HOME » NEWS » State » KARNATAKA BUDGET 2020 WEARING GREEN SHAWL DOESNT MAKE ONE A FARMER SIDDARAMAIAH CRITICIZES BSY AND HIS BUDGET MAK

Karnataka Budget Updates: ರೈತರ ಪ್ರಗತಿ ಎಂದರೆ ಇದೇನಾ, ಹಸಿರು ಶಾಲು ಹಾಕ್ಕೊಂಡ್ರೆ ರೈತರು ಉದ್ದಾರ ಆಗ್ತಾರ?; ಬಿಎಸ್​ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

Karnataka Budget Highlights : ನಾವು ಹಳ್ಳಿಯಿಂದ ಬಂದವರು, ಕೃಷಿ ಮಾಡಿ ಅನುಭವ ಇರುವವರು, ನಮಗೆ ನಿಜಕ್ಕೂ ರೈತರ ಕಷ್ಟ ಗೊತ್ತು. ಆದರೆ, ಯಡಿಯೂರಪ್ಪ ಎಂದಾದರು ಕೃಷಿ ಮಾಡಿದ್ದಾರಾ? ಅವರೇ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಮತ್ತೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

MAshok Kumar | news18-kannada
Updated:March 5, 2020, 2:08 PM IST
Karnataka Budget Updates: ರೈತರ ಪ್ರಗತಿ ಎಂದರೆ ಇದೇನಾ, ಹಸಿರು ಶಾಲು ಹಾಕ್ಕೊಂಡ್ರೆ ರೈತರು ಉದ್ದಾರ ಆಗ್ತಾರ?; ಬಿಎಸ್​ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು (ಮಾರ್ಚ್ 05); ರಾಜ್ಯ ಬಜೆಟ್ 2020  ಕುರಿತು ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ರೈತರ ಪ್ರಗತಿ ಅಂದ್ರೆ ಇದೇನಾ? ಈ ಬಜೆಟ್​ನಿಂದ ರೈತರ ಅಭಿವೃದ್ಧಿಯಾಗುತ್ತಾ? ನೀವು ಶಾಲು ಹಾಕಿಕೊಂಡಾಕ್ಷಣ ರೈತರ ಉದ್ದಾರ ಆಗಲ್ಲ, ಅಸಲಿಗೆ ನೀವು ಎಂದಾದರೂ ಕೃಷಿ ಮಾಡಿದ್ದೀರ? ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಅಧಿವೇಶನದಲ್ಲಿ ಬಜೆಟ್ ಮಂಡಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಯಡಿಯೂರಪ್ಪನವರು ನಮ್ಮದು ರೈತರ ಪರ ಸರ್ಕಾರ ಅಂತ ಹೇಳ್ತಾರೆ. ಮಾತೆತ್ತಿದರೆ ರೈತರ ಅಭಿವೃದ್ಧಿಯೇ ನಮ್ಮ ಗುರಿ ಅಂತಾರೆ. ಆದರೆ, ನಿಜಕ್ಕೂ ಇದೇನಾ ರೈತರ ಪರ ಬಜೆಟ್?" ಎಂದು ವಾಗ್ದಾಳಿ ನಡೆಸಿದ್ದಾರೆ.

"ರೈತರ ಪ್ರಗತಿ ಅಂದ್ರೆ ಇದೇನಾ? ನೀವು ಹಸಿರು ಶಾಲು ಹಾಕಿಕೊಂಡಾಕ್ಷಣ ರೈತರ ಅಭಿವೃದ್ಧಿಯಾಗಲ್ಲ. ಬದಲಾಗಿ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಬೇಕು. ಆದರೆ, ಇಂದು ಯಡಿಯೂರಪ್ಪ ಮಂಡಿಸಿರುವ ಬಜೆಟ್​ನಲ್ಲಿ ಕೃಷಿ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಇಲ್ಲ. ರೈತರ ಅಭಿವೃದ್ಧಿಯ ಮಾನದಂಡವೇ ಇಲ್ಲ. ಹೀಗಿದ್ದ ಮೇಲೆ ರೈತರ ಪ್ರಗತಿ ಹೇಗೆ ಸಾಧ್ಯ?” ಎಂದು ಕಿಡಿಕಾರಿದ್ದಾರೆ.

"ನಾವು ಹಳ್ಳಿಯಿಂದ ಬಂದವರು, ಕೃಷಿ ಮಾಡಿ ಅನುಭವ ಇರುವವರು, ನಮಗೆ ನಿಜಕ್ಕೂ ರೈತರ ಕಷ್ಟ ಗೊತ್ತು. ಆದರೆ, ಯಡಿಯೂರಪ್ಪ ಎಂದಾದರು ಕೃಷಿ ಮಾಡಿದ್ದಾರಾ? ಅವರೇ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಮತ್ತೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ?” ಎಂದು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ ಮಹದಾಯಿ ಯೋಜನೆಯ ಬಗ್ಗೆಯೂ ಗಮನ ಸೆಳೆದಿರುವ ಸಿದ್ದರಾಮಯ್ಯ, “ಇದು ರಾಜ್ಯ ಸರ್ಕಾರದ ಹಾಗೂ ರೈತರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ರಾಜ್ಯ ಸರ್ಕಾರ ಕೇವಲ 500 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಅಸಲಿಗೆ ಇಷ್ಟು ಹಣ ಸಾಲುವುದಿಲ್ಲ. ಹೀಗಾಗಿ ಸರಿಯಾದ ಯೋಜನೆ ರೂಪಿಸಿ ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡಿ ಮುಂದಿನ 2 ವರ್ಷದಲ್ಲಿ ಸಂಪೂರ್ಣ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Karnataka Budget Updates: ಇದು ಸತ್ವ ಇಲ್ಲದ ನೀರಸ ಬಜೆಟ್, ಹಳೆಯ ಯೋಜನೆ ಬಿಟ್ಟರೆ, ಹೊಸದೂಂತ ಯಾವ್ದೂ ಇಲ್ಲ; ಎಂ.ಬಿ. ಪಾಟೀಲ್ ಕಿಡಿ
Youtube Video
First published: March 5, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories