• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Budget 2023: ಆ್ಯಸಿಡ್​ ದಾಳಿಗೆ ಒಳಗಾದವರಿಗೆ ₹10 ಸಾವಿರ ಮಾಸಾಶನ; ಸಿಎಂ ಬೊಮ್ಮಾಯಿಗೆ ಅಭಿನಂದನೆ ತಿಳಿಸಿದ ಸಂತ್ರಸ್ತೆ

Karnataka Budget 2023: ಆ್ಯಸಿಡ್​ ದಾಳಿಗೆ ಒಳಗಾದವರಿಗೆ ₹10 ಸಾವಿರ ಮಾಸಾಶನ; ಸಿಎಂ ಬೊಮ್ಮಾಯಿಗೆ ಅಭಿನಂದನೆ ತಿಳಿಸಿದ ಸಂತ್ರಸ್ತೆ

ಕರ್ನಾಟಕ ಬಜೆಟ್​ 2023-24

ಕರ್ನಾಟಕ ಬಜೆಟ್​ 2023-24

ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಾಕ್ಲಿಯರ್ ಇಂಪ್ಲಾಂಟ್, ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ನೆರವಿನಂತಹ ಸೂಕ್ಷ್ಮ ಕ್ರಮಗಳನ್ನು ಕೈಗೊಂಡಿದ್ದೇವೆ. ಆ ಮೂಲಕ ಸ್ಪಂದನಾಶೀಲ ಹಾಗೂ ಸಂವೇದನಾಶೀಲ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಬಜೆಟ್​​ನಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಕರ್ನಾಟಕ ರಾಜ್ಯ ಬಜೆಟ್​ 2023-23ರಲ್ಲಿ (Karnataka Budget 2023) ಸರ್ಕಾರದಿಂದ ಆ್ಯಸಿಡ್​ ದಾಳಿಗೆ (Acid Attack) ಒಳಗಾದವರಿಗೆ ನೀಡುತ್ತಿದ್ದ 3 ಸಾವಿರ ರೂಪಾಯಿ ಮಾಸಾಶನವನ್ನು ಹತ್ತು ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಬಜೆಟ್​ ಮಂಡನೆ ವೇಳೆ ಘೋಷಣೆ ಮಾಡಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ (Bengaluru) ಹೆಗ್ಗನಹಳ್ಳಿ ಬಳಿ ಆ್ಯಸಿಡ್​ ದಾಳಿಗೆ ಒಳಗಾಗಿರುವ ಯುವತಿ, ಸಿಎಂ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.


ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದ ಸಂತ್ರಸ್ತೆ


ಸರ್ಕಾರ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಯುವತಿ, ದಾಳಿಯಿಂದ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆ. ಈ ವೇಳೆಯೇ ಅವರು ಮಾಸಾಶನವನ್ನು ಮೂರು ಸಾವಿರದಿಂದ, ಹತ್ತು ಸಾವಿರ ಹೆಚ್ಚಳ ಮಾಡಲಾಗಿದೆ.


ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಕಳೆದ ಮೂರು ತಿಂಗಳಿನಿಂದ ನನಗೆ ಹತ್ತು ಸಾವಿರ ರೂಪಾಯಿ ಮಾಸಾಶನ ಬರುತ್ತಿದೆ. ಇಷ್ಟೆ ಅಲ್ಲದೆ ಚಿಕಿತ್ಸೆಗೆ ಹತ್ತು ಲಕ್ಷ ಹಣದ ಚೆಕ್ ಸಹ ಕೊಡಲಾಗಿದೆ. ಈ ಮೂಲಕ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಸರ್ಕಾರ ಸಹಕಾರಿಯಾಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: Karnataka Budget 2023-24 Live: ಸರ್ಕಾರಿ ಉದ್ಯೋಗಿಗಳ ಆಸೆಗೆ ತಣ್ಣೀರೆರಚಿದ ಬಜೆಟ್​, 7ನೇ ವೇತನ ಆಯೋಗದ ಬಗ್ಗೆ ಸಿಎಂ ಮೌನ


ಮನೆ ಹಾಗೂ ಸರ್ಕಾರಿ ಕೆಲಸ ನೀಡುವ ಭರವಸೆ


ಸಿಎಂ ಭೇಟಿ ವೇಳೆ ಅವರು ನನಗೆ ಆಸ್ಪತ್ರೆಯ ಕೊಟೆಶನ್​ ತೆಗೆದುಕೊಂಡು ಬರುವಂತೆ ಹೇಳಿದ್ದರು. ಅದರಂತೆ 12 ಲಕ್ಷ ರೂಪಾಯಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸಿದ್ದರು. ದಾಳಿಗೂ ಮೊದಲು ನೀನು ಹೇಗೆ ಇದ್ದೋ ಅದೇ ರೀತಿ ಆಗುತ್ತೀಯಾ ಯೋಚನೆ ಮಾಡಬೇಡ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಮನೆ ಹಾಗೂ ಸರ್ಕಾರಿ ಕೆಲಸ ನೀಡುವ ಭರವಸೆಯನ್ನು ನೀಡಿ ಬೆಂಬಲ ನೀಡಿದ್ದಾರೆ. ಅವರಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ. ಮುಂದೆಯೂ ಇದೇ ರೀತಿ ಎಲ್ಲಾ ಹೆಣ್ಣು ಮಕ್ಕಳಿಗೆ ನೆರವು ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


ನಮ್ಮ ಸರ್ಕಾರ ಜನರ ನೆರವಿಗೆ ಧಾವಿಸಿದೆ


ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಲವು ಸಕಾರಾತ್ಮಕ ಬೆಳವಣಿಗೆಗಳನ್ನು ನಾವು ಕಂಡಿದ್ದೇವೆ. ರಾಜ್ಯದ ತಲಾ ಆದಾಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2.04 ಲಕ್ಷ ರೂಪಾಯಿ ಗಳಿಂದ 3.32 ಲಕ್ಷ ರೂಪಾಯಿ ಗಳಿಗೆ ಹೆಚ್ಚಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ದೇಶದ ಸರಾಸರಿಗಿಂತ ಕಡಿಮೆಯಾಗಿದ್ದು, ಅಭಿವೃದ್ಧಿಯ ಬೆಳವಣಿಗೆ ದರ ಹೆಚ್ಚಾಗಿದೆ.
ಶಿಶು ಮರಣ ದರ ಹಾಗೂ ತಾಯಿ ಮರಣ ದರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದಲ್ಲದೆ ರಾಜ್ಯದಲ್ಲಿ ಪ್ರವಾಹ, ಬೆಳೆನಷ್ಟ, ಮಾನವ-ವನ್ಯಪ್ರಾಣಿ ಸಂಘರ್ಷ, ಜಾನುವಾರುಗಳಿಗೆ ಸಾಂಕ್ರಾಮಿಕದಂತಹ ಸಂಕಷ್ಟಗಳು ತಲೆದೋರಿದಾಗಲೆಲ್ಲ ನಮ್ಮ ಸರ್ಕಾರ ಜನರ ನೆರವಿಗೆ ಧಾವಿಸಿದೆ. ಸಕಾಲದಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ.


ಇದನ್ನೂ ಓದಿ: Karnataka Budget 2023: ಎರಡು ಕಿವಿಗಳಿಗೂ ಹೂ ಇಟ್ಟುಕೊಂಡು ಸಿಎಂ ಬಳಿಯೇ ಬಜೆಟ್ ಗೇಲಿ ಮಾಡಿದ ಡಿಕೆ ಶಿವಕುಮಾರ್!


ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಾಕ್ಲಿಯರ್ ಇಂಪ್ಲಾಂಟ್, ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ನೆರವಿನಂತಹ ಸೂಕ್ಷ್ಮ ಕ್ರಮಗಳನ್ನು ಕೈಗೊಂಡಿದ್ದೇವೆ. ಆ ಮೂಲಕ ಸ್ಪಂದನಾಶೀಲ ಹಾಗೂ ಸಂವೇದನಾಶೀಲ ಸರ್ಕಾರವಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ತಂತ್ರಜ್ಞಾನದ ಸದ್ಬಳಕೆಯೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ Ease of Living ಆಶಯವನ್ನು ಸಾಕಾರಗೊಳಿಸಲು ನಮ್ಮ ಸರ್ಕಾರ ಒತ್ತು ನೀಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

Published by:Sumanth SN
First published: