• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಸ್ಕಿಯಲ್ಲಿ ವರ್ಕೌಟ್ ಆಗಲಿಲ್ಲ ವಿಜಯೇಂದ್ರ ತಂತ್ರಗಾರಿಕೆ, ಬಿಜೆಪಿಯವರೇ ಮೋಸ ಮಾಡಿದರು ಎಂದ ಪ್ರತಾಪ್​​ಗೌಡ!

ಮಸ್ಕಿಯಲ್ಲಿ ವರ್ಕೌಟ್ ಆಗಲಿಲ್ಲ ವಿಜಯೇಂದ್ರ ತಂತ್ರಗಾರಿಕೆ, ಬಿಜೆಪಿಯವರೇ ಮೋಸ ಮಾಡಿದರು ಎಂದ ಪ್ರತಾಪ್​​ಗೌಡ!

ಬಿ.ವೈ. ವಿಜಯೇಂದ್ರ

ಬಿ.ವೈ. ವಿಜಯೇಂದ್ರ

ಅಧಿಕೃತ ಫಲಿತಾಂಶಕ್ಕೂ ಮುನ್ನವೇ ಟ್ವೀಟ್​ ಮೂಲಕ ವಿಜಯೇಂದ್ರ ಮಸ್ಕಿ ಸೋಲನ್ನು ಒಪ್ಪಿಕೊಂಡರು. ಜನಾದೇಶಕ್ಕೆ ತಲೆಬಾಗುತ್ತೇನೆ. ಮಸ್ಕಿಯ ಬಿಜೆಪಿ ಕಾರ್ಯಕರ್ತರು ಎದೆಗುಂದುವುದು ಬೇಡ ಎಂದು ಟ್ವೀಟ್​ ಮಾಡಿದ್ದಾರೆ.

  • Share this:

ಬೆಂಗಳೂರು: ರಾಜ್ಯದಲ್ಲಿಂದು 2 ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮಸ್ಕಿ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ಸೋಲು ಕಂಡಿದೆ. ಕಾಂಗ್ರೆಸ್​ ಅಭ್ಯರ್ಥಿ ಬಸವನಗೌಡ ತುರುವಿಹಾಳ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದ ಪ್ರತಾಪ್​ಗೌಡ ಸೋಲುಂಡಿದ್ದಾರೆ. ಮತ ಎಣಿಕೆ ಶುರುವಾದಾಗಿನಿಂದ ಕಾಂಗ್ರೆಸ್​ ಅಭ್ಯರ್ಥಿ ಸತತ ಮುನ್ನಡೆ ಕಾಯ್ದುಕೊಂಡಿದ್ದರು, ಬಿಜೆಪಿಗೆ ಸೋಲು ಖಚಿತವಾಗುತ್ತಾ ಹೋಯಿತು. ಎಲ್ಲಾ ಸುತ್ತಿನ ಮತಎಣಿಗೆ ಪೂರ್ಣವಾಗುವ ಮುನ್ನವೇ ಬಿಜೆಪಿ ಸೋಲೊಪ್ಪಿಕೊಂಡಿತು.


ಮಸ್ಕಿ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಸಿಎಂ ಬಿ.ಎಸ್​.ಯಡಿಯೂರಪ್ಪ ಪುತ್ರ, ಬಿಜೆಪಿಯ ಉಪ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ತೀವ್ರ ಹಿನ್ನಡೆಯಾಗಿದೆ. ಅಧಿಕೃತ ಫಲಿತಾಂಶಕ್ಕೂ ಮುನ್ನವೇ ಟ್ವೀಟ್​ ಮೂಲಕ ವಿಜಯೇಂದ್ರ ಮಸ್ಕಿ ಸೋಲನ್ನು ಒಪ್ಪಿಕೊಂಡರು. ಜನಾದೇಶಕ್ಕೆ ತಲೆಬಾಗುತ್ತೇನೆ. ಮಸ್ಕಿಯ ಬಿಜೆಪಿ ಕಾರ್ಯಕರ್ತರು ಎದೆಗುಂದುವುದು ಬೇಡ ಎಂದು ಟ್ವೀಟ್​ ಮಾಡಿದ್ದಾರೆ. ವಿಜಯೇಂದ್ರ ಚುನಾವಣಾ ತಂತ್ರಗಾರಿಕೆ ಮಸ್ಕಿ ಕ್ಷೇತ್ರದಲ್ಲಿ ವರ್ಕೌಟ್​ ಆಗಿಲ್ಲ.


ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದು ಕೈ ಸುಟ್ಟುಕೊಂಡಿರುವ ಪ್ರತಾಪ್​ಗೌಡ ಮಾಧ್ಯಮಗಳ ಎದುರು ಬಿಜೆಪಿಯವರೇ ನನಗೆ ಮೋಸ ಮಾಡಿದರು ಎಂದು ಸೋಲಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ, ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್‌ಗೌಡ ಅವರಿಗೆ ಸೋಲಾಗಿದೆ. ಒಳ್ಳೆಯ ಕೆಲಸ ಮಾಡಿದರೂ‌‌ ಕೆಲವೊಮ್ಮೆ ಸೋಲಾಗುತ್ತೆ. ಮುಂದಿನ ಚುನಾವಣೆಯಲ್ಲಿ ಅವರ ಉತ್ತಮ‌ಕಾರ್ಯಗಳಿಗೆ ಮನ್ನಣೆ‌‌ ಸಿಗಲಿದೆ. ಬಿಜೆಪಿಯವರೇ ಮೋಸ‌ ಮಾಡಿದರು ಎಂದು ಯಾಕೆ ಹೇಳಿದರೋ ಗೊತ್ತಿಲ್ಲ. ಸಿಕ್ಕಾಗ ಅವರನ್ನು‌ ಕೇಳುತ್ತೇನೆ. ಎರಡು ಬಾರಿ ಶಾಸಕರಾದವರು ಯಾಕೆ ಹೀಗೆ ಹೇಳಿದ್ದಾರೆ. ಜನರು ಕೆಲವೊಮ್ಮೆ ಕೆಲಸ‌ ಮಾಡಿದ್ದರೂ ಸೋಲಿಸ್ತಾರೆ. ಜನರ‌ ತೀರ್ಪಿಗೆ ನಾವು ತಲೆ ಬಾಗುತ್ತೇವೆ ಎಂದರು.


ಮಸ್ಕಿ ಚುನಾವಣೆಯಲ್ಲಿ ಸೋಲಿಗೆ ಯಾವುದೇ ವ್ಯಕ್ತಿ ಕಾರಣವಲ್ಲ. ವಿಜಯೇಂದ್ರ ಅವರು ಚುನಾವಣಾ ಉಸ್ತುವಾರಿಯಾಗಿದ್ದರು. ಹಾಗಂದ‌ ಮಾತ್ರಕ್ಕೆ ಅವರೇ ಹೊಣೆ‌ ಎಂದು ಹೇಳಲಾಗುವುದಿಲ್ಲ. ನಾವು ಕೂಡ‌‌ ಎಲ್ಲೆಡೆ ಕೆಲಸ ಮಾಡಿದ್ದೆವು. ಸಿಎಂ ಆದಿಯಾಗಿ ಎಲ್ಲರೂ ಒಟ್ಟಿಗೆ ಪ್ರಚಾರ ಮಾಡಿದ್ದೆವು. ಜನರು ಎಲ್ಲವನ್ನೂ‌ ಒಪ್ಪಿಕೊಳ್ಳಬೇಕೆಂದಿಲ್ಲ. ಕೋವಿಡ್ ನಿರ್ವಹಣೆಯಲ್ಲಿ‌ ಸ್ವಲ್ಪ ಹಿನ್ನಡೆಯಾಗಿದೆ. ಸರ್ಕಾರದ‌ ಕೆಲವು ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಕೋವಿಡ್ ನಿರ್ವಹಣೆ ಹಿನ್ನಡೆ‌ ಚುನಾವಣೆ ಮೇಲೆ ಪ್ರಭಾವ ಬೀರಿದೆ. ಕೆಲ‌ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳಬೇಕು. ಮಸ್ಕಿ ಪ್ರಚಾರಕ್ಕೆ ನಾನು ಹೋಗಿಲ್ಲ. ಮಸ್ಕಿ ಚುನಾವಣೆ ಬಗ್ಗೆ ನನಗೆ ಎಳ್ಳಷ್ಟು ಗೊತ್ತಿಲ್ಲ. ಆ ಹುಡುಗನ‌ (ವಿಜಯೇಂದ್ರ) ಮೇಲೆ ತಪ್ಪು‌ ಹೊರಿಸುವುದು ತಪ್ಪು. ಎಲ್ಲರಲ್ಲೂ‌ ಕೆಲವು ದೌರ್ಬಲ್ಯಗಳು ಇರುತ್ತವೆ. ಅವರೇ ಅರ್ಥ ಮಾಡಿಕೊಂಡು ಸರಿಪಡಿಸಿಕೊಳ್ಳಬೇಕು ಎನ್ನುವ ಮೂಲಕ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದರು. ಮಸ್ಕಿ ಉಪಚುನಾವಣೆ ಗೆಲುವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಸ್ವಾಗತಿಸಿದ್ದಾರೆ.

top videos
    First published: