• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Budget 2021 – ಯಾವುದಿವೆ ಪ್ರಮುಖ ಯೋಜನೆಗಳು? ಕರ್ನಾಟಕ ಬಜೆಟ್ ಮುಖ್ಯಾಂಶಗಳು

Karnataka Budget 2021 – ಯಾವುದಿವೆ ಪ್ರಮುಖ ಯೋಜನೆಗಳು? ಕರ್ನಾಟಕ ಬಜೆಟ್ ಮುಖ್ಯಾಂಶಗಳು

ಬಿಎಸ್ ಯಡಿಯೂರಪ್ಪ

ಬಿಎಸ್ ಯಡಿಯೂರಪ್ಪ

ಕೊರೋನಾದಿಂದ ಆದಾಯ ಇಳಿಕೆಯಾಗಿದ್ದರೂ ಯಡಿಯೂರಪ್ಪ ಅವರ ಬಜೆಟ್ ಗಾತ್ರ ಈ ಬಾರಿ ತುಸು ಹೆಚ್ಚಾಗಿದೆ. ಮಹಿಳೆಯರಿಗೆ ವಿಶೇಷ ಗಮನ ಕೊಟ್ಟಿರುವ ಈ ಬಜೆಟ್​ನಲ್ಲಿ ಪ್ರಮುಖವಾಗಿರುವ ಅಂಶಗಳು ಇಲ್ಲಿವೆ….

  • Share this:

ಬೆಂಗಳೂರು(ಮಾ. 08): ಕೊರೋನಾ ಸಂಕಷ್ಟದ ಮಧ್ಯೆ ರಾಜ್ಯ ಸರ್ಕಾರದ ಈ ಬಾರಿಯ ಮುಂಗಡಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದಾರೆ. ತೆರಿಗೆ ಸಂಗ್ರಹ ಇಳಿಕೆಯಿಂದ ಸರ್ಕಾರದ ಆದಾಯ ಕಡಿಮೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ಯಡಿಯೂರಪ್ಪ ಅವರ ಬಜೆಟ್ ಗಾತ್ರ ಈ ಬಾರಿ ಹೆಚ್ಚಳವಾಗಿದೆ. ಕಳೆದ ಬಾರಿ 2,37,893 ಕೋಟಿ ರೂ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರ ಬಜೆಟ್ ಗಾತ್ರ ಈ ಬಾರಿ 2,46,206 ಕೋಟಿ ರೂ ಇದೆ.


ಅಂತಾರಾಷ್ಟ್ರೀಯ ಮಹಿಳಾ ದಿನವಾದ ಇಂದು ಬಜೆಟ್ ಮಂಡಿಸಿದ ಸಿಎಂ ಯಡಿಯೂರಪ್ಪ ಅವರು ತಮ್ಮ ಬಜೆಟ್​ನಲ್ಲಿ ಮಹಿಳೆಯರಿಗೆ ಗಿಫ್ಟ್ ಕೊಡುತ್ತೇನೆಂದು ನೀಡಿದ್ದ ಭರವಸೆಯನ್ನು ಉಳಿಸಿಕೊಂಡಿದ್ಧಾರೆ. ಮಹಿಳಾ ಅಭಿವೃದ್ಧಿಗೆ ಒಟ್ಟಾರೆ 37 ಸಾವಿರ ಕೋಟಿ ರೂ ಮೀಸಲಿರಿಸಿದ್ಧಾರೆ. ಇದರಲ್ಲಿ ಕಡಿಮೆ ಬಡ್ಡಿದರಲ್ಲಿ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂವರೆಗೆ ಸಾಲ ನೀಡುವ ಯೋಜನೆಯೂ ಒಳಗೊಂಡಿದೆ. ಮೇಕೆದಾಟು ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರ ಅಭಿವೃದ್ಧಿಗೆ ಹತ್ತಿರ ಹತ್ತಿರ 8 ಸಾವಿರ ಕೋಟಿ ರೂ ನೀಡಿದ್ಧಾರೆ. ಮೆಟ್ರೋ ಯೋಜನೆ, ಹೊರವರ್ತುಲ ರಸ್ತೆ ಇತ್ಯಾದಿಗೆ ಪ್ರತ್ಯೇಕವಾಗಿ ಅನುದಾನ ಕೊಟ್ಟಿದ್ದಾರೆ.


ವಿಜಯಪುರದಲ್ಲಿ ಫುಡ್ ಪಾರ್ಕ್, ಪ್ರತಿ ಜಿಲ್ಲೆಯಲ್ಲೂ ಗೋಶಾಲೆ, ಹಾಸನ ವಿಮಾನ ನಿಲ್ದಾಣ, ರಾಮನಗರ ಜಿಲ್ಲೆಯಲ್ಲಿ ಹೈಟೆಕ್ ಸಿಲ್ಕ್ ಮಾರ್ಕೆಟ್ ಇತ್ಯಾದಿ ಅನೇಕ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.


ಇದನ್ನೂ ಓದಿ: Karnataka Budget - ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸೆಸ್ ಇಲ್ಲ


ಯಡಿಯೂರಪ್ಪ ಅವರ ಕರ್ನಾಟಕ ಬಜೆಟ್ 2021 – ಮುಖ್ಯಾಂಶಗಳು:
ಒಟ್ಟು ಬಜೆಟ್ ಗಾತ್ರ - 246206 ಕೋಟಿ
ಬೆಂಗಳೂರು ನಗರ ಅಭಿವೃದ್ಧಿಗೆ 7,795 ಕೋಟಿ ಅನುದಾನ
ಮಹಿಳಾ ಅಭಿವೃದ್ಧಿಗೆ ಒಟ್ಟು 37,188 ಕೋಟಿ ರೂ ಅನುದಾನ
ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಶೇ. 50 ಮೀಸಲಾತಿ
ತೈಲೋತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ಹೇರಿಕೆ ಇಲ್ಲ
ಶಿಕ್ಷಣ ಕ್ಷೇತ್ರಕ್ಕೆ ಶೇ. 11ರಷ್ಟು ಅನುದಾನ ಮೀಸಲು
ಗೋರಕ್ಷಣೆಗೆ‌ ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ತೀರ್ಮಾನ
ಮೇಕೆದಾಟು ಯೋಜನೆಗೆ 9,000 ಕೋಟಿ ರೂ ಅನುದಾನ
ಬೆಂಗಳೂರಿನ ಮೆಟ್ರೋ ಯೋಜನೆಗಳ ಕಾಮಗಾರಿಗಳಿಗೆ 30,000 ಕೋಟಿ ಅನುದಾನ
ಬೆಂಗಳೂರಿನ ಹೊರವರ್ತುಲ ರಸ್ತೆಗೆ 14,788 ಕೋಟಿ
ಹಾಸನ ವಿಮಾನನಿಲ್ದಾಣ ಕಾರ್ಯಾರಂಭಕ್ಕೆ 175 ಕೋಟಿ ರೂ ಘೋಷಣೆ
ರಾಮನಗರದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ 75 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
ಕಳಸಾಬಂಡೂರಿ ಯೋಜನೆಗೆ 1677 ಕೋಟಿಗೆ ಆಡಳಿತಾತ್ಮಕ ಅನುಮೋದನೆ
ಭದ್ರಾ ಮೇಲ್ದಂಡೆ ಯೋಜನೆಗೆ 21,474 ಕೋಟಿ ಅನುಮೋದನೆ
ಕೃಷ್ಣಾ ಭಾಗ್ಯ ಜಲನಿಗನ ನಿಯಮಿತಕ್ಕೆ 5,600 ಕೋಟಿ
58 ಆಣೆಕಟ್ಟು ಪುನಶ್ಚೇತನಕ್ಕೆ 1,500 ಕೋಟಿ
ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹೊಸ ನಿಗಮ - 500 ಕೋಟಿ ರೂ ಮೀಸಲು
ಮಂಗಳೂರಿನ ಗಂಜಿಮಠದ ಬಳಿ ನೂರು ಎಕರೆ ಜಾಗದಲ್ಲಿ ಪ್ಲಾಸ್ಟಿಕ್ ಪಾರ್ಕ್ - 66 ಕೋಟಿ ರೂ ಯೋಜನಾ ವೆಚ್ಚ
ಅಲ್ಪ ಸಂಖ್ಯಾತರಿಗೆ 1500 ಕೋಟಿ ರೂ. ಮೀಸಲು
ವಿಜಯಪುರದಲ್ಲಿ ಫುಡ್ ಪಾರ್ಕ್ ಸ್ಥಾಪನೆ
ಬೇಡ್ತಿ - ವರದಾ ನದಿ ಜೋಡಣೆಗೆ ಕ್ರಮ
ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ31,028 ಕೋಟಿ ಅನುದಾನ
ಆಸ್ತಿ ನೋಂದಣಿ ವಂಚನೆ ತಡೆಗಟ್ಟಲು ಐಐಟಿ ಕಾನಪುರ್ ನೆರವಿನೊಂದಿಗೆ ಬ್ಲ್ಯಾಕ್ ಚೈನ್‌ ತಂತ್ರಜ್ಞಾನ ಬಳಕೆಗೆ ನಿರ್ಧಾರ
ಮಂಗಳೂರು-ಪಣಜಿ ಮಧ್ಯೆ ಜಲಮಾರ್ಗ


ಮಹಿಳೆಯರಿಗೆ:
ಮಹಿಳಾ ಅಭಿವೃದ್ಧಿಗೆ ಒಟ್ಟು 37,188 ಕೋಟಿ ರೂ ಅನುದಾನ
ಮಹಿಳಾ ಉದ್ಯಮಿಗಳಿಗೆ ನೆರವಾಗಲು 2ಕೋಟಿವರೆಗೆ ಶೇ.4 ಬಡ್ಡಿದರದಲ್ಲಿ ಸಾಲ
ಪ್ರತಿ ತಾಲೂಕಿನ 10ರಂತೆ 2260 ಕಿರು ಉದ್ದಿಮೆ ಮೂಲಕ 25ಸಾವಿರ ಮಹಿಳೆಯರಿಗೆ ಉತ್ತೇಜನ
ಗರ್ಭಿಣಿ ಉದ್ಯೋಗಿಗಳಿಗೆ 6 ತಿಂಗಳ ರಜೆ


ಬೆಂಗಳೂರಿಗೆ:
ಬೆಂಗಳೂರು ನಗರ ಅಭಿವೃದ್ಧಿಗೆ 7,795 ಕೋಟಿ ಅನುದಾನ
ಬೆಂಗಳೂರು ಉಪನಗರ ರೈಲು ಅಭಿವೃದ್ಧಿಗೆ 15,767 ಕೋಟಿ ರೂ.ಮೀಸಲು
ಮೇಕೆದಾಟು ಯೋಜನೆಗೆ ಕಾಯಕಲ್ಪ - 9000 ಸಾವಿರ ಕೋಟಿ ರೂ ಅನುದಾನ ಮೀಸಲು
ಮೆಟ್ರೋ 1/2 ನೇ ಹಂತದ ಯೋಜನೆಗೆ 30,000 ಕೋಟಿ
ಹೊರವರ್ತುಲ ರಸ್ತೆಗೆ 14,788 ಕೋಟಿ
ವಿಕ್ಟೋರಿಯಾ, ಜಯದೇವ ಆಸ್ಪತ್ರೆಯಲ್ಲಿ ಅಂಗಾಗ ಕಸಿಗೆ 28 ಕೋಟಿ ರೂ
ಕೆ.ಸಿ.ಜನರಲ್ ಆಸ್ಪತ್ರೆ ವಿಸ್ತರಣೆಗೆ 20 ಕೋಟಿ
ಬಿಬಿಎಂಪಿಯ 57 ವಾರ್ಡ್ ಗಳಲ್ಲಿ ಜನಾರೋಗ್ಯ ಕೇಂದ್ರ
ಬಿಬಿಎಂಪಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 33 ಕೋಟಿ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶವನ್ನ ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ Experience Bengaluru ಕೇಂದ್ರವನ್ನಾಗಿ ಪರಿವರ್ತನೆ
ಬೆಂಗಳೂರಿನ ಹೆಸರಘಟ್ಟದಲ್ಲಿ ಕುರಿ ಮೇಕೆ ತಳಿಗಳ ತರಬೇತಿಗೆ ಥೀಮ್‌ಪಾರ್ಕ್ 100 ಎಕರೆ ಪ್ರದೇಶದಲ್ಲಿ ನಿರ್ಮಾಣ
ಕೈಗೆಟುಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು 35 ಲಕ್ಷ ಗಳಿಂದ 45 ಲಕ್ಷ ರೂಗಳ ವರೆಗಿನ ಮೌಲ್ಯದ ಅಪಾರ್ಟ್ ಮೆಂಟ್

First published: