Karnataka Budget 2019 | ಕ್ರಾಂತಿಕಾರಿ ಬಜೆಟ್​ ನಿರೀಕ್ಷೆ ಮಾಡಿದ್ದೆವು, ಆದರೆ ಇದೊಂದು ಡೋಂಗಿ ಬಜೆಟ್​; ಯಡಿಯೂರಪ್ಪ ಟೀಕೆ

ಹಾಸನವನ್ನು ಕುಮಾರಸ್ವಾಮಿ ಮರೆತಿಲ್ಲ. ಆದರೆ ಹಾಸನ ಬಿಟ್ಟು ಬೇರೆಯ ಜಿಲ್ಲೆ ಅವರಿಗೆ ನೆನಪಾಗಿಲ್ಲ. ಯಾವ ಇಲಾಖೆ ಅಭಿವೃದ್ಧಿ ಕಲ್ಯಾಣ ಆಗಲಿಲ್ಲ. ಆಲಮಟ್ಟಿ ಅಣೆಕಟ್ಟನ್ನು 520 ಮೀಟರ್​ಗೆ ಏರಿಕೆ ಮಾಡುವ ಕೆಲಸ ಮಾಡಲಿಲ್ಲ. ನೀರಾವರಿಗೆ 17,217 ಕೋಟಿ ರೂ. ಮೀಸಲಿಟ್ಟ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಇದೊಂದು ಡೋಂಗಿ ಬಜೆಟ್​. ಇದನ್ನು ಖಂಡಿಸುತ್ತೇನೆ ಎಂದು ಬಿಎಸ್​ವೈ ಹೇಳಿದರು.

HR Ramesh | news18
Updated:February 8, 2019, 3:35 PM IST
Karnataka Budget 2019 | ಕ್ರಾಂತಿಕಾರಿ ಬಜೆಟ್​ ನಿರೀಕ್ಷೆ ಮಾಡಿದ್ದೆವು, ಆದರೆ ಇದೊಂದು ಡೋಂಗಿ ಬಜೆಟ್​; ಯಡಿಯೂರಪ್ಪ ಟೀಕೆ
ಬಿಎಸ್​ವೈ
HR Ramesh | news18
Updated: February 8, 2019, 3:35 PM IST
ಬೆಂಗಳೂರು: ಸನ್ಮಾನ್ಯ ಸಿಎಂ ಕುಮಾರಸ್ವಾಮಿ ಮೂರನೇ ಬಜೆಟ್ ಮಂಡಿಸಿದ್ದಾರೆ.  ಹಿಂದಿನ ಬಜೆಟ್​ನ ಶೇ.35 ಕೂಡ ಖರ್ಚು ಮಾಡಿಲ್ಲ. ಈಗ ಮತ್ತೊಂದು ಬಜೆಟ್​ ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 45 ಸಾವಿರ ಕೋಟಿ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡ್ತೇನೆ ಅಂತ ಹೇಳಿದ್ರು. ಆದರೆ ಅದನ್ನು ಮಾಡಿಲ್ಲ. ಇದೇ ಜೂನ್ ನಲ್ಲಿ ಒಳಗೆ ಮನ್ನಾ ಮಾಡ್ತೀನಿ ಅಂದಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಸುಳ್ಳು ಹೇಳಿ ವಂಚನೆ ಮಾಡುತ್ತಿದ್ದಾರೆ. ಕಳೆದ ಏಳೆಂಟು ತಿಂಗಳಿಂದ ಕ್ರಾಂತಿಕಾರಕ ಬಜೆಟ್ ಮಂಡಿಸುತ್ತಾರೆ ಅಂತ ಭಾವಿಸಿದ್ದೆವು. ಆದರೆ, ಅದು ಸಂಪೂರ್ಣ ಹುಸಿಯಾಗಿದೆ. ಸೋಮವಾರದಿಂದ ಸದನದ ಒಳಗೆ ಬಜೆಟ್​ ಮೇಲೆ ಚರ್ಚೆ ಮಾಡುತ್ತೇವೆ ಎಂದರು.

ಇದನ್ನು ಓದಿ: Karnataka Budget 2019 Highlights: ಇಲ್ಲಿದೆ ಬಜೆಟ್​ ಪ್ರತಿಯನ್ನು ನೀವೇ ಓದುವ ಅವಕಾಶ

ಹಾಸನವನ್ನು ಕುಮಾರಸ್ವಾಮಿ ಮರೆತಿಲ್ಲ. ಆದರೆ ಹಾಸನ ಬಿಟ್ಟು ಬೇರೆಯ ಜಿಲ್ಲೆ ಅವರಿಗೆ ನೆನಪಾಗಿಲ್ಲ. ಯಾವ ಇಲಾಖೆ ಅಭಿವೃದ್ಧಿ ಕಲ್ಯಾಣ ಆಗಲಿಲ್ಲ. ಆಲಮಟ್ಟಿ ಅಣೆಕಟ್ಟನ್ನು 520 ಮೀಟರ್​ಗೆ ಏರಿಕೆ ಮಾಡುವ ಕೆಲಸ ಮಾಡಲಿಲ್ಲ. ನೀರಾವರಿಗೆ 17,217 ಕೋಟಿ ರೂ. ಮೀಸಲಿಟ್ಟ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಇದೊಂದು ಡೋಂಗಿ ಬಜೆಟ್​. ಇದನ್ನು ಖಂಡಿಸುತ್ತೇನೆ ಎಂದು ಬಿಎಸ್​ವೈ ಹೇಳಿದರು.

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...