Hoskote bypoll results: ಹೊಸಕೋಟೆಯಲ್ಲಿ ಕುರುಬ-ಒಕ್ಕಲಿಗ ಚಕ್ರವ್ಯೂಹಕ್ಕೆ ಸಿಕ್ಕು ಸೋತರಾ ಎಂಟಿಬಿ ನಾಗರಾಜ್?

ಎಂಟಿಬಿ ಮತ್ತು ಶರತ್ ಬಚ್ಚೇಗೌಡರ ಸಮಬಲ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡೆಗಳು ನಿರ್ಣಾಯಕವಾದವು. ಜೆಡಿಎಸ್ ಪಕ್ಷವು ಹೊಸಕೋಟೆಯಲ್ಲಿ ಅಭ್ಯರ್ಥಿ ಹಾಕದೇ, ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿತು. ಜೆಡಿಎಸ್ ಅಭ್ಯರ್ಥಿ ಮೂಲಕ ಒಕ್ಕಲಿಗ ಮತಗಳು ವಿಭಜನೆ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ತಂತ್ರವಾಗಿತ್ತು.

Vijayasarthy SN | news18
Updated:December 9, 2019, 1:22 PM IST
Hoskote bypoll results: ಹೊಸಕೋಟೆಯಲ್ಲಿ ಕುರುಬ-ಒಕ್ಕಲಿಗ ಚಕ್ರವ್ಯೂಹಕ್ಕೆ ಸಿಕ್ಕು ಸೋತರಾ ಎಂಟಿಬಿ ನಾಗರಾಜ್?
ಎಂಟಿಬಿ ನಾಗರಾಜ್​​
  • News18
  • Last Updated: December 9, 2019, 1:22 PM IST
  • Share this:
ಬೆಂಗಳೂರು(ಡಿ. 09): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ನಿರೀಕ್ಷೆ ಮತ್ತು ಅಪೇಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಹೊಸಕೋಟೆಯೂ ಒಂದು. ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಲು ಅವರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಎಂಟಿಬಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ ಶರತ್ ಬಚ್ಚೇಗೌಡ ಅವರ ಮನವೊಲಿಸಲು ಕೊನೆಯವರೆಗೂ ವಿಫಲಯತ್ನ ನಡೆಸಿದರು. ಆದರೆ, ಶರತ್ ಬಚ್ಚೇಗೌಡ ಬಂಡಾಯ ಇದ್ದು ಸ್ವತಂತ್ರವಾಗಿ ಕಣಕ್ಕಿಳಿದು ಈಗ ಗೆಲುವಿನ ನಗೆ ಬೀರಿದ್ದಾರೆ.

ಕೆಲ ವರ್ಷಗಳಿಂದೀಚೆ ಹೊಸಕೋಟೆ ರಾಜಕಾರಣದಲ್ಲಿ ಎರಡೇ ಹೆಸರು ಪ್ರಮುಖವಾಗಿ ಕೇಳಿಬರುವುದು. ಒಂದು ಎಂಟಿಬಿ ನಾಗರಾಜ್ ಕುಟುಂಬ, ಮತ್ತೊಂದು ಬಚ್ಚೇಗೌಡ ಕುಟುಂಬ. ಇಲ್ಲಿ ಪಕ್ಷಕ್ಕಿಂತ ಈ ಎರಡು ಕುಟುಂಬಗಳ ವೈಯಕ್ತಿಕ ವರ್ಚಸ್ಸು ಹೊಸಕೋಟೆ ರಾಜಕಾರಣದಲ್ಲಿ ಮೇಳೈಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಹೊಸಕೋಟೆ ಉಪಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತು.

ಇದನ್ನೂ ಓದಿ: ಬಿಜೆಪಿ ಗೆಲುವಿಗೆ ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣ; ಸ್ವ ಪಕ್ಷದ ವಿರುದ್ಧ ಜನಾರ್ದನ ಪೂಜಾರಿ ಟೀಕೆ

ಎಂಟಿಬಿ ನಾಗರಾಜ್ ಅವರಿಗೆ ಸೋಲಲು ಕೆಲ ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಹೊಸಕೋಟೆಯಲ್ಲಿ ಒಕ್ಕಲಿಗರು ಮತ್ತು ಕುರುಬರು ಎರಡು ಪ್ರಮುಖ ಸಮುದಾಗಳಾಗಿವೆ. ಎಂಟಿಬಿ ನಾಗರಾಜ್ ಕುರುಬ ಸಮುದಾಯದವರಾದರೆ, ಶರತ್ ಬಚ್ಚೇಗೌಡ ಒಕ್ಕಲಿಗರು. ಎಂಟಿಬಿ ನಾಗರಾಜ್ ಅವರಿಗೆ ಈ ಕ್ಷೇತ್ರದಲ್ಲಿ ತಮ್ಮ ಹಣಬಲ ಮತ್ತು ಜಾತಿ ಬಲ ಎರಡೂ ಆಧಾರವಾಗಿದ್ದವು. ಹಾಗೆಯೇ ಕ್ಷೇತ್ರದ ಹಾಲಿ ಶಾಸಕ(ಅನರ್ಹ) ಎಂಬ ಬಲವೂ ಅವರಿಗೆ ಇತ್ತು.

ಇನ್ನೊಂದೆಡೆ, ಶರತ್ ಬಚ್ಚೇಗೌಡರ ಪಾಲಿಗೆ ಒಕ್ಕಲಿಗ ಮತ ಹಾಗೂ ಅನುಕಂಪದ ಬಲ ಇತ್ತು. ಇವರಿಬ್ಬರ ಸಮಬಲ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಡೆಗಳು ನಿರ್ಣಾಯಕವಾದವು. ಜೆಡಿಎಸ್ ಪಕ್ಷವು ಹೊಸಕೋಟೆಯಲ್ಲಿ ಅಭ್ಯರ್ಥಿ ಹಾಕದೇ, ಶರತ್ ಬಚ್ಚೇಗೌಡರಿಗೆ ಬೆಂಬಲ ಸೂಚಿಸಿತು. ಜೆಡಿಎಸ್ ಅಭ್ಯರ್ಥಿ ಮೂಲಕ ಒಕ್ಕಲಿಗ ಮತಗಳು ವಿಭಜನೆ ಆಗಬಾರದು ಎಂಬುದು ಕುಮಾರಸ್ವಾಮಿ ಅವರ ತಂತ್ರವಾಗಿತ್ತು.

ಇದನ್ನೂ ಓದಿ: ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತ; ಉಪ ಮುಖ್ಯಮಂತ್ರಿ ಆಗ್ತಾರ ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ?

ಇತ್ತ, ಕಾಂಗ್ರೆಸ್ ಪಕ್ಷವು ಶಾಸಕ ಭೈರತಿ ಸುರೇಶ್ ಪತ್ನಿ ಪದ್ಮಾವತಿ ಅವರನ್ನು ಕಣಕ್ಕಿಳಿಸಿತು. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರ ಗೆಲ್ಲುವ ಇಚ್ಛೆಗಿಂತ ಎಂಟಿಬಿಯನ್ನು ಸೋಲಿಸುವುದು ಗುರಿಯಾಗಿದ್ದಂತಿತ್ತು. ಎಂಟಿಬಿಯಂತೆ ಭೈರತಿ ಅವರೂ ಕುರುಬ ಸಮುದಾಯದವರು. ಎಂಟಿಬಿ ನಾಗರಾಜ್ ಅವರಿಗೆ ಹೋಗುವ ಕುರುಬ ಮತಗಳನ್ನು ಪದ್ಮಾವತಿ ಮೂಲಕ ಸೆಳೆದು ಅವರ ಬಲ ಕುಗ್ಗಿಸುವುದು ಕಾಂಗ್ರೆಸ್ ರಣತಂತ್ರವಿದ್ದಂತಿತ್ತು. ಅಭ್ಯರ್ಥಿ ಹಾಕದ ಜೆಡಿಎಸ್ ಮತ್ತು ಕುರುಬ ಅಭ್ಯರ್ಥಿಯನ್ನ ಹಾಕಿದ ಕಾಂಗ್ರೆಸ್ ಪಕ್ಷ ಎರಡಕ್ಕೂ ಕೂಡ ಎಂಟಿಬಿಗೆ ಸೋಲಾಗುವುದೇ ಮುಖ್ಯವಾಗಿತ್ತು. ಅದರಲ್ಲಿ ಯಶಸ್ವಿಯೂ ಆಗಿದ್ಧಾರೆ. ಶರತ್ ಬಚ್ಚೇಗೌಡ ನಿರೀಕ್ಷೆಮೀರಿ ಸುಲಭವಾಗಿ ಗೆದ್ದಿದ್ದಾರೆ. ಭೈರತಿ ಸುರೇಶ್ ಮೂಲಕ ಕುರುಬ ಸಮುದಾಯದ ಮತಗಳು ಹಾಗೂ ಪಕ್ಷದ ನಿಷ್ಠಾವಂತ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷ ಕೂಡ ಎಂಟಿಬಿ ಸೋಲಿಗೆ ಪ್ರಮುಖ ಪಾತ್ರ ವಹಿಸಿತು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ