15 ಕ್ಷೇತ್ರಗಳ ಉಪಚುನಾವಣೆ: ಇಂದು ಬಹಿರಂಗ ಪ್ರಚಾರಕ್ಕೆ ತೆರೆ

ಇಂದು ಅಂತಿಮದಿನದ ಪ್ರಚಾರ ಹಿನ್ನೆಲೆ ಕ್ಷೇತ್ರದಲ್ಲಿ ಮೂರು ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ನಡೆಸಲಿದ್ದು, ತಮ್ಮ ಅಭ್ಯರ್ಥಿ ಪರ ಮತಪ್ರಚಾರ ನಡೆಸಲಿದ್ದಾರೆ

Seema.R | news18-kannada
Updated:December 3, 2019, 7:17 AM IST
15 ಕ್ಷೇತ್ರಗಳ ಉಪಚುನಾವಣೆ: ಇಂದು ಬಹಿರಂಗ ಪ್ರಚಾರಕ್ಕೆ ತೆರೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಡಿ. 3): ಡಿ. 5ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆಗೆ ಇನ್ನೇನು 48 ಗಂಟೆ ಬಾಕಿ ಇದ್ದು, ಇಂದು ಸಂಜೆ ಆರುಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಉಪಚುನಾವಣೆ ಘೋಷಣೆಯಾದಗಿನಿಂದಲೂ ಮೂರು ಪಕ್ಷಗಳು ಮತದಾರರನ್ನು ಸೆಳೆಯಲು ಭರ್ಜರಿ ಪ್ರಚಾರ ನಡೆಸಿದ್ದು, ಡಿ.9ರಂದು ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್​-ಜೆಡಿಎಸ್​ನ 17 ಜನ ಅನರ್ಹ ಶಾಸಕರಿಗೆ ಟಿಕೆಟ್​ ನೀಡಿದ್ದ ಬಿಜೆಪಿ ನಾಯಕರು ಅವರ ಗೆಲುವಿಗೆ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇತ್ತ ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ ಕೂಡ ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸುತ್ತಾ ಅವರನ್ನು ಸೋಲಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಾ ತಮ್ಮ ಅಭ್ಯರ್ಥಿಪರ ಮತಯಾಚಿಸಿದ್ದಾರೆ.

ಯಾವುದೇ ಮೈತ್ರಿ ಇಲ್ಲದೇ ಚುನಾವಣಾ ಕಣಕ್ಕೆ ಇಳಿದಿದ್ದ ಜೆಡಿಎಸ್​ ನಾಯಕರು ಕೂಡ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಇಂದು ಅಂತಿಮದಿನದ ಪ್ರಚಾರ ಹಿನ್ನೆಲೆ ಕ್ಷೇತ್ರದಲ್ಲಿ ಮೂರು ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ನಡೆಸಲಿದ್ದು, ತಮ್ಮ ಅಭ್ಯರ್ಥಿ ಪರ ಮತಪ್ರಚಾರ ನಡೆಸಲಿದ್ದಾರೆ

ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ನಾಳೆ ಮನೆ ಮನೆಗೆ ತೆರಳಿ ಅಭ್ಯರ್ಥಿಗಳು ಮತಯಾಚಿಸಬಹುದಾಗಿದೆ. ಆದರೆ, ಐದಕ್ಕಿಂತ ಹೆಚ್ಚಿನ ಗುಂಪು ತೆರಳಿ ಮತಯಾಚಿಸುವಂತಿಲ್ಲ.

15 ಕ್ಷೇತ್ರಗಳಲ್ಲಿ 8,370 ವಿವಿಪ್ಯಾಟ್​ಗಳ ಬಳಕೆ ಮಾಡಿ ಮತದಾನಕ್ಕೆ ಚುನಾವಣಾ ಆಯೋಗ ಕೂಡ ಸಜ್ಜಾಗಿದ್ದು. ಮತದಾನಕ್ಕೆ 78 ಗಂಟೆ ಮೊದಲು ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಮುಖ್ಯಚುನಾವಣಾಧಿಕಾರಿ ಸಂಜೀವ್​ ಕುಮಾರ್​ ತಿಳಿಸಿದ್ದಾರೆ.

ಇದನ್ನು ಓದಿ: ಡಾ.ಸುಧಾಕರ್ ಡೀಲ್ ರಾಜ, ಆತನನ್ನು ನಂಬಿ ಮೋಸ ಹೋದೆ; ಸಿದ್ದರಾಮಯ್ಯ ವಾಗ್ದಾಳಿ

15 ಕ್ಷೇತ್ರಗಳಲ್ಲಿ ಒಟ್ಟು 4,185 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಹಾಗು ಅಂಧರಿಗಾಗಿ 9 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಚುನಾವಣೆಯ ಭದ್ರತೆಗಾಗಿ 15 ಕ್ಷೇತ್ರಗಳಲ್ಲಿ ಹೆಚ್ಚುವರಿ ಪೊಲೀಸ್ ನೇಮಕ ಮಾಡಲಾಗಿದೆ.  900 ಸೂಕ್ಷ್ಮ ಪ್ರದೇಶಗಳಿವೆ. 2,511 ಸಿಆರ್​ಪಿಎಫ್​ ಸೇರಿದಂತೆ ಇತರೆ ಎಲ್ಲಾ ಸಿಬ್ಬಂದಿ ಒಳಗೊಂಡಂತೆ ಒಟ್ಟು 42,509 ಕಾರ್ಯ ನಿವರ್ಹಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.


First published: December 3, 2019, 7:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading