ಜನತಾ ಜನಾರ್ದನರಿಂದ 11 ಅನರ್ಹರಿಗೆ ಶಾಪವಿಮೋಚನೆ; ಬಿಎಸ್​ವೈ ಸರ್ಕಾರ ಸುಭದ್ರ

ಉಪಚುನಾವಣೆಯ ಬಳಿಕ ರಾಜಕೀಯ ಧ್ರುವೀಕರಣ ಮತ್ತು ರಾಜಕೀಯ ಕ್ರೋಢೀಕರಣ ಆಗುತ್ತದೆ ಎಂದು ಹೇಳುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.

news18
Updated:December 9, 2019, 5:29 PM IST
ಜನತಾ ಜನಾರ್ದನರಿಂದ 11 ಅನರ್ಹರಿಗೆ ಶಾಪವಿಮೋಚನೆ; ಬಿಎಸ್​ವೈ ಸರ್ಕಾರ ಸುಭದ್ರ
ಬಿಎಸ್​ ಯಡಿಯೂರಪ್ಪ
  • News18
  • Last Updated: December 9, 2019, 5:29 PM IST
  • Share this:
ಬೆಂಗಳೂರು(ಡಿ. 09): ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಜನತಾ ನ್ಯಾಯಾಲಯ ಆಶೀರ್ವದಿಸಿದೆ. ಉಪಚುನಾವಣೆಯ ಬಳಿಕ ಬಿಎಸ್​ವೈ ಸರ್ಕಾರ ಪತನ ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮುಜುಗರ ಉಂಟಾಗಿದೆ. 15 ಕ್ಷೇತ್ರಗಳಲ್ಲಿ ಬಿಜೆಪಿ ಬರೋಬ್ಬರಿ 12 ಸ್ಥಾನ ಗೆದ್ದು ಬಹುತೇಕ ಸ್ವೀಪ್ ಮಾಡಿದೆ. ಕನಿಷ್ಠ ಏಳೆಂಟಾದರೂ ದಕ್ಕುತ್ತದೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಎರಡು ಮಾತ್ರ ಸಿಕ್ಕಿದೆ. ಹತ್ತು ಸ್ಥಾನಗಳನ್ನು ಕಳೆದುಕೊಂಡಿದೆ.

ಇನ್ನು, ಜೆಡಿಎಸ್ ಪಕ್ಷ ಶೂನ್ಯ ಸಂಪಾದನೆ ಮಾಡಿದೆ. ಮೂರೂ ಕ್ಷೇತ್ರಗಳು ಜೆಡಿಎಸ್ ಕೈತಪ್ಪಿವೆ. ಮಂಡ್ಯ ಲೋಕಸಭಾ ಚುನಾವಣೆಯ ಸೋಲಿನ ಶಾಕ್ ಪಡೆದಿದ್ದ ಜೆಡಿಎಸ್ ಪಕ್ಷಕ್ಕೆ ಈಗ ಕೆಆರ್ ಪೇಟೆ ಇನ್ನೂ ದೊಡ್ಡ ಶಾಕ್ ಕೊಟ್ಟಿದೆ. ಹುಣಸೂರು ಮತ್ತು ಹೊಸಕೋಟೆ ಕ್ಷೇತ್ರದಲ್ಲಿ ಹೆಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಸೋಲಿಸಿದ ಸಮಾಧಾನ ಮಾತ್ರ ಜೆಡಿಎಸ್​ಗೆ ಇದೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ವಾಭಿಮಾನ ಹೆಸರಲ್ಲಿ ಜನರ ಬೆಂಬಲ ಗಿಟ್ಟಿಸಿಕೊಂಡಿದ್ದಾರೆ. ಶರತ್ ಗೆಲುವಿನಲ್ಲಿ ಜೆಡಿಎಸ್ ನೇರ ಪಾತ್ರ ವಹಿಸಿದರೆ, ಕಾಂಗ್ರೆಸ್ ಪರೋಕ್ಷವಾಗಿ ಕಾರಣವಾಗಿದೆ.

ಬಿಜೆಪಿ ಈ 12 ಕ್ಷೇತ್ರಗಳ ಗೆಲುವಿನೊಂದಿಗೆ ವಿಧಾನಸಭೆಯಲ್ಲಿ ತನ್ನ ಬಲವನ್ನು 117 ಕ್ಷೇತ್ರಗಳಿಗೆ ವೃದ್ಧಿಸಿಕೊಂಡಿದೆ. ಇಬ್ಬರು ಪಕ್ಷೇತರರು ಮತ್ತು ಬಿಎಸ್​ಪಿಯ ಒಬ್ಬರ ಬೆಂಬಲದೊಂದಿಗೆ ಬಿಎಸ್​ವೈ ಸರ್ಕಾರದ ಬಲ 120 ಸ್ಥಾನಕ್ಕೇರಿದೆ. ಅತ್ತ, ಕಾಂಗ್ರೆಸ್ ಮತ್ತು ಜೆಡಿಎಸ್ ಬಲ 68 ಮತ್ತು 34 ಸ್ಥಾನಗಳಿಗೆ ಕುಸಿದಿದೆ. ಬಿಎಸ್ ಯಡಿಯೂರಪ್ಪ ಅವರ ಕುರ್ಚಿಗೆ ಸದ್ಯಕ್ಕೆ ಯಾವುದೇ ಸಂಚಕಾರ ಬರುವ ಲಕ್ಷಣಗಳಿಲ್ಲ.

ಮಸ್ಕಿ ಮತ್ತು ಆರ್.ಆರ್. ನಗರ ಕ್ಷೇತ್ರಗಳು ಖಾಲಿ ಉಳಿದಿದ್ದು ಇಲ್ಲಿ ಇನ್ನಷ್ಟೇ ಉಪಚುನಾವಣೆ ಘೋಷಣೆಯಾಗಬೇಕಿದೆ. ಆ ಎರಡು ಕ್ಷೇತ್ರಗಳ ಫಲಿತಾಂಶ ಏನೇ ಬಂದರೂ ಸರ್ಕಾರಕ್ಕೆ ಅಪಾಯವಾಗುವುದಿಲ್ಲ.

ಇದೇ ವೇಳೆ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಇಬ್ಬರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ಧಾರೆ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಿದ್ಧಾರೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ಧಾರೆ.

ಉಪಚುನಾವಣೆಯ ಬಳಿಕ ರಾಜಕೀಯ ಧ್ರುವೀಕರಣ ಮತ್ತು ರಾಜಕೀಯ ಕ್ರೋಢೀಕರಣ ಆಗುತ್ತದೆ ಎಂದು ಹೇಳುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಮುಂದಿನ ನಡೆಗಳಿಗೆ ತಡೆ ಬಿದ್ದಂತಾಗಿದೆ.
First published: December 9, 2019, 5:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading