• Home
  • »
  • News
  • »
  • state
  • »
  • ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಬಿಜೆಪಿ ಸಭೆ

ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಬಿಜೆಪಿ ಸಭೆ

ಬಿ.ಎಸ್. ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ

By Elections: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಅದರಂತೆ ಆರ್ ಆರ್ ನಗರದ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸವನ್ನು ಮಾಜಿ ಶಾಸಕ ಮುನಿರತ್ನ ಹೊಂದಿದ್ದರು. ಆದರೆ ಇದಕ್ಕೆ ತುಳಸಿ ಮುನಿರಾಜುಗೌಡ ಅಡ್ಡಗಾಲಾಗಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು(ಅ.01): ಎರಡು ಕ್ಷೇತ್ರಗಳ ಉಪಚುನಾವಣೆಯನ್ನು ಆಡಳಿತರೂಢ ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆಯಾಗಿದ್ದೇ ತಡ, ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ. ಎರಡು ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಯನ್ನು ಹಾಕುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆಯಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಅದರಂತೆ ಆರ್ ಆರ್ ನಗರದ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸವನ್ನು ಮಾಜಿ ಶಾಸಕ ಮುನಿರತ್ನ ಹೊಂದಿದ್ದರು. ಆದರೆ ಇದಕ್ಕೆ ತುಳಸಿ ಮುನಿರಾಜುಗೌಡ ಅಡ್ಡಗಾಲಾಗಿದ್ದಾರೆ. ಹಾಗಾಗಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲ ಕಮಲ ಪಡೆಯ ನಾಯಕರಲ್ಲಿದೆ. ಇಂತಹ ಸಮಸ್ಯೆ ಸಿರಾ ಕ್ಷೇತ್ರದ ವಿಚಾರದಲ್ಲಿಲ್ಲ.‌ ಅಲ್ಲಿ ಪಕ್ಷಕ್ಕೆ ಸೂಕ್ತ‌ ಅಭ್ಯರ್ಥಿಯ ಕೊರತೆ ಇದೆ. ಆದರೂ ಮೂರ್ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ.


TET Exam: ರಾಜ್ಯದಲ್ಲಿ ಅಕ್ಟೋಬರ್ 4 ರಂದು ಟಿಇಟಿ ಪರೀಕ್ಷೆ; ಬಾಗಲಕೋಟೆಯಲ್ಲಿ ಸಕಲ ಸಿದ್ಧತೆ


ತಿಪ್ಪೇಸ್ವಾಮಿ,ರಾಜೇಶಗೌಡ, ಬಿ‌ಕೆ ಮಂಜುನಾಥ್​, ಎಸ್ ಆರ್ ಗೌಡ ಜೊತೆಗೆ ಮಾಜಿ ಶಾಸಕ ಸುರೇಶಗೌಡ ಹೆಸರು ಕೂಡ ಕೇಳಿ ಬರುತ್ತಿದೆ. ಹಾಗಾಗಿ ಈ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಇಂದು ಸಂಜೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ ಹಾಗೂ ಸಚಿವರಾದ ಸಿ ಟಿ ರವಿ,ಈಶ್ವರಪ್ಪ, ಶಾಸಕ ಅರವಿಂದ ಲಿಂಬಾವಳಿ ಸೇರಿ ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್‌ ಒಪ್ಪಿಗೆಗೆ ಪಟ್ಟಿ ಕಳುಹಿಸಲಾಗುವುದು. ಹೈಕಮಾಂಡ್ ಒಪ್ಪಿಗೆ ಮೇರೆಗೆ ಬಿಜೆಪಿ  ಅಭ್ಯರ್ಥಿಗಳನ್ನ ಫೈನಲ್ ಮಾಡಲಿದೆ.

Published by:Latha CG
First published: