ ಅಶೋಕ್ ಗೆ ಸಲಹೆ ನೀಡಿದ ಸಿಎಂ ಯಡಿಯೂರಪ್ಪ.

ಬೆಂಗಳೂರು ಕಸದ ಸಮಸ್ಯೆ ಬಗ್ಗೆ ವಿಶೇಷ ಗಮನ ಕೊಡಬೇಕು

ನಾಳೆ ನಿತಿನ್ ಗಡ್ಕರಿ ಬರ್ತಿದ್ದಾರೆ

ಅವರ ಜೊತೆಗೆ ಏನು ಅಭಿವೃದ್ಧಿ ಆಗಬೇಕೋ ಅದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ

15 ಕ್ಷೇತ್ರಗಳ ಮತದಾರ ಬಂಧುವಿಗೆ ಅಭಿನಂದನೆ.

5:43 pm (IST)

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ..

ಕೋರ್ಟ್ ಬೆಳವಣಿಗೆಯಿಂದ ಅವರಿಗೆ ಅನರ್ಹರು ಎಂದು ಪಟ್ಟು ಕಟ್ಟಿದ್ರು..

ಈಗ ಅವೆಲ್ಲದಕ್ಕೂ ಮುಕ್ತಿ ಸಿಕ್ಕಿದೆ.

ಬಿಜೆಪಿ ಸರ್ಕಾರ ಸೇಫ್ ಆಗೋದಕ್ಕೆ ಸೇತುವೆ ಕಟ್ಟಿದವರು ರಾಜ್ಯದ ಜನರು.

ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇರಲಿಲ್ಲ

ಕಾಂಗ್ರೆಸ್ ಕಾರ್ಯಕರ್ತರಲ್ಲೂ ಕೂಡ ಉತ್ಸಾಹ ಇರಲಿಲ್ಲ

ಆದರೆ ನಮ್ಮ ಕಾರ್ಯಕರ್ತರಿಗೆ ಜಾಸ್ತಿ ಉತ್ಸಾಹ ಇತ್ತು.

ಯಡಿಯೂರಪ್ಪ ಎಲ್ಲೇ ಹೋದ್ರು ನಮ್ಮ ಪಕ್ಷದವುರು ಅವರು ಜೊತೆಗೆ ಬರ್ತಿದ್ರು

ಆದರೆ ಕಾಂಗ್ರೆಸ್ ನಲ್ಲಿ ಸಿದ್ದು ಬಿಟ್ರೆ, ಅವರ ಜೊತೆ ಯಾರು ಹೋಗ್ತಿರಲಿಲ್ಲ

ಕೊನೆಗೆ ಇವತ್ತು ಬಾಂಬಾಟ್ ರಿಸಲ್ಟ್ ಬಂದಿದೆ

ಹೊಸಕೋಟೆ ಗೆಲ್ಲಬೇಕು

ಆದರೆ ನಮ್ಮ ಪಕ್ಷದವರೇ ಸ್ಪರ್ಧೆ ಮಾಡಿದ್ರಿಂದ ಅಲ್ಲಿ ಸೋಲಾಯಿತು

ಈಗಾಗಲೇ ಅವರ ವಿರುದ್ಧ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ.

ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.

ಸಿದ್ದರಾಮಯ್ಯ ಜ್ಯೋತಿ ಶಾಲೆ ಬಂದ್ ಆಗಿದೆ

ದಿನೇಶ್ ಗುಂಡೂರಾವ್ ದು ಕೂಡ ಅದೇ ಹಾದಿ.

ಮಾಜಿ ಸಚಿವ ರೇವಣ್ಣ‌ರ ನಿಂಬೆ ಹಣ್ಣು ಕೂಡ ಪತ್ತೆ ಇಲ್ಲ

ಅವರೆಲ್ಲೂ ಈ ಫಲಿತಾಂಶದಿಂದ ನಾಪತ್ತೆ ಆಗಿದ್ದಾರೆ

ಕಾಂಗ್ರೆಸ್ ಗೆ ದಾರಿ ಕಾಣದಾಗಿದೆ

ಸಿದ್ದರಾಮಯ್ಯ ಒಬ್ಬಂಟಿ ಆಗಿದ್ದಾರೆ

ಇವಾಗ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಆಗಿದೆ

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಬಗ್ಗೆ ಅಶೋಕ್ ವ್ಯಂಗ್ಯ..

Load More


corona virus btn
corona virus btn
Loading