• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Budget 2023: ಎರಡು ಕಿವಿಗಳಿಗೂ ಹೂ ಇಟ್ಟುಕೊಂಡು ಸಿಎಂ ಬಳಿಯೇ ಬಜೆಟ್ ಗೇಲಿ ಮಾಡಿದ ಡಿಕೆ ಶಿವಕುಮಾರ್!

Karnataka Budget 2023: ಎರಡು ಕಿವಿಗಳಿಗೂ ಹೂ ಇಟ್ಟುಕೊಂಡು ಸಿಎಂ ಬಳಿಯೇ ಬಜೆಟ್ ಗೇಲಿ ಮಾಡಿದ ಡಿಕೆ ಶಿವಕುಮಾರ್!

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಕನ್ನಡಿಗರ ಕಿವಿ ಮೇಲೆ ಹೂವ ಇಡುವ ಬಜೆಟ್. ಸರ್ಕಾರ ಕ್ಲೋಸ್, ಬಾಯ್ ಬಾಯ್. ಇದೊಂದು ಶೋಕೇಶ್​ ಬಜೆಟ್ ಅಷ್ಟೇ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ತಮ್ಮ ಎರಡನೇ ಬಜೆಟ್ (Kanrataka Budget 2023)​​, ಪ್ರಸ್ತುತ ಬಿಜೆಪಿ ಸರ್ಕಾರ (BJP Government) ಕೊನೆಯ ಬಜೆಟ್​​​ಅನ್ನು ಇಂದು ಮಂಡನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಬಜೆಟ್​ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar )​, ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎಂದು ಟೀಕೆ ಮಾಡಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ ಅವರ ಎದುರೇ ಎರಡು ಕಿವಿಗೂ ಹೂ  (Fowler) ಇಟ್ಟುಕೊಂಡು ಬಂದು ನಿಮ್ಮ ಬಜೆಟ್​​ ಬಿಸಿಲು ಕುದುರೆ ಬಜೆಟ್​​ ಎಂದು ಗೇಲಿ ಮಾಡಿದ್ದಾರೆ. ಇನ್ಮು ಎರಡು ಕಿವಿಗಳಿಗೂ ಹೂ ಇಟ್ಟುಕೊಂಡು ಬಂದ ಡಿಕೆ ಶಿವಕುಮಾರ್ ಅವರನ್ನು ಆಶ್ಚರ್ಯದಿಂದ ಕಂಡ ಸಿಎಂ ಬೊಮ್ಮಾಯಿ ನಕ್ಕು ಸುಮ್ಮನಾಗಿದ್ದಾರೆ. ಆ ಬಳಿಕ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರ ಡಿಕೆ ಶಿವಕುಮಾರ್ ಅವರ ಕಿವಿ ಮೇಲಿದ್ದ ಹೂವನ್ನು ತೆಗೆದು ಹಾಕಿದ್ದರು.


ರಾಜ್ಯದ ಜನತೆಗೆ ಚೆಂಡು ಹೂ ಇಟ್ಟಿದ್ದಾರೆ


ಬಜೆಟ್​ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್​, ಕಳೆದ ಬಜೆಟ್‌ನಲ್ಲಿ ಏನು ಮಾಡಿದ್ದೀರಿ ಅಂತ ಕೇಳಿದೆ. ಶೇಕಡಾ 50ರಷ್ಟು ಬಜೆಟ್​ ಘೋಷಣೆಗಳನ್ನು ಈಡೇರಿಸಿಲ್ಲ. ಅವರ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಲ್ಲಿ ಶೇಕಡಾ 90ರಷ್ಟು ಅಂಶಗಳನ್ನು ಈಡೇರಿಸಿಲ್ಲ. ರಾಜ್ಯದ ಜನತೆಗೆ ಚೆಂಡುವ್ವ ಇಟ್ಟಿದ್ದಾರೆ ಎಂದು ಟೀಕೆ ಮಾಡಿದ್ದಾರೆ.




ಇದನ್ನೂ ಓದಿ: Karnataka Budget 2023-24 Live: ಸರ್ಕಾರಿ ಉದ್ಯೋಗಿಗಳ ಆಸೆಗೆ ತಣ್ಣೀರೆರಚಿದ ಬಜೆಟ್​, 7ನೇ ವೇತನ ಆಯೋಗದ ಬಗ್ಗೆ ಸಿಎಂ ಮೌನ


ಹೆಣ್ಣು ಮಕ್ಕಳಿಗೆ 500 ರೂಪಾಯಿ ಕೊಡ್ತಾರಂತೆ


ಅಲ್ಲದೆ, ಇದು ಬಿಸಿಲು ಕುದುರೆ ಬಜೆಟ್. ಕಣ್ಣಿಗೂ ಕಾಣೋದಿಲ್ಲ, ಯಾರಿಗೂ ಸಿಗೋದಿಲ್ಲ. ಹೆಣ್ಣುಮಕ್ಕಳಿಗೆ 2 ಸಾವಿರ ರೂಪಾಯಿ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಇವರು ಬಿಪಿಎಲ್ ಫ್ಯಾಮಿಲಿಗೆ 500 ರೂಪಾಯಿ ಕೊಡ್ತಾರಂತೆ. ರಾಜ್ಯದ ಜಿ ಎಸ್‌ಟಿಯಲ್ಲಿ ಶೇಕಡಾ 15ರಷ್ಟು ಹಣ ವಾಪಸ್ ಬರುತ್ತಿಲ್ಲ.


ಸಿಎಂ ಬೊಮ್ಮಾಯಿಗೆ ಸ್ವರನೇ ಇರಲಿಲ್ಲ


ಜಾತ್ರೆಯಲ್ಲಿ ಖರೀದಿ ಮಾಡಿದ ಕರಿ ಕನ್ನಡಕದ ರೀತಿ ಈ ಬಜೆಟ್. ಇದರಲ್ಲಿ ಏನೂ ಕಾಣುವುದಿಲ್ಲ. ಮೂರುವರೆ ವರ್ಷದ ಅಧಿಕಾರದಲ್ಲಿ ಏನು ಮಾಡಕ್ಕಾಗಿಲ್ಲ. ಧಮ್ಮು ಧೈರ್ಯ ಅಂತ ಮಾತನಾಡುವ ಸಿಎಂ‌ ಬೊಮ್ಮಾಯಿ ಅವರಿಗೆ ಬಜೆಟ್​ ಮಂಡನೆ ವೇಳೆ ಸ್ವರನೇ ಇರಲಿಲ್ಲ. ಯಾವುದೇ ಭರವಸೆ ಈ ಬಜೆಟ್‌ನಲ್ಲಿ ಇಲ್ಲ, ಈ ಬಜೆಟ್ ಯಾವ ವರ್ಗಕ್ಕೂ ಇಲ್ಲ.


ಡಬಲ್​ ಎಂಜಿನ್ ಸರ್ಕಾರ ಆಫ್​, ಬರೀ ಹೊಗೆ ಬರುತ್ತಿದೆ


ಪ್ರತಿ ಕ್ಷೇತ್ರದ ಶಾಸಕರಿಗೆ ಒಂದೊಂದು ಸ್ಕೀಂ ಕೊಟ್ಟಿದ್ದಾರೆ ಅಷ್ಟೇ. ಮೇಕೆದಾಟು ಯೋಜನೆಗೆ ಅಂತ ಒಂದು ಸಾವಿರ ಕೋಟಿ ರೂಪಾಯಿ ಇಟ್ಟಿದ್ದರು ಅಲ್ವಾ, ಅದರಲ್ಲಿ ಇದುವರೆಗೂ ಒಂದೇ ಒಂದು ರೂಪಾಯಿ ಕೂಡ ಖರ್ಚು ಮಾಡಿಲ್ಲ. ಡಬಲ್​ ಎಂಜಿನ್ ಸರ್ಕಾರ ಆಫ್​ ಆಗಿದ್ದು, ಅದರಲ್ಲಿ ಬರೀ ಹೊಗೆ ಬರುತ್ತಿದೆ. ಸಿಎಂ ಬೊಮ್ಮಾಯಿಯವರು ಬಜೆಟ್​​ ಅನ್ನು ಶೋಕೇಶ್‌ನಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ರಾಜ್ಯ ಸರ್ಕಾರದ ಈ ಬಜೆಟ್‌ನಿಂದ ಕಾಂಗ್ರೆಸ್ ಪ್ರಣಾಳಿಕೆಗೆ ಶಕ್ತಿ ನೀಡುತ್ತೆ ಎಂದರು.




ರಾಮ ಮಂದಿರ ಇರಲಿ ಮೊದಲು ಬಿಜೆಪಿ ಕಚೇರಿ ಕೊಟ್ಟಲು ಹೇಳಿ


ಕಳೆದ ವರ್ಷ ಎರಡೂವರೆ ಲಕ್ಷ ಕೋಟಿ ಕೊಟ್ಟಿದ್ದೀನಿ ಎಂದಿದ್ದರು ಅಲ್ವಾ ಅದರಲ್ಲಿ ಎಷ್ಟು ಖರ್ಚಾಗಿದೆ. ಕಸ ಗುಡಿಸ್ತೀನಿ ಎಂದಿದ್ದರು ಅಲ್ವಾ ಗಂಡು ಎಲ್ಲೋದ ಅವನು. ರಾಮನಗರದ ಬೆಟ್ಟದಲ್ಲಿ ಒಂದು ಸಣ್ಣ ಬೆಟ್ಟ ಇದೆ. ಅಲ್ಲಿ ಅವರ ಪಕ್ಷದ ಕಚೇರಿ ಮೊದಲು ಕಟ್ಟಲಿ, ರಾಮನ ಬಂಟ ಆಂಜನೇಯನ ದೇವಾಲಯ ಕಟ್ಟಲಾಗಿದೆ. ಸರ್ಕಾರ ಕ್ಲೋಸ್, ಬಾಯ್ ಬಾಯ್. ಇದೊಂದು ಶೋಕೇಶ್​ ಬಜೆಟ್ ಅಷ್ಟೇ ಎಂದು ವ್ಯಂಗ್ಯ ಮಾಡಿದ್ದಾರೆ.


ಇದನ್ನೂ ಓದಿ: Karnataka Budget 2023: ಬಣ್ಣ ಬಣ್ಣದ ಘೋಷಣೆ ಮಾಡಿ, ಕಿವಿ ಮೇಲೆ ಹೂ ಇರಿಸುವ ಪ್ರಯತ್ನ; ಬಜೆಟ್​ಗೆ ಕಾಂಗ್ರೆಸ್ ಪ್ರತಿಕ್ರಿಯೆ


ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ನೀಲಿ ನಕ್ಷೆ ಇಲ್ಲ


ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ, ಸಿಎಂ ಭಾಷಣದಲ್ಲಿ ಉತ್ಸಾಹ ಇರಲಿಲ್ಲ. ಇದು ಕನ್ನಡಿಗರ ಕಿವಿ ಮೇಲೆ ಹೂವ ಇಡುವ ಬಜೆಟ್. ಯಾವ ಸಮುದಾಯದವರಿಗೂ ನ್ಯಾಯ ಸಿಕ್ಕಿಲ್ಲ. ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ನೀಲಿ ನಕ್ಷೆ ಇಲ್ಲ. ಕಳೆದ ಸಿಎಂ ಬಜೆಟ್‌ನಲ್ಲಿ ಶೇಕಡಾ 56 ಖರ್ಚಾಗಿದೆ ಅನ್ನೋ ಮಾಹಿತಿ ಇದೆ. ಇಲ್ಲಿ ಯಾವ ಸರ್ಕಾರಕ್ಕೂ ನ್ಯಾಯ ಸಿಕ್ಕಿಲ್ಲ ಎಂದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು