Karnataka Budget 2022: ಇದು ಬೊಮ್ಮಾಯಿ ಬಡಾಯಿ ಬಜೆಟ್ ಎಂದ್ರು ಸಿದ್ದು, ಎಲ್ಲಾ ಬಂಡಲ್ ಅಂದ್ರು ಡಿಕೆ ಬ್ರದರ್

ಬಜೆಟ್​ನಲ್ಲಿ ಸಮಗ್ರ ಆರ್ಥಿಕ ಅಭಿವೃದ್ಧಿ ಕಾಣುತ್ತಿಲ್ಲ. ಕೃಷಿ ಸೇವಾವಲಯದ ಅಭಿವೃದ್ಧಿ ಇಲ್ಲ. ಹೊಸ ಚಿಂತನೆ, ಹೊಸ ಚೈತನ್ಯ ಕಾಣುತ್ತಿಲ್ಲ ಅಂತ ಸಿದ್ದರಾಮಯ್ಯ ಆರೋಪಿಸಿದ್ರು.

ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ

  • Share this:
Karnataka Budget 2022: ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022ನೇ ಸಾಲಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯ ಜಜೆಟ್​ ಕುರಿತು ಆಡಳಿತ ಪಕ್ಷದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕರು ಬಜೆಟ್​ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್​ ನಾಯಕರು ಬಜೆಜ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿ ಬಜೆಟ್​ ರೈತರು ಹಾಗೂ ಬಡ ಜನರ ಪರವಾಗಿಲ್ಲ ಅಂತ ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ  ಬಸವರಾಜ ಬೊಮ್ಮಯಿ ಅವರ ಮೊದಲ ಬಜೆಟ್ ಮಂಡಿಸಿದ್ದಾರೆ. ಬಜೆಟ್​ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇತ್ತು, ಆದ್ರೆ ನಿರಾಸೆಯಾಗಿದ್ದು,  ಅತ್ಯಂತ ನಿರಸವಾದ ಬಜೆಟ್ ಇದು ಅಂತ ಸಿದ್ದರಾಮಯ್ಯ ಕಿಡಿಕಾರಿದ್ರು.

‘ನಿರಾಸೆ ಮೂಡಿಸಿದ ಬಜೆಟ್​‘

ಸಿಎಂ ಬಸವರಾಜ್​ ಬೊಮ್ಮಾಯಿ ಮಂಡಿಸಿದ ಬಜೆಟ್​ ಬಗ್ಗೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಇದು ಅಭಿವೃದ್ಧಿ ಪರ ಇಲ್ಲದ ಬಜೆಟ್, ಬಿಜೆಪಿಯವರು ನವ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಆದ್ರೆ ಅದನ್ನ ಕಾರ್ಯರೂಪಕ್ಕೆ ತರಲು ಆಗ್ತಿಲ್ಲ. ಇದು ಯಾವುದೇ ಮುಂದಾಲೋಚನೆ ಇಲ್ಲದ ಬಜೆಟ್. ಒಂದು ಬಜೆಟ್ ಜನರ ಕನಸು ಕಟ್ಟಿಕೊಳ್ಳುವ ರೀತಿ ಇರಬೇಕು, ಬಜೆಟ್ ಜನರ ಮುನ್ನೋಟವಾಗಿರಬೇಕು ಆದ್ರೆ ಈ ಬಾರಿ ಬಜೆಟ್​ನಲ್ಲಿ ಏನೂ ಇಲ್ಲ ಅಂದ್ರು.

ಸರ್ಕಾರದ ಮೇಲೆ  ಸಾಲದ ಹೊರೆ

ಮುಂದಿನ ವರ್ಷ 5.18 ಲಕ್ಷ ಕೋಟಿ ಸಾಲವಾಗುತ್ತದೆ ಎಂದು  ಬೊಮ್ಮಯಿ ಅವರೇ ಬಜೆಟ್ ನಲ್ಲಿ ಹೇಳಿದ್ದಾರೆ. ಅದಕ್ಕೆ 29 ಸಾವಿರ ಕೋಟಿ ರೂ ಬಡ್ಡಿ ಕಟ್ಟಬೇಕಾಗುತ್ತದೆ. ಬಡ್ಡಿ ಕಟ್ಟುವುದು ಅಭಿವೃದ್ಧಿಯಲ್ಲಿ ಸೇರುವುದಿಲ್ಲ. ಬಿಜೆಪಿ ಆಡಳಿತದ ಕಾಲದಲ್ಲಿ ಸಾಲ ಯದ್ವಾತದ್ವಾ ಹೆಚ್ಚಾಗಿದೆ. ನಾಲ್ಕು ವರ್ಷಗಳಲ್ಲಿ 2.66 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಹೀಗಾಗಿ ಬಡ್ಡಿ ಹೆಚ್ಚಾಗಿದೆ. ನಮ್ಮ ಐದು ವರ್ಷಗಳ ಆಡಳಿತದಲ್ಲಿ ರೆವಿನ್ಯೂ ಸರ್ಪ್ಲೆಸ್ ಇತ್ತು ಇವರು ಬಂದ ಮೇಲೆ ರೆವಿನ್ಯೂ ಡೆಫಿಶಿಟ್ ಶುರುವಾಗಿದೆ ಅಂತ ಸಿದ್ದರಾಮಯ್ಯ ಹೇಳಿದ್ರು.

ಇದನ್ನೂ ಓದಿ: Karnataka Budget 2022: ಬೊಮ್ಮಾಯಿ ಬಜೆಟ್​ನಲ್ಲಿ ತವರು ಜಿಲ್ಲೆ ಹಾವೇರಿಗೆ ಬಂಪರ್ ಕೊಡುಗೆ

ಇಲಾಖಾವಾರು ಬಜೆಟ್ ಮಂಡಿಸಬೇಕು

ಇಲಾಖಾವಾರು ಬಜೆಟ್ ಮಂಡಿಸಬೇಕಿತ್ತು ಆದ್ರೆ ಇವರು ವಲಯವಾರು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಪಾರದರ್ಶಕತೆಯಿಲ್ಲ, ಯಾವುದಕ್ಕೆ ಎಷ್ಟು ಮೀಸಲಿಟ್ಟಿದ್ದಾರೆ ಗೊತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳು ಎಂದಿದ್ದಾರೆ. ಆದರೆ ಪಂಚಸೂತ್ರಗಳಿಗೆ ಇದು ತದ್ವಿರುದ್ಧವಾಗಿದೆ. ಬಜೆಟ್ ನಲ್ಲಿ ಸಮಗ್ರ ಆರ್ಥಿಕ ಅಭಿವೃದ್ಧಿ ಕಾಣುತ್ತಿಲ್ಲ. ಕೃಷಿ ಸೇವಾವಲಯದ ಅಭಿವೃದ್ಧಿ ಇಲ್ಲ. ಹೊಸ ಚಿಂತನೆ, ಹೊಸ ಚೈತನ್ಯ ಕಾಣುತ್ತಿಲ್ಲ ಅಂತ ರಾಜ್ಯ ಬಜೆಟ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ರು.

ಬಸವರಾಜ ಬೊಮ್ಮಯಿ ಅವರ ಬಡಾಯಿ ಬಜೆಟ್

2018ರ ಪ್ರಣಾಳಿಕೆಯಲ್ಲಿ ನೀರಾವರಿಗೆ 1.5 ಲಕ್ಷ ಕೋಟಿ ಇಡುತ್ತೇವೆಂದು ಹೇಳಿದ್ದರು, ಪ್ರತಿ ವರ್ಷ 30 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದು ಹೇಳಿದರು. ಆದ್ರೆ ಇಲ್ಲಿಯವರೆಗೂ 60 ಸಾವಿರ ಕೋಟಿ ಸಹ ಖರ್ಚು ಮಾಡಿಲ್ಲ. ಜನರಿಗೆ ಪ್ರಣಾಳಿಕೆಯಲ್ಲಿ ಸುಳ್ಳು ಹೇಳಿದ್ರು. ನೀರಾವರಿ ಇಲಾಖೆಯಲ್ಲಿ 1.5 ಕೋಟಿ ಬಿಲ್ ಪಾವತಿ ಮಾಡುವುದು ಬಾಕಿಯಿದೆ. ಇದು ಬಸವರಾಜ ಬೊಮ್ಮಯಿ ಅವರ ಬಡಾಯಿ ಬಜೆಟ್ ಅಂತ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಇದೊಂದು ಬಂಡಲ್, ಬೋಗಸ್ ಬಜೆಟ್

ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ ಸುರೇಶ್​ ಕುಮಾರ್​,  ಇದು ಬಸವರಾಜ ಬೊಮ್ಮಯಿ ಅವರ ಬಡಾಯಿ ಬಜೆಟ್, ಇದೊಂದು ಬಂಡಲ್, ಬೋಗಸ್ ಬಜೆಟ್ ಎಂದ್ರು. ಕನಕಪುರದಲ್ಲಿ ಮಾತಾಡಿದ ಅವರು ಕೇಂದ್ರ ಸರ್ಕಾರದ ಬಜೆಟ್ ರೀತಿ ಮಾಡಿದ್ದಾರೆ ಅಷ್ಟೇ. ಈ ಬಜೆಟ್ ನಲ್ಲಿ ಘೋಷಣೆಯಾಗಿರುವುದು ಯಾವುದು ಅನುಷ್ಠಾನ ಆಗಲ್ಲ , ಸಾಲ ಮಾಡಿ ಬಜೆಟ್ ಮಂಡಿಸಿದ್ದಾರೆ, ಆ ಹೊರೆ ಜನರ ಮೇಲೆ ಬೀಳಲಿದೆ

ಇದನ್ನೂ ಓದಿ: Karnataka Budget 2022: ಸರ್ಕಾರದ ಕ್ರಮಗಳಿಂದ ಆರ್ಥಿಕ ಚೇತರಿಕೆ; ಬಜೆಟ್ ಬಳಿಕ CM Bommai ಮಾತು

ಈ ವರ್ಷದ ಬಜೆಟ್ ನಿಂದ ಯಾವುದೇ ಪ್ರಯೋಜನ ಇಲ್ಲ , ನಾವು ಮೇಕೆದಾಟು ಯೋಜನೆಗೆ ಪಾದಯಾತ್ರೆ ಮಾಡಿದ್ದೇವೆ .ಈಗ 1 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ  ಆದರೆ ಇವರು ಮೊದಲು ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಪಡೆಯಲಿ. ಇವರದ್ದೇ ಸರ್ಕಾರ ಇದೇ, ಮೊದಲು ಆ ಕೆಲಸ ಮಾಡಲಿ  ನಾವು ಪಾದಯಾತ್ರೆ ಮಾಡಿದ್ದರಿಂದ ಈ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಹ ನೀರಾವರಿ ಯೋಜನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಆದರೆ ಅದಕ್ಕೆ ಹಣ ಎಲ್ಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದ್ದಾರೆ
Published by:Pavana HS
First published: