ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ವೇಳೆ ಬಿಜೆಪಿ ಸರ್ಕಾರ (BJP Government) ಕೊನೆಯ ಬಜೆಟ್ ಮಂಡನೆ (Karnataka Budget) ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Boomai) ಅವರು ಹಳೆ ಮೈಸೂರು ಭಾಗದಲ್ಲಿ ಹಿಂದೂತ್ವದ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಬಜೆಟ್‌ನಲ್ಲಿ ರಾಮನಗರ ರಾಮದೇವರ ಬೆಟ್ಟದಲ್ಲಿ (Ramadevara Betta) ರಾಮಮಂದಿರ ನಿರ್ಮಾಣ ಘೋಷಣೆ ಮಾಡಿದ್ದಾರೆ. ಆದರೆ ಯೋಜನೆ ಅನುದಾನ ನಿಗದಿ ಮಾಡಿಲ್ಲ. ಇತ್ತ ರಾಮಮಂದಿರ (Ram Mandir) ನಿರ್ಮಾಣ ಘೋಷಣೆ ಕುರಿತಂತೆ ಅಪಸ್ವರ ಎತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು, ರಾಮನಗರದಲ್ಲಿ ರಾಮಮಂದಿರ ಯಾಕೆ ಕಟ್ಟಬೇಕು, ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ನಿರ್ಮಾಣವಾಗ್ತಿದೆ. ಹೀಗಿದ್ದರೂ ಇಲ್ಲಿಯೂ ರಾಮಮಂದಿರದ ಅಗತ್ಯವೇನಿತ್ತು ಅಂತ ಪ್ರಶ್ನೆ ಮಾಡಿದ್ದಾರೆ.
ಮೊದಲು ಬಿಜೆಪಿ ಆಫೀಸ್ ಕಟ್ಟಲಿ ಎಂದು ಸವಾಲು
ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆ ಶಿವಕುಮಾರ್, ಉನ್ನತ ಶಿಕ್ಷಣ ಮತ್ತು ಐಟಿ ಸಚಿವ ಅಶ್ವತ್ಥ್ ನಾರಾಯಣ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ರಾಮ ಮಂದಿರವಾದರೂ ಕಟ್ಟು, ಸೀತಾ ಮಂದಿರವಾದರೂ ಕಟ್ಟು ಅಥವಾ ಅಶ್ವತ್ಥ್ ನಾರಾಯಣ ಮಂದಿರವಾದರೂ ಕಟ್ಟು, ಬಸವರಾಜ ಮಂದಿರವಾದರೂ ಕಟ್ಟು , ಯಡಿಯೂರಪ್ಪ ಮಂದಿರವಾದರೂ ಕಟ್ಟು ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಇದಕ್ಕಿಂತ ಮೊದಲು ರಾಮನಗರದಲ್ಲಿ ಬಿಜೆಪಿ ಆಫೀಸ್ ಕಟ್ಟಲಿ ಎಂದು ಸವಾಲು ಹಾಕಿದ್ದಾರೆ.
ಸಿಲ್ಕ್ ಡೆವಲಪ್ಮೆಂಟ್ ಹಗರಣವನ್ನು ನಾನು ಇನ್ನು ಬಿಚ್ಚಿಟ್ಟಿಲ್ಲ
ನನಗೆ ನನ್ನ ಕಚೇರಿಯೇ ದೇವಸ್ಥಾನ. ಏನೋ ಕ್ಲೀನ್ ಮಾಡಿಸ್ತೀನಿ ಅಂದ ಏನಪ್ಪ ಮಾಡಿದ? ಅಲ್ಲಿಗೆ ಬಂದು ವೃಷಭಾವತಿ ನೀರು ಮೊದಲು ಕುಡಿಯಲಿ. ಕೊಳಚೆ ನೀರನ್ನು ಶುದ್ಧೀಕರಣ ಮಾಡ್ತೀನಿ ಅಂತ ಹೇಳಿದ್ದ ಅಲ್ವಾ ಇದು ಏನಾಯ್ತು? ಕೊಚ್ಚೆ ನೀರನ್ನು ಕ್ಲೀನ್ ಮಾಡ್ತಿದ್ದಾನಾ, ಭ್ರಷ್ಟಾಚಾರ ನಿಲ್ಲಿಸಿದ್ದಾನಾ? ಸಿಲ್ಕ್ ಡೆವಲಪ್ಮೆಂಟ್ ಹಗರಣವನ್ನು ನಾನು ಇನ್ನು ಬಿಚ್ಚಿಟ್ಟಿಲ್ಲ. ಇನ್ನು ಕೆಲ ದಿನಗಳಲ್ಲಿ ಅದನ್ನೂ ಬಿಚ್ಚಿಡುತ್ತೇನೆ.
ಈಗಾಗಲೇ ಗುಡ್ಡದ ಮೇಲೆ ರಾಮ ಮಂದಿರ ಇದೆ, ಜನರನ್ನು ದಿಕ್ಕು ತಪ್ಪಿಸಲು ಇದನ್ನು ಮಾಡುತ್ತಿದ್ದಾರೆ. ಅವರಿಗೆ ಅಭಿವೃದ್ಧಿಯ ಗುರಿ ಇಲ್ಲ. ನಮ್ಮದು ಬದುಕು, ಅವರದ್ದು ಭಾವನೆ. ಭಾವನೆಗಳ ಮೂಲಕ ಚುನಾವಣೆ ಗೆಲ್ಲಲ್ಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತಿದೆ
ಇತ್ತ ಡಿಕೆ ಶಿವಕುಮಾರ್ಗೆ ತಿರುಗೇಟು ನೀಡಿದ ಸಚಿವ ಅಶ್ವತ್ಥ್ ನಾರಾಯಣ, ನಮ್ಮ ಪಕ್ಷ ರಾಜ್ಯದಾದ್ಯಂತ ಕಚೇರಿಗಳನ್ನ ಕಟ್ಟುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತಿದೆ. ಚುನಾವಣೆ ಬಳಿಕ ಎಲ್ಲಿರುತ್ತಾರೆ ನೋಡೋಣಾ ಎಂದರು. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಬಹುಕಾಲದ ಯೋಜನೆ. ಅದಕ್ಕೆ ಬೇಕಾದ ಅನುಕೂಲವನ್ನ ಮಾಡಲಾಗುತ್ತದೆ.
ಕೆಂಪೇಗೌಡ ಸರ್ಕ್ಯೂಟ್ ಕರ್ನಾಟಕದಲ್ಲೇ ಬೆಸ್ಟ್ ಸರ್ಕ್ಯೂಟ್ ಮಾಡಲಾಗುತ್ತದೆ. ಸಾವನದುರ್ಗದಲ್ಲಿ ರೋಪ್ ವೇ ಮಾಡುತ್ತಿದ್ದಾರೆ. ರಾಮ ಮಂದಿರ ಮತ್ತು ಬಿಜೆಪಿ ಕಚೇರಿಗೆ ಲಿಂಕ್ ಮಾಡುವುದಕ್ಕೆ ಏನು ಹೇಳ್ಬೇಕು. ಮಂದಿರ ಕಟ್ಟುತ್ತಿದ್ದೀವಿ ಎಂದರೆ ಎಲ್ಲರು ಖುಷಿ ಪಡಬೇಕು. ಅವರಿಗೆ ಆದ್ಯತೆ ಇಲ್ಲ, ನಾವು ಮಾಡ್ತೀವಿ ಎಂದರು.
ಇದನ್ನೂ ಓದಿ: Aero India 2023: ಹೆಚ್‌ಎಎಲ್ ವಿಮಾನದಲ್ಲಿ ಮತ್ತೆ ಬಂದ ಹನುಮ! 2ನೇ ದಿನ ಚಿತ್ರ ತೆರವು, ಕೊನೆ ದಿನ ಪ್ರತ್ಯಕ್ಷ!
ಬೇರೆಯವರಿಗೆ ಕಿವಿಗೆ ಹೂ ಮುಡಿಸುವರು, ಇವತ್ತು ಅವರೇ ಹೂ ಇಟ್ಟುಕೊಂಡರು
ರಾಜ್ಯ ಸರ್ಕಾರದ ಬಜೆಟ್ ಸಂಪೂರ್ಣವಾಗಿ ಜನಪರವಾಗಿದೆ. ಈ ಬಜೆಟ್ ಎಲ್ಲಾ ವರ್ಗದ ಎಲ್ಲಾ ಜನರ ಪರವಾಗಿದೆ. ಅಭಿವೃದ್ದಿ ಪೂರಕವಾಗಿ, ಸುಸ್ಥಿರವಾಗಿರುವ ಬಜೆಟ್ ಇದು. ಕೃಷಿಕರ ಸಬಲೀಕರಣ, ಯುವಕರಿಗೆ ಕೌಶಲ್ಯ, ಉದ್ಯೋಗದ ಭರವಸೆ ನೀಡಲಾಗಿದೆ. ಮಹಿಳೆಯರಿಗೆ ಮಾಸಾಶನ ನೀಡಿರುವುದು ಒಳ್ಳೆಯ ಬೆಳವಣಿಗೆ. ಕಾಂಗ್ರೆಸ್‌ನಲ್ಲಿ ಅವರ ಹಾಸ್ಯ ಅವರೇ ಮಾಡಿಕೊಳ್ಳಲಾಗುತ್ತದೆ. ಬೇರೆಯವರಿಗೆ ಕಿವಿಗೆ ಹೂ ಮುಡಿಸುವರು, ಇವತ್ತು ಅವರೇ ಹೂ ಇಟ್ಟುಕೊಂಡು ಬಂದಿದ್ದರು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ