Karnataka Budget 2022: ಪ್ರೋತ್ಸಾಹ ಧನ, ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ: ಕೃಷಿ ವಲಯಕ್ಕೆ ಬಂಪರ್ ಕೊಡುಗೆ

Karnataka Budget 2022: ಪ್ರೋತ್ಸಾಹ ಧನ, ಆಹಾರ ಪಾರ್ಕ್ (Food Park) ಸ್ಥಾಪನೆ, ಕೋಳಿ ಸಾಕಾಣಿಕೆ, ರೇಷ್ಮೆ ಬೆಳಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಇನ್ನು ಉತ್ತರ ಕರ್ನಾಟಕ ದ್ರಾಕ್ಷಿ ಬೆಳಗಾರರಿಗೂ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಇಂದು ತಮ್ಮ ಮೊದಲ ಬಜೆಟ್ (Budget) ಮಂಡಿಸಿದರು. ಕೃಷಿ ವಲಯಕ್ಕೆ (Agriculture Budget) ಬಂಪರ್ ಕೊಡುಗೆ ನೀಡಿದ್ದುಕ, ರೈತರ ಆದಾಯ (Farmers Income) ಹೆಚ್ಚಳಕ್ಕೆ ಬಸವರಾಜ್ ಬೊಮ್ಮಾಯಿ ಆದ್ಯತೆ ನೀಡಿದ್ದಾರೆ. ಪ್ರೋತ್ಸಾಹ ಧನ, ಆಹಾರ ಪಾರ್ಕ್ (Food Park) ಸ್ಥಾಪನೆ, ಕೋಳಿ ಸಾಕಾಣಿಕೆ, ರೇಷ್ಮೆ ಬೆಳಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಇನ್ನು ಉತ್ತರ ಕರ್ನಾಟಕ ದ್ರಾಕ್ಷಿ ಬೆಳಗಾರರಿಗೂ ವಿಶೇಷ ಯೋಜನೆಗಳನ್ನು ಘೋಷನೆ ಮಾಡಿದ್ದಾರೆ.

ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ

ರೈತ ಶಕ್ತಿ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್ ಸಹಾಯಧನ: 600 ಕೋಟಿ ರೂ. ಅನುದಾನ.

ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನೀರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ ಹಂಚಿಕೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ PPP ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.

ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣಿಕೆಗೆ ವಿಜಯಪುರ ಜಿಲ್ಲೆ, ತೊರವಿಯಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸ್ಥಾಪನೆ ಹಾಗೂ ಶೀತಲಿಕೃತ ಸರಕು ಸಾಗಣೆ ವಾಹನ ಪೂರೈಕೆ.

ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ರೈತರ ಕ್ಷೇಮಾಭಿವೃದ್ಧಿ

ಗ್ರಾಮೀಣ ರೈತರಿಗೆ ಆರೋಗ್ಯ ಸೇವೆ ಒದಗಿಸಲು ಪುರಸ್ಕೃತ ರೂಪದಲ್ಲಿ ಯಶಸ್ವಿನಿ ಯೋಜನೆ ಮರುಜಾರಿ. ರಾಜ್ಯ ಸರ್ಕಾರದಿಂದ 300 ಕೋಟಿ ರೂ. ಅನುದಾನ.

ಇದನ್ನೂ ಓದಿ:  BREAKING NEWS: 2,65,720 ಕೋಟಿ ಗಾತ್ರದ ಬಜೆಟ್‌ ಮಂಡಿಸುತ್ತಿರುವ ಸಿಎಂ, ಯಾವ ವಲಯಕ್ಕೆ ಎಷ್ಟು ಅನುದಾನ?

57 ತಾಲೂಕುಗಳಲ್ಲಿ 642 ಕೋಟಿ ರೂ. ವೆಚ್ಚದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕ-2.0 ಜಾರಿ.

ಬಳ್ಳಾರಿ ಜಿಲ್ಲೆಯ ಹಗರಿ ಹಾಗೂ ಬೆಳಗಾವಿ ಜಿಲ್ಲೆ, ಅಥಣಿಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.

ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ

ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿ ಟನ್ ದ್ವಿತಳಿ ರೇಷ್ಮೆಗೂಡಿಗೆ 10  ಸಾವಿರ ರೂ. ಪ್ರೋತ್ಸಾಹ ಧನ.

ದ್ವಿತಳಿ ಮೊಟ್ಟೆ ಉತ್ಪಾದಿಸಿ, ಶೈತೀಕರಿಸಲು ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ 15 ಕೋಟಿ ರೂ ಗಳ ವೆಚ್ಚದಲ್ಲಿ ಶೈತ್ಯಗಾರ ನಿರ್ಮಾಣ.

ಹಾವೇರಿಯಲ್ಲಿ ಮೆಗಾಡೈರಿ ಸ್ಥಾಪನೆ; ಶಿವಮೊಗ್ಗ, ದಾವಣಗೆರೆ - ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ.

ಆಕಸ್ಮಿಕ ಮರಣ ಹೊಂದುವ ಕುರಿ/ ಮೇಕೆ ಸಾಕಾಣಿಕೆದಾರರು/ ವಲಸೆ ಕುರಿಗಾರರ ಕುಟುಂಬಕ್ಕೆ 5 ಲಕ್ಷ ರೂ. ವಿಮಾ ಸೌಲಭ್ಯ.

ಆಳ ಸಮುದ್ರ ಮೀನುಗಾರಿಕೆ ಉತ್ತೇಜನಕ್ಕೆ ಪ್ರಧಾನ ಮಂತ್ರಿ ಮತ್ಸ ಸಂಪದ ಸಂಯೋಜನೆಯೊಂದಿಗೆ 100 ಸಮುದ್ರ ಮೀನುಗಾರಿಕಾ ಹಡಗುಗಳಿಗೆ ನೆರವು ನೀಡಲು 'ಮತ್ಸ ಸಿರಿ' ಯೋಜನೆ ಜಾರಿ.

ಇದನ್ನೂ ಓದಿ:  ನನ್ನ ಜೀವನದಲ್ಲಿ ನಾನು ಯಾವತ್ತಿಗೂ ಸುಳ್ಳು ಹೇಳಿಲ್ಲ: ಸಚಿವ Govind Karjol

ನೀರಾವರಿಗೆ ಆದ್ಯತೆ

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಮಾಡಲಾದ ಅನುದಾನ ಹಂಚಿಕೆ:

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 - 5,000 ಕೋಟಿ

ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ 1,000 ಕೋಟಿ ರೂ.

ಭದ್ರಾ ಮೇಲ್ದಂಡೆ ಯೋಜನೆ- 3,000 ಕೋಟಿ ರೂ.

ಎತ್ತಿನಹೊಳೆ ಯೋಜನೆ ಅನುದಾನ. 3,000

ಮೇಕೆದಾಟು ಯೋಜನೆ- 1,000 ಕೋಟಿ ರೂ. ಅನುದಾನ.

ತುಂಗಭದ್ರಾ ಜಲಾಶಯದ ಸರಿದೂಗಿಸಲು ನವಲೆ ನೀರು ಸಂಗ್ರಹಣೆ ಕೊರತೆ ಸಮತೋಲನಾ ಜಲಾಶಯ ಬಳಿ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನ.

ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ, ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ.
Published by:Mahmadrafik K
First published: