Karnataka Budget 2022: ಜೆಟ್ ಮೂಲಕ ಸಿಎಂ ಬಜೆಟ್ ಪ್ರಚಾರ! ವಿಧಾನಸೌಧದ ಸುತ್ತ ಹಾರಿದ ಲಘು ವಿಮಾನ!
ಲಘು ವಿಮಾನ ಹೊತ್ತೊಯ್ದಿರುವ ಬ್ಯಾನರ್ನಲ್ಲಿ ಕರ್ನಾಟಕ ರಾಜ್ಯದ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರ ಚಿತ್ರಗಳಿದ್ದು ಇದೇ ಮೊದಲ ಬಾರಿ Jet ಮೂಲಕ ಬಜೆಟ್ ಪ್ರಚಾರ ನಡೆಸಿದ್ದಾರೆ.
ಕರ್ನಾಟಕ ಬಜೆಟ್ (Karnataka budget 2022) ಮಂಡನೆಯಾಗಲಿರುವ ಕೆಲವೇ ಕ್ಷಣಗಳ ಮುನ್ನ ವಿಧಾನಸೌಧದ (Vidhana Soudha) ಸುತ್ತಮುತ್ತ ಲಘು ವಿಮಾನ (ಜೆಟ್) ಹಾರಾಟ ನಡೆಸಿದೆ. ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಅತ್ಯಂತ ಕಾತುರರಾಗಿದ್ದಾರೆ. ರಾಜ್ಯ ಬಜೆಟ್ 2022 ಬ್ಯಾನರ್ನೊಂದಿಗೆ ವಿಧಾನಸೌಧದ ಸುತ್ತಮುತ್ತ ಲಘು ವಿಮಾನ ಹಾರಾಟ ನಡೆಸಿದೆ. ಲಘು ವಿಮಾನ ಹೊತ್ತೊಯ್ದಿರುವ ಬ್ಯಾನರ್ನಲ್ಲಿ ಕರ್ನಾಟಕ ರಾಜ್ಯದ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಅವರ ಚಿತ್ರಗಳಿದ್ದು ಇದೇ ಮೊದಲ ಬಾರಿ Jet ಮೂಲಕ ಬಜೆಟ್ ಪ್ರಚಾರ ನಡೆಸಿದ್ದಾರೆ.
ಮೊದಲ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡುತ್ತಿರುವ ಹಿನ್ನಲೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಕುಟುಂಬ ವಿಧಾನಸೌಧಕ್ಕೆ ಆಗಮಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಪತ್ನಿ ಮತ್ತು ಮಕ್ಕಳು ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ವಿಜಯದ ಸಂಕೇತ ಪ್ರದರ್ಶಿಸಿದ ಬಿ ಎಸ್ ಯಡಿಯೂರಪ್ಪ! ಸಿಎಂ ಬಸವರಾಜ ಬೊಮ್ಮಾಯಿ ಅವರಿಗಿಂತಲೇ ಮೊದಲೇ ವಿಧಾನಸೌಧಕ್ಕೆ ಆಗಮಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗಮಿಸಿದ್ದಾರೆ. ವಿಕ್ಟರಿ ಸಿಂಬಲ್ ತೋರಿಸುತ್ತಲೇ ಅವರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಕೆಲವೇ ಸಮಯದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಸಚಿವರು ಭಾಗಿಯಾಗಿದ್ದಾರೆ. ಸಂಪುಟ ಸಭೆಯಲ್ಲಿ ಸಚಿವರು ಸಿಎಂಗೆ ಶುಭ ಕೋರಿದ್ದು, ಅದೇ ಸಭೆಯಲ್ಲಿ ಬಜೆಟ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಂಡಿದ್ದಾರೆ.
ಬಜೆಟ್ ಗಾತ್ರ ಹಾಗೂ ಆದ್ಯತಾ ವಲಯಗಳ ಬಗ್ಗೆ ಸಚಿವ ಸಂಪುಟದಲ್ಲಿ ತಮ್ಮ ಸಹೋದ್ಯೋಗಿ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂಪೂರ್ಣ ವಿವರಣೆ ನೀಡಿದ್ದಾರೆ.
ಬಜೆಟ್ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು? ಬಡ ಮಧ್ಯಮ ವರ್ಗದವರಿಗೆ ಬಸವರಾಜ ಬೊಮ್ಮಾಯಿ ಏನೆಲ್ಲ ಕೊಡುಗೆ ಕೊಡಬಹುದು ಎಂದು ನಾನೂ ಕೂಡ ಕುತೂಹಲದಿಂದ ಕಾಯುತ್ತಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಆಡಳಿತ ಅನುಭವ ಇದೆ. ಜನ ಕೂಡ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳನ್ನು ಈಡೇರಿಸಲು ಈಗ ಅವರ ಹಿಂದೆ ಇರುವ ಸಂಘಟನೆಗಳು ಅನುಮತಿ ಕೊಡಬೇಕಲ್ಲವೇ? ಎಂದು ಅವರು ಕುಟುಕಿದರು.
ಸಿಎಂ ಬೊಮ್ಮಾಯಿ ಮೊದಲ ಬಾರಿಗೆ ಬಜೆಟ್ ಅಧಿವೇಶನ ಮಂಡಿಸುತ್ತಿದ್ದಾರೆ ಈಗಾಗಲೇ ಅವರಿಗೆ ಆಡಳಿತದಲ್ಲಿ ಸುದೀರ್ಘವಾದ ಅನುಭವ ಇದೆ. ಎಲ್ಲರಿಗೂ ದೊಡ್ಡ ಮಟ್ಟದ ನಿರೀಕ್ಷೆ ಇದೆ ರಾಜ್ಯದಲ್ಲಿ ಬಡವರಿಗೆ ಆರ್ಥಿಕ ನೆರವು ಸಿಗಬೇಕಾಗಿದೆ ನಾನು ನಿಮ್ಮಂಥೆಯೇ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ ಎಂದು ಇಂದು ಮಂಡನೆಯಾಗಲಿರುವ ಕರ್ನಾಟಕ ಬಜೆಟ್ 2022ರ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ ಕರ್ನಾಟಕದ 19 ದಿನಗಳ ಬಜೆಟ್ ಅಧಿವೇಶನ ಮಾರ್ಚ್ 30 ರಂದು ಮುಕ್ತಾಯವಾಗಲಿದೆ. ಬಜೆಟ್ ಮಂಡನೆ ನಂತರ ರಾಜ್ಯದ ಹಣಕಾಸು ನಿರ್ವಹಣೆ ಮತ್ತು ಕೇಂದ್ರದಿಂದ ರಾಜ್ಯದ ಪಾಲಿನ ಹಣವನ್ನು ಪಡೆಯುವ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಿವೆ ಎನ್ನಲಾಗಿದೆ. ಹೀಗಾಗಿ ಇಂದು ಮಂಡನೆಯಾಗಲಿರುವ ಬಜೆಟ್ ಬಗ್ಗೆ ಭಾರೀ ನಿರೀಕ್ಷೆಗಳು ಗರಿಗೆದರಿವೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ