ಬೆಂಗಳೂರು: ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ (Assembly Election 2023) ಇರೋ ಹಿನ್ನೆಲೆ ಬಿಜೆಪಿ ಸರ್ಕಾರದ (BJP Government) ಬಜೆಟ್ ಹೇಗಿರುತ್ತೆ ಎಂದು ಇಡೀ ರಾಜ್ಯದ ಜನತೆ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಬಜೆಟ್ ಮಂಡನೆ ಮಾಡಿದ್ದು, ಕಾಂಗ್ರೆಸ್ ಟ್ವಿಟ್ಟರ್ ಮೂಲಕ ತನ್ನ ಪ್ರತಿಕ್ರಿಯೆಯನ್ನು ನೀಡಿದೆ. ಹಿಂದಿನ ಬಜೆಟ್‌ನ ಪ್ರಗತಿ 50% ಕೂಡ ದಾಟಿಲ್ಲ. ಇಂದಿನ ಬಜೆಟ್ ಟೀಕಾಫ್ ಆಗುವುದೇ ಇಲ್ಲ. ಚುನಾವಣೆಗಾಗಿ ಬಣ್ಣ ಬಣ್ಣದ ಘೋಷಣೆ ಮಾಡಿ ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನದಲ್ಲಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದೆ.
ಯಾವುದೇ ಯೋಜನೆ ಬಗ್ಗೆ ಕೇಳಿದರೂ ಅನುದಾನವಿಲ್ಲ, ಹಣವಿಲ್ಲ ಎನ್ನುವವರ ಬಜೆಟ್‌ನಿಂದ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ. 50% ರಷ್ಟೂ ಸಹ ಹಿಂದಿನ ಬಜೆಟ್‌ನ ಘೋಷಣೆಗಳು ಪ್ರಗತಿಯಾಗಿಲ್ಲ. 90%ರಷ್ಟು ಬಿಜೆಪಿಯ ಪ್ರಣಾಳಿಕೆಯ ಭರವಸೆಗಳು ಈಡೇರಿಲ್ಲ. 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಹೀಗಿರುವಾಗ ಬಸವರಾಜ್ ಬೊಮ್ಮಾಯಿ ಅವರು ಓದುತ್ತಿರುವ ಬಜೆಟ್‌ನಲ್ಲಿ ಬದ್ಧತೆ ಇಲ್ಲ. ರಾಜ್ಯದ ಜನರ ಕಿವಿ ಮೇಲೆ ಹೂವಿಡುವ ಪ್ರಯತ್ನವಷ್ಟೇ ಎಂದು ಕಿವಿ ಮೇಲೆ ಹೂವಷ್ಟೇ ಎಂದು ಹ್ಯಾಶ್ ಟ್ಯಾಗ್ ಬಳಸಿ ವ್ಯಂಗ್ಯ ಮಾಡಿದೆ.
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ
ಸಿಎಂ ಭಾಷಣದಲ್ಲಿ ಉತ್ಸಾಹ ಇರಲಿಲ್ಲ. ಇದು ಕನ್ನಡಿಗರ ಕಿವೆ ಮೇಲೆ ಹೂವ ಇಡುವ ಬಜೆಟ್. ಯಾವ ಸಮುದಾಯದವರಿಗೂ ನ್ಯಾಯ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ನೀಲಿ ನಕ್ಷೆ ಇಲ್ಲ. ಕಳೆದ ಸಿಎಂ ಬಜೆಟ್‌ನಲ್ಲಿ 56% ಖರ್ಚಾಗಿದೆ ಅನ್ನೋ ಮಾಹಿತಿ ಇದೆ. ಇಲ್ಲಿ ಯಾವ ಸರ್ಕಾರಕ್ಕೂ ನ್ಯಾಯ ಸಿಕ್ಕಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ (Former Minister Priayank Kharge) ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದರು.
ಡಿಕೆ ಶಿವಕುಮಾರ್ ಪ್ರತಿಕ್ರಿಯೆ
ಕಳೆದ ಬಾರಿ ಬಜೆಟ್‌ನಲ್ಲಿ ಏನು ಮಾಡಿದ್ದೀವಿ ಅಂತ ಕೇಳಿದ್ದೀವಿ. ಆದರೆ ಕಳೆದ ಬಾರಿಯ ಬಜೆಟ್‌ನಲ್ಲಿ ಭರವಸೆಗಳನ್ನು ಶೇ.50ರಷ್ಟು ಈಡೇರಿಲ್ಲ. ಅವರ ಪ್ರಣಾಳಿಕೆಯ ಆಶ್ವಾಸನೆಯಲ್ಲಿ 90% ಏನು ಮಾಡಿಲ್ಲ. ರಾಜ್ಯದ ಜನತೆಗೆ ಚೆಂಡು ಹೂ ಇಟ್ಟಿದ್ದಾರೆ. ಇದು ಬಿಸಿಲು ಕುದುರೆ ಬಜೆಟ್. ಕಣ್ಣಿಗೂ ಕಾಣೋದಿಲ್ಲ, ಯಾರಿಗೂ ಸಿಗೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಹೇಳಿದರು.
ಇದನ್ನೂ ಓದಿ: Karnataka Budget 2023-24 Live: ನಿರುದ್ಯೋಗಿಗಳಿಗೆ ಸರ್ಕಾರದಿಂದ ಸಂಬಳ, ಬಜೆಟ್‌ನಲ್ಲಿ ಸಿಎಂ ಘೋಷಣೆ
ಸಿಎಂಗೆ ಸ್ವರನೇ ಇರಲಿಲ್ಲ. ಧಮ್ಮು ಧೈರ್ಯ ಅಂತ ಮಾತಾಡ್ತಾರಲ್ಲ? ಈ ಬಜೆಟ್‌ನಲ್ಲಿ ಸ್ವರವೇ ಇರಲಿಲ್ಲ. ಯಾವುದೇ ಭರವಸೆ ಈ ಬಜೆಟ್‌ನಲ್ಲಿ ಇಲ್ಲ. ಈ ಬಜೆಟ್ ಯಾವ ವರ್ಗಕ್ಕೂ ಇಲ್ಲ. ಕ್ಷೇತ್ರದ ಶಾಸಕರಿಗೆ ಒಂದೊಂದು ಸ್ಕೀಂ ಕೊಟ್ಟಿದ್ದಾರೆ. ಕಳೆದ ಬಾರಿ ಮೇಕೆದಾಟು ಯೋಜನಗೆ ಒಂದು ಸಾವಿರ ಕೋಟಿ ರೂಪಾಯಿ ಇರಿಸಿದರಲ್ಲ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ