• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Budget 2023: ಶೀಘ್ರದಲ್ಲೇ ಪ್ರತಿ ಬೀದಿ ನಾಯಿಗೂ ಸಿಗಲಿದೆ ಸೂರು, ಬಜೆಟ್​ನಲ್ಲಿ ಇದಕ್ಕೆಂದೇ ಹೊಸ ಯೋಜನೆ ಘೋಷಣೆ!

Karnataka Budget 2023: ಶೀಘ್ರದಲ್ಲೇ ಪ್ರತಿ ಬೀದಿ ನಾಯಿಗೂ ಸಿಗಲಿದೆ ಸೂರು, ಬಜೆಟ್​ನಲ್ಲಿ ಇದಕ್ಕೆಂದೇ ಹೊಸ ಯೋಜನೆ ಘೋಷಣೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Karnataka Budget 2023-24: ಬೀದಿ ನಾಯಿಗಳ (Street Dogs) ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಒಂದು ಆನ್-ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

  • Share this:

Karnataka News​ 2023-24 : ಬಜೆಟ್​ನಲ್ಲಿ ಜನ ಸಾಮಾನ್ಯರಿಗೆ, ಕೃಷಿಕರಿಗೆ (Agriculture)  ,  ಮಹಿಳೆಯರಿಗೆ (Womens) , ಯುವಕರಿಗೆ (Youth) ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಭರ್ಜರಿ ಕೊಡುಗೆಗಳನ್ನು  ನೀಡಿದ್ದಾರೆ. ಸಾಕಷ್ಟು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಜೊತೆಗೆ ಬೀದಿ ನಾಯಿಗಳ (Street Dogs) ಪೋಷಣೆಗಾಗಿ ಸಾರ್ವಜನಿಕರು ದತ್ತು ತೆಗೆದುಕೊಳ್ಳಲು ಒಂದು ಆನ್-ಲೈನ್ (Online) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಇದರಿಂದ ಆಸಕ್ತ ಶ್ವಾನ ಪ್ರೇಮಿಗಳು ನೋಂದಾಯಿಸಿಕೊಂಡು ದತ್ತು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಸಿಎಂ ಹೇಳಿದರು.ಈ ವಿಚಾರ ಪ್ರಾಣಿ ಪ್ರಿಯಕರಿಗೆ ಸಂತಸ ಮೂಡಿಸಿದೆ. ಜೊತೆಗೆ ಇನ್ಮುಂದೆ ಯಾವುದೇ ಬೀದಿ ನಾಯಿಗಳು ಹಸಿದ ಹೊಟ್ಟೆಯಲ್ಲಿ ಮಲಗಲ್ಲ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.


ಮುಧೋಳ್​ ತಳಿ ಅಭಿವೃದ್ಧಿಗೆ 5 ಕೋಟಿ ಮೀಸಲು!


ಇನ್ನೂ ದೇಶಿಯ ಮುಧೋಳ್​ ನಾಯಿ ತಳಿ ಅಭಿವೃದ್ಧಿಗೆ ಸರ್ಕಾರ ಈ ಬಾರಿ 5 ಕೋಟಿ ಮೀಸಲಿಟ್ಟಿದೆ. ಬೇರೆ ಬೇರೆ ದೇಶಗಳಲ್ಲಿ ನಮ್ಮ ದೇಶಿಯ ಮುಧೋಳ್​ ನಾಯಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಹೀಗಾಗಿ ಈ ತಳಿಯನ್ನು ಮತ್ತಷ್ಟು ಅಭಿವೃದ್ಧಿಗೆ  ಹೆಚ್ಚಿನ ಒತ್ತು ನೀಡಿದೆ.


ಕಾಡಾನೆ ಹಾವಳಿಗೂ ಸರ್ಕಾರದಿಂದ ಕ್ರಮ!


ವಿಶೇಷವಾಗಿ ಇತ್ತೀಚಿನ ಕೆಲ ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿದ್ದು, ಅನೇಕ ಮಂದಿ ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದರು. ಈ ಸಮಸ್ಯೆಗೆ ಇನ್ನೂ ಪರಿಹಾರ ಕಂಡು ಹುಡುಕದ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಹಲವೆಡೆ ಸಂತ್ರಸ್ತ ಜನರು ಅಧಿಕಾರಿಗಳ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದರು.


ಇದೀಗ ಚುನಾವಣಾ ವರ್ಷವೂ ಆಗಿರುವುದರಿಂದ ತಮ್ಮ ಅಧಿಕಾರಾವಧಿಯ ಕೊನೆಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾನವ ಮತ್ತು ವನ್ಯ ಪ್ರಾಣಿ ಸಂಘರ್ಷಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ.


ಕಾಡಾನೆ ದಾಳಿ ತಡೆಗೆ ಮತ್ತಷ್ಟು ಯೋಜನೆ


ತಮ್ಮ ಬಜೆಟ್‌ನಲ್ಲಿ ಈ ಬಗ್ಗೆ ಯೋಜನೆ ಘೋಷಣೆ ಮಾಡಿರುವ ಬಸವರಾಜ ಬೊಮ್ಮಾಯಿ, 2022-23ನೇ ಸಾಲಿನಲ್ಲಿ ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಂಬಂಧ ಕಾಮಗಾರಿಗಳಿಗೆ 150 ಕೋಟಿಗಳ ಅನುದಾನ ಒದಗಿಸಲಾಗಿತ್ತು.


ಇದನ್ನೂ ಓದಿ: ಮಾನವ-ವನ್ಯಜೀವಿ ಸಂಘರ್ಷಕ್ಕೂ ಅನುದಾನ; ಕಾಡಾನೆ ಇನ್ಮೇಲೆ ನಾಡಿಗೆ ಬರೋದು ಅನುಮಾನ!


ಇದೀಗ ಇದರ ಮುಂದುವರಿದ ಭಾಗವಾಗಿ ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ 12 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವುದರ ಜೊತೆಗೆ, 36 ಕಿ.ಮೀ. ಉದ್ದದ ಆನೆ ನಿರೋಧಕ ಕಂದಕವನ್ನೂ ನಿರ್ಮಿಸಲು ಯೋಜನೆ ಹಾಕಲಾಗಿದೆ. ಇದರ ಜೊತೆಗೆ 186 ಕಿ.ಮೀ ಉದ್ದದ ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಬೊಮ್ಮಾಯಿ ಹೇಳಿದ್ದಾರೆ.


ರೈತರ ಸಾಲದ ಮಿತಿ 3ರಿಂದ 5 ಲಕ್ಷಕ್ಕೆ ಏರಿಕೆ


ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಬಂಪರ್ ಯೋಜನೆಗಳನ್ನು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ವರ್ಷದಿಂದ ರೈತರಿಗೆ ನೀಡುವ ಬಡ್ಡಿ ರೈತ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ ನಿಂದ 5 ಲಕ್ಷ ರೂಗೆ ಏರಿಕೆ ಮಾಡಲಾಗಿದ್ದು, ಆ ಮೂಲಕ ಈ ವರ್ಷ ರೈತರಿಗೆ 30 ಲಕ್ಷದಿಂದ 25000 ಕೋಟಿ ರೂಗಳಷ್ಟು ಸಾಲ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಸುಲಭವಾಗೋದು ಮಾತ್ರವಲ್ಲದೇ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ಸಿಕ್ಕಂತಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

Published by:ವಾಸುದೇವ್ ಎಂ
First published: