Karnataka Budget 2022: ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ಅನುದಾನ, ರಾಯಚೂರಿನಲ್ಲಿ ಗ್ರೀನ್-ಫೀಲ್ಡ್ ವಿಮಾನ ನಿಲ್ದಾಣ

ರಸ್ತೆ, ರೈಲು ಮಾರ್ಗ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರ ಘಟ್ಟ-2 ರಡಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂ. ರೂ ನೀಡಲಾಗುತ್ತದೆ

ರಸ್ತೆ, ರೈಲು ಮಾರ್ಗ ಅಭಿವೃದ್ಧಿ

ರಸ್ತೆ, ರೈಲು ಮಾರ್ಗ ಅಭಿವೃದ್ಧಿ

  • Share this:
Karnataka Budget 2022: ಇಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ (Basavaraja Bommai) ಬಹು ನಿರೀಕ್ಷಿತ ರಾಜ್ಯ ಬಜೆಟ್ ಮಂಡಿಸಿದ್ದಾರೆ. 2022-23 ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget 2022) ಗಾತ್ರ 2,65,720 ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​ನಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಸೇರಿಸಿದ್ದಾರೆ. ಕಳೆದ ಬಾರಿಯ ಬಜೆಟ್​ ಗಾತ್ರಕ್ಕಿಂತ ಈ ಬಾರಿಯ ಬಜೆಟ್​ ಗಾತ್ರ ದೊಡ್ಡದಾಗಿದೆ. ಕಳೆದ ಬಾರಿಯ ಬಜೆಟ್​ ಗಾತ್ರ  ₹ 2,46,207 ಕೋಟಿ ಇತ್ತು. ಈ ಬಾರಿ ಮಂಡಿಸಲಾದ ರಾಜ್ಯ ಬಜೆಟ್​​ನಲ್ಲಿ ಎಲ್ಲಾ ವಲಯಗಳಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ರಸ್ತೆ, (Road) ರೈಲು (Railway) ಮಾರ್ಗ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ 3,500 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು ಬಂದರು ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ₹1,880 ಕೋಟಿ ಮೀಸಲಿಡಲಾಗಿದೆ.

ರಸ್ತೆ, ರೈಲು ಮಾರ್ಗ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ

ರಸ್ತೆ, ರೈಲು ಮಾರ್ಗ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ-4ರ ಘಟ್ಟ-2 ರಡಿ ಒಟ್ಟು 2,275 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3,500 ಕೋಟಿ ರೂ. ರೂ ನೀಡಲಾಗುತ್ತದೆ. ಜೀವಿತಾವಧಿ ಮೀರಿದ 1,008 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳ ಮರು ಡಾಂಬರೀಕರಣಕ್ಕೆ 440 ಕೋಟಿ ರೂ. ಅನುದಾನ ನೀಡಲಾಗಿದೆ. 640 ಕೋಟಿ ಅಂದಾಜು ವೆಚ್ಚದ 55 ಕಿ.ಮೀ. ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. 927 ಕೋಟಿ ರೂ. ವೆಚ್ಚದ ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಕ್ರಮಕಯಗೊಳ್ಳಲಾಗುತ್ತದೆ.

ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ

ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರದೊಂದಿಗೆ ಸಹಯೋಗ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ನದಿಗಳ ಹೂಳೆತ್ತುವಿಕೆ ಮತ್ತು ಹೊಸ ಕೆರೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಭಾಗಿತ್ವದಲ್ಲಿ ಹೊಸ ಯೋಜನೆ ಜಾರಿಯಾಗುತ್ತದೆ. 186 ಕೋಟಿ ರೂ. ವೆಚ್ಚದಲ್ಲಿ ರಾಯಚೂರಿನಲ್ಲಿ ಗ್ರೀನ್-ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯಸಾಧ್ಯತಾ ವರದಿ ತಯಾರಿ ಮಾಡಲಾಗುತ್ತದೆ.

ಇದನ್ನೂ ಓದಿ: Karnataka Budget 2022: ನೀರಾವರಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಕೊಟ್ಟ ಬೊಮ್ಮಾಯಿ

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತ ಯೋಜನೆಗೆ 11,250 ಕೋಟಿ

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತ ಯೋಜನೆಗೆ 11,250 ಕೋಟಿ ಅನುದಾನ ನೀಡಲಾಗುತ್ತದೆ. ಮೆಟ್ರೋ ರೈಲು ಯೋಜನೆ ವಿಸ್ತರಣೆ ಸ್ಕೀಮ್‌ಗೆ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಾಗುವುದು. 15 ಸಾವಿರ ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗಕ್ಕೆ ಆPಖ ತಯಾರಿ ಮಾಡಲಾಗುತ್ತದೆ. 55 ಕೋಟಿ ವೆಚ್ಚದಲ್ಲಿ ಹೊಸ ಮೆಟ್ರೋ ನಿಲ್ದಾಣಗಳ ಸಂಪರ್ಕ ಕಾಮಗಾರಿ ನಡೆಸಲಾಗುತ್ತದೆ. ವೈಟ್‌ಫೀಲ್ಡ್‌, ಕೆ.ಆರ್.ಪುರಂ, ಬೈಯ್ಯಪ್ಪನಹಳ್ಳಿ, ಯಶವಂತಪುರ ನಿಲ್ದಾಣ ಮಾಡಲಾಗುತ್ತದೆ. ಜ್ಞಾನಭಾರತಿ, ಯಲಹಂಕ ರೈಲುನಿಲ್ದಾಣಕ್ಕೆ ಮೆಟ್ರೋ ರೈಲು ನಿಲ್ದಾಣ ಲಿಂಕ್ ಇರುತ್ತದೆ.

ಇದನ್ನೂ ಓದಿ: Karnataka Budget 2022: ಈ ಬಾರಿಯ ಬಜೆಟ್​​ನಲ್ಲಿ ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಹಂಚಿಕೆ? ಇಲ್ಲಿದೆ ಮಾಹಿತಿ

ಬಂದರು ಅಭಿವೃದ್ಧಿಗೆ 1,800 ಕೋಟಿ ಮೀಸಲು

ಬಂದರು ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ₹1,880 ಕೋಟಿ ಮೀಸಲಿಡಲಾಗುವುದು.  250 ಕೋಟಿರೂ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿ್ರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಬಂದರು ನಿರ್ಮಾಣ, 350 ಕೋಟಿ ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ, ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪನೆ, ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
Published by:Pavana HS
First published: