Karnataka Budget 2022: ಈ ಬಾರಿಯ ಬಜೆಟ್​​ನಲ್ಲಿ ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಹಂಚಿಕೆ? ಇಲ್ಲಿದೆ ಮಾಹಿತಿ

ಬಜೆಟ್​​ನಲ್ಲಿ ಎಲ್ಲಾ ವಲಯಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

ಬಜೆಟ್​ ಓದುತ್ತಿರುವ ಸಿಎಂ

ಬಜೆಟ್​ ಓದುತ್ತಿರುವ ಸಿಎಂ

  • Share this:
Karnataka Budget 2022: ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡಿಸಿದ್ದಾರೆ. 2022-23 ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2022) ಗಾತ್ರ 2,65,720 ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​ನಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಸೇರಿಸಿದ್ದಾರೆ. ಕಳೆದ ಬಾರಿಯ ಬಜೆಟ್​ ಗಾತ್ರಕ್ಕಿಂತ ಈ ಬಾರಿಯ ಬಜೆಟ್​ ಗಾತ್ರ ದೊಡ್ಡದಾಗಿದೆ. ಕಳೆದ ಬಾರಿಯ ಬಜೆಟ್​ ಗಾತ್ರ  ₹ 2,46,207 ಕೋಟಿ ಇತ್ತು. ಈ ಬಾರಿ ಮಂಡಿಸಲಾದ ರಾಜ್ಯ ಬಜೆಟ್​​ನಲ್ಲಿ ಎಲ್ಲಾ ವಲಯಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ ಹಂಚಿಕೆ? 

1. ಶಿಕ್ಷಣ ಕ್ಷೇತ್ರಕ್ಕೆ 31,980 ಕೋಟಿ ರೂ. ಅನುದಾನ ಹಂಚಿಕೆ

2. ಜಲಸಂಪನ್ಮೂಲ ವಲಯಕ್ಕೆ 20,601 ಕೋಟಿ ರೂ. ಅನುದಾನ ಹಂಚಿಕೆ

3. ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ 17,325 ಕೋಟಿ ರೂ. ಅನುದಾನ

4. ನಗರಾಭಿವೃದ್ಧಿ ವಲಯಕ್ಕೆ 16,076 ಕೋಟಿ ರೂ. ಅನುದಾನ

5. ಕಂದಾಯ ಇಲಾಖೆಗೆ 14,388 ಕೋಟಿ ರೂ. ಅನುದಾನ ಹಂಚಿಕೆ

6. ಆರೋಗ್ಯ ವಲಯಕ್ಕೆ 13,982 ಕೋಟಿ ರೂ. ಅನುದಾನ

7. ಇಂಧನ ಕ್ಷೇತ್ರಕ್ಕೆ 12,655 ಕೋಟಿ ರೂ. ಅನುದಾನ

8. ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ 11,272 ಕೋಟಿ ರೂ. ಅನುದಾನ ಹಂಚಿಕೆ

9. ಲೋಕೋಪಯೋಗಿ ವಲಯಕ್ಕೆ 10,442 ಕೋಟಿ ರೂ. ಅನುದಾನ

10. ಸಮಾಜಕಲ್ಯಾಣ ಇಲಾಖೆಗೆ 9389 ಕೋಟಿ ರೂ. ಅನುದಾನ

11. ಕೃಷಿ ಮತ್ತು ತೋಟಗಾರಿಕಾ ವಲಯಕ್ಕೆ 8457 ಕೋಟಿ ರೂ. ಅನುದಾನ ಮೀಸಲು

12. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4713 ಕೋಟಿ ರೂ. ಅನುದಾನ ಹಂಚಿಕೆ

13. ವಸತಿ ಕ್ಷೇತ್ರಕ್ಕೆ 3594 ಕೋಟಿ ರೂ. ಅನುದಾನ ಮೀಸಲು

14. ಆಹಾರ ಮತ್ತು ನಾಗರಿಕ ಪೂರೈಕೆಗೆ 2988 ಕೋಟಿ ರೂ. ಅನುದಾನ ಹಂಚಿಕೆ

15. ಇತರೆ - 93,676 ಕೋಟಿ ರೂ. ಅನುದಾನ ಮೀಸಲುಕಾರ್ಮಿಕರ ಕ್ಷೇಮಾಭಿವೃದ್ಧಿ
• 2.30 ಲಕ್ಷ ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2610 ಕೋಟಿ ರೂ. ಗಳ ಯೋಜನೆಗಳ ಅನುಷ್ಠಾನ.
• ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಪ್ರಾರಂಭ
• ಕಟ್ಟಡ ಕಾರ್ಮಿಕರ ರಿಯಾಯಿತಿ ಬಸ್ ಪಾಸ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
• ಕೇಂದ್ರ ಸರ್ಕಾರದ ನೆರವಿನೊಂದಿಗೆ ಹುಬ್ಬಳ್ಳಿ ಮತ್ತು ದಾವಣಗೆರೆ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳ ಹಾಸಿಗೆಗಳ ಸಾಮಥ್ರ್ಯ 100ಕ್ಕೆ ಹೆಚ್ಚಳ; 19 ಹೊಸ ಚಿಕಿತ್ಸಾಲಯಗಳ ಪ್ರಾರಂಭ.

ತೆರಿಗೆ ಪ್ರಸ್ತಾವನೆ:

• 2022-23ರಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲ.

2022-23ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ರೂ.. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ., ರಾಜ್ಯ ಅಬಕಾರಿ ಇಲಾಖೆಗೆ 29,000 ಕೋಟಿ ರೂ. ಹಾಗೂ ಸಾರಿಗೆ ಇಲಾಖೆಗೆ 8,007 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ.

ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ; ಶಿವಮೊಗ್ಗ, ದಾವಣಗೆರೆ - ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.

ಆಕಸ್ಮಿಕ ಮರಣ ಹೊಂದುವ ಕುರಿ/ ಮೇಕೆ ಸಾಕಾಣಿಕೆದಾರರು/ ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ.

ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ ಸಂಪದ ಸಂಯೋಜನೆಯೊಂದಿಗೆ 100 ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು 'ಮತ್ಸ ಸಿರಿ' ಯೋಜನೆ ಜಾರಿ.

ನೀರಾವರಿಗೆ ಆದ್ಯತೆ

• ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಮಾಡಲಾದ ಅನುದಾನ ಹಂಚಿಕೆ:

ಅ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 - 5,000 ಕೋಟಿ

ಆ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ 1,000 ಕೋಟಿ ರೂ.

ಇ. ಭದ್ರಾ ಮೇಲ್ದಂಡೆ ಯೋಜನೆ- 3,000 ಕೋಟಿ ರೂ.

ಈ, ಎತ್ತಿನಹೊಳೆ ಯೋಜನೆ ಅನುದಾನ. 3,000

ಉ. ಮೇಕೆದಾಟು ಯೋಜನೆ- 1,000 ಕೋಟಿ ರೂ. ಅನುದಾನ.

ತುಂಗಭದ್ರಾ ಜಲಾಶಯದ ಸರಿದೂಗಿಸಲು ನವಲೆ ನೀರು ಸಂಗ್ರಹಣೆ ಕೊರತೆ ಸಮತೋಲನಾ ಜಲಾಶಯ ಬಳಿ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ.

• ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ, ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ
Published by:Latha CG
First published: