liveLIVE NOW

Karnataka Budget 2021 LIVE: ಸಾಲ ಮಾಡಿದರೂ ತುಪ್ಪ ತಿನ್ನಿಸದ ಬಜೆಟ್!; ಕಾಂಗ್ರೆಸ್ ಲೇವಡಿ

ಕರ್ನಾಟಕ ಬಜೆಟ್ 2021 LIVE: ಅಡಕೆ ಬೆಳೆಗಾರರಿಗೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ,  ಬೆಂಗಳೂರು ಅಭಿವೃದ್ಧಿಗೂ ಈ ಬಾರಿಯ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಿಸುವುದಿಲ್ಲ ಎಂದು ಸಿಎಂ ಬಜೆಟ್​ನಲ್ಲಿ ಘೋಷಿಸಿದ್ದಾರೆ.

  • News18 Kannada
  • | March 08, 2021, 15:04 IST
    facebookTwitterLinkedin
    LAST UPDATED 2 YEARS AGO

    AUTO-REFRESH

    ಹೈಲೈಟ್ಸ್

    14:38 (IST)

    ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್‌ ಹೇಳಿಕೆ 

    ಕೋವಿಡ್ ಕಷ್ಟದ ಸಮಯದಲ್ಲಿ ಬಜೆಟ್ ಮಂಡಿಸಲಾಗಿದೆ 

    ನಯಾ ಪೈಸೆ ತೆರಿಗೆ ಹಾಕದೆ ಬಜೆಟ್ 

    ಬ್ರಹ್ಮ ಬಂದಿದ್ದರೂ ಇಷ್ಟು ಒಳ್ಳೆ ಬಜೆಟ್ ಮಂಡಿಸಲು ಸಾಧ್ಯವಿಲ್ಲ

    ಬೆಂಗಳೂರಿಗೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ

    ಒಕ್ಕಲಿಗ ನಿಗಮಕ್ಕೆ ಹಣ ನೀಡಲಾಗಿದೆ 

    ವಿದ್ಯಾರ್ಥಿಗಳ ವಸತಿ ನಿಲಯ, ಹೊರವರ್ತುಲ ರಸ್ತೆಗೆ ಅನುದಾನ

    ನೀರಾವರಿಗೆ ಹೆಚ್ಚು ಒತ್ತು

    ಪ್ರತಿ ಜಿಲ್ಲೆಗೂ ಹೊಸ ಯೋಜನೆ ನೀಡಿದ್ದಾರೆ

    14:38 (IST)

    ಕಾಂಗ್ರೆಸ್ ನವರಿಗೆ ಮೋದಿ ವಿರುದ್ಧ ಮಾತನಾಡಲು ಧೈರ್ಯವಿಲ್ಲ

    ಯಡಿಯೂರಪ್ಪ ಬಗ್ಗೆ ಮಾತನಾಡಲು ವಿಷಯಗಳಿಲ್ಲ

    ಬೇರೆ ದಾರಿಯಿಲ್ಲದೇ ಪ್ರತಿಭಟನೆ ಮಾಡಿದ್ದಾರೆ

    ಬಜೆಟ್‌ನಲ್ಲಿರುವ ಲೋಪಗಳನ್ನು ಹೇಳಲಿಲ್ಲ

    ಬಡವರ ಬಜೆಟ್ ಇದು

    ಸಚಿವ ಆರ್.ಅಶೋಕ್

    14:38 (IST)

    ಕಾಂಗ್ರೆಸ್ ನವರಿಗೆ ಮೋದಿ ವಿರುದ್ಧ ಮಾತನಾಡಲು ಧೈರ್ಯವಿಲ್ಲ

    ಯಡಿಯೂರಪ್ಪ ಬಗ್ಗೆ ಮಾತನಾಡಲು ವಿಷಯಗಳಿಲ್ಲ

    ಬೇರೆ ದಾರಿಯಿಲ್ಲದೇ ಪ್ರತಿಭಟನೆ ಮಾಡಿದ್ದಾರೆ

    ಬಜೆಟ್‌ನಲ್ಲಿರುವ ಲೋಪಗಳನ್ನು ಹೇಳಲಿಲ್ಲ

    ಬಡವರ ಬಜೆಟ್ ಇದು

    ಸಚಿವ ಆರ್.ಅಶೋಕ್

    14:37 (IST)

    ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆ 

    ಬೆಳೆವಿಮೆ ಯೋಜನೆಗೆ 900ಕೋಟಿ‌ ಕೊಡಲಾಗಿದೆ 

    ವಿಜಯಪುರದ ಇಟ್ಟಂಗಿಹಾಳ್‌ನಲ್ಲಿ ಫುಡ್‌ಪಾರ್ಕ್ 

    ರೈತರ ಮಕ್ಕಳಿಗೆ ಮೀಸಲಾತಿ ಕೊಡಲಾಗಿದೆ 

    ಸಾವಯವ, ಸಿರಿಧಾನ್ಯ, ಸಾವಯವ ಇಂಗಾಲಕ್ಕೆ ಅನುದಾನ

    ಕೃಷಿ ಇಲಾಖೆಗೆ ಯಾವುದೇ ಕೊರತೆಯಾಗಿಲ್ಲ

    ಕೃಷಿಗೆ ಪೂರಕವಾದ ಬಜೆಟ್ ಇದು

    14:06 (IST)

    ರಾಜ್ಯ ಬಜೆಟ್ ಕುರಿತು ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿಕೆ

    ಕೇವಲ ಇದು ಭಾಷಣದ ಬಜೆಟ್

    ರಾಜ್ಯ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಪೂರಕವಾಗಿಲ್ಲ

    ಜನ ವಿರೋಧಿ ಸರ್ಕಾರ

    ಸರ್ಕಾರದ ವಿರುದ್ದ  ಮೇಲ್ಮೆನೆ, ಕೆಳಮನೆಯಲ್ಲಿ ಪ್ರತಿಭಟನೆ ಮಾಡಿದ್ದೇವೆ

    ಯಡಿಯೂರಪ್ಪನವ ಜನ ಪರ ಸರ್ಕಾರವಲ್ಲ ಇದು, 

    ಬಜೆಟ್ ಮಾಡುವ ಅರ್ಹತೆ, ನೈತಿಕತೆ ಈ ಸರ್ಕಾರಕ್ಕೆ ಇಲ್ಲ

    ಯಾವ ವರ್ಗಕ್ಕೂ ಈ ಬಜೆಟ್ ಸಹಕಾರಿಯಾಗಿಲ್ಲ

    ಸಮಾಜದ ಎಲ್ಲಾ ವರ್ಗದವರಿಗೂ ಇದು ನಿರಾಶದಾಯಕ ಬಜೆಟ್

    Karnataka Budget 2021: ಕಳೆದ ವಾರದಿಂದ ಕರ್ನಾಟಕ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 8ನೇ ಬಾರಿಗೆ ಇಂದು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಮಹಿಳಾ ಅಭಿವೃದ್ಧಿ ಹಾಗೂ ಸ್ವಾವಲಂಬನೆಗೆ ಆದ್ಯತೆ ನೀಡಲಾಗಿದೆ. ಈ ಬಾರಿಯ ಬಜೆಟ್ 2,46,206 ಕೋಟಿ ಗಾತ್ರದ್ದಾಗಿದೆ.  ಅಡಕೆ ಬೆಳೆಗಾರರಿಗೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ,  ಬೆಂಗಳೂರು ಅಭಿವೃದ್ಧಿಗೂ ಈ ಬಾರಿಯ ಬಜೆಟ್​ನಲ್ಲಿ ಒತ್ತು ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಿಸುವುದಿಲ್ಲ ಎಂದು ಸಿಎಂ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಇಂದಿನ ಬಜೆಟ್​ನ ಮುಖ್ಯಾಂಶಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನ್ಯೂಸ್​18 ಕನ್ನಡ ನಿಮಗೆ ನೀಡಲಿದೆ.