Karnataka Bypolls | ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುತ್ತೇವೆ: ರಮೇಶ್ ಜಾರಕಿಹೊಳಿ

ಸತೀಶ್ ತುಳಿದಷ್ಟೂ ನಾನು ಬೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಅಂಬಿರಾವ್ ಪಾಟೀಲ್ ಅವರನ್ನು ಸತೀಶ್ ಮತ್ತು ಲಖನ್ ವಿರುದ್ಧ ಸ್ಪರ್ಧೆ ಮಾಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.

news18
Updated:December 5, 2019, 11:16 AM IST
Karnataka Bypolls | ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುತ್ತೇವೆ: ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
  • News18
  • Last Updated: December 5, 2019, 11:16 AM IST
  • Share this:
ಬೆಳಗಾವಿ(ಡಿ. 05): ಅನೇಕ ಅಚ್ಚರಿಗಳ ಮೂಟೆ ಹೊತ್ತಿರುವ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಇಂದು ಮತದಾನದ ದಿನ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ಧಾರೆ. ಸಿದ್ದರಾಮಯ್ಯ ಬಗ್ಗೆ ತಾನು ಹಗುರವಾಗಿ ಮಾತನಾಡುವುದಿಲ್ಲ. ಅವರನ್ನು ಮುಂದಿನ ದಿನಗಳಲ್ಲಿ ಬಿಜೆಪಿಗೆ ಕರೆದುಕೊಂಡು ಬರುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬಸ್ ಸ್ಟ್ಯಾಂಡ್  ಹೂ, ಎಸ್​ಟಿಡಿ ಬೂತ್ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ ಎನ್ನುತ್ತಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವ್ಯಂಗ್ಯ ಮಾತುಗಳಲ್ಲಿ ರಮೇಶ್ ಜಾರಕಿಹೊಳಿ ಚುಚ್ಚಿದರು. ಇನ್ನು, ತಮ್ಮ ಪ್ರತಿಸ್ಪರ್ಧಿ ಲಖನ್ ಜಾರಕಿಹೊಳಿ ಅವರನ್ನ ತರಾಟೆಗೆ ತೆಗೆದುಕೊಂಡ ಅವರು, ಆತನ ನೆರಳೂ ಸಹ ತನ್ನ ಜೊತೆ ಇರುವುದು ಬೇಡ. ಹರಾಮಿ ದುಡ್ಡನ್ನು ಖಾಲಿ ಮಾಡಲು ಆತ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ ಎಂದು ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟೀಕಿಸಿದರು.

ಇದನ್ನೂ ಓದಿ: ಹರಾಮಿ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ; ರಮೇಶ್ ಜಾರಕಿಹೊಳಿ ವಾಗ್ದಾಳಿ

ಸತೀಶ್ ತುಳಿದಷ್ಟೂ ನಾನು ಬೆಳೆದಿದ್ದೇನೆ. ಮುಂದಿನ ದಿನಗಳಲ್ಲಿ ಅಂಬಿರಾವ್ ಪಾಟೀಲ್ ಅವರನ್ನು ಸತೀಶ್ ಮತ್ತು ಲಖನ್ ವಿರುದ್ಧ ಸ್ಪರ್ಧೆ ಮಾಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದರು.

ಡಿಕೆ ಶಿವಕುಮಾರ್ ಬಗ್ಗೆ ಅವರು ಈ ಸಂದರ್ಭದಲ್ಲಿ ಒಳ್ಳೆಯ ಮಾತುಗಳನ್ನಾಡಿದ್ದು ಗಮನಾರ್ಹ. ಬೆಳಗಾವಿ ಉಸಾಬರಿ ಬಿಟ್ಟರೆ ಡಿಕೆ ನನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ನಾಲಾಯಕ್ ಎಂದು ಕಟುವಾಗಿ ಟೀಕಿಸಿದರು.

ಇವತ್ತು ನಡೆದಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೇ ಕ್ಲೀನ್ ಸ್ವೀಪ್ ಮಾಡುತ್ತದೆ. ಒಂದು ಸ್ಥಾನ ಮಾತ್ರ ಗೆಲುವು ಕಷ್ಟವಾಗಿದೆ. ಆ ಒಂದು ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿಯನ್ನು ವಿಧಾನಪರಿಷತ್ ಮೂಲಕ ಆಯ್ಕೆ ಮಾಡಿ ಮಂತ್ರಿಯಾಗಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ