HOME » NEWS » State » KARNATAKA BUDGET 2020 THERE ARE NO PROGRAMS THAT EMPHASIZE AGRICULTURE SAYS H K PATIL HK

Karnataka Budget Updates: ಬಜೆಟ್​ನಲ್ಲಿ ಕೃಷಿಗೆ ಮಹತ್ವ ಕೊಟ್ಟಿರುವ ಯಾವುದೇ ‌ಕಾರ್ಯಕ್ರಮ ಕಾಣುತ್ತಿಲ್ಲ: ಹೆಚ್​ಕೆ ಪಾಟೀಲ್​​​​

Karnataka Budget Updates : ಕೇಂದ್ರದಿಂದಲೂ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ತೆರಿಗೆ ಹೊಡೆತಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವೇ ಹೊಣೆ  ಎಂದು ಆಪಾದಿಸಿದರು.

news18-kannada
Updated:March 5, 2020, 4:04 PM IST
Karnataka Budget Updates: ಬಜೆಟ್​ನಲ್ಲಿ ಕೃಷಿಗೆ ಮಹತ್ವ ಕೊಟ್ಟಿರುವ ಯಾವುದೇ ‌ಕಾರ್ಯಕ್ರಮ ಕಾಣುತ್ತಿಲ್ಲ: ಹೆಚ್​ಕೆ ಪಾಟೀಲ್​​​​
ಮಾಜಿ ಸಚಿವ ಹೆಚ್ ಕೆ ಪಾಟೀಲ​​​
  • Share this:
ಬೆಂಗಳೂರು(ಮಾ. 05) : ಸಿಎಂ ಯುಡಿಯೂಪ್ಪನವರು ಮಂಡಿಸಿದ ಬಜೆಟ್ ನಿರಾಶಾದಾಯಕವಾಗಿದ್ದು, ಆಡಳಿತ ಪಕ್ಷದವರಿಗೆ ಗೊಂದಲ ಆಗಿದೆ. ಮಹದಾಯಿ ಯೋಜನೆಗೆ ಕೇವಲ 500 ಕೋಟಿ ಕೊಟ್ಟಿದ್ದಾರೆ. ರಾಜಕೀಯ ಇಚ್ಚಾಶಕ್ತಿಯ ಕೊರತೆ ತೋರಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್​​​ ಅಸಮಾಧಾನ ಹೊರಹಾಕಿದ್ದಾರೆ. 

ಕರ್ನಾಟಕದ ಒಟ್ಟು ಅಭಿವೃದ್ದಿಗೆ ಬಜೆಟ್ ಮಂಡನೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರ ಅನುದಾನ ಕೊರತೆ , ಜಿಎಸ್​ಟಿ ಕೊರತೆ ಇದೆ ಅಂತ ಅವರೇ ಹೇಳಿದ್ದಾರೆ. ಇದು ರಾಜ್ಯದ ಬಜೆಟ್ ಅಲ್ಲ‌. ಇಷ್ಟು ನಿರಾಶಾದಾಯಕ ಬಜೆಟ್ ಇಷ್ಟು ವರ್ಷಗಳಲ್ಲಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತ ಶಿಶುನಾಳ ಷರೀಫರ ಅಭಿವೃದ್ದಿ ಬಗ್ಗೆ ಬಜೆಟ್​ನಲ್ಲಿ ಹೇಳಿರುವುದನ್ನ ಸ್ವಾಗತ ಮಾಡುತ್ತೇವೆ. ನಾನು ರೈತ ಹೋರಾಟಗಾರ, ಕೃಷಿಗೆ ಹೆಚ್ಚು ಒತ್ತು ಕೊಡುತ್ತೇನೆ ಅಂತೇಳಿದರು. ಆದರೆ, ಬಜೆಟ್ ನೋಡಿದರೆ, ಕೃಷಿಗೆ ಮಹತ್ವ ಕೊಟ್ಟಿರುವ ಯಾವುದೇ ‌ಕಾರ್ಯಕ್ರಮಗಳು ಕಾಣುತ್ತಿಲ್ಲ ಎಂದರು.

ರೈತರಿಗಾಗಿ ವಿಶೇಷ ಪ್ಯಾಕೇಜ್ ಇಲ್ಲ. ಪ್ರವಾಹದಿಂದ ಮನೆ, ಆಸ್ತಿ ಪಾಸ್ತಿ ನಷ್ಟ ಆಗಿದೆ. ಕೃಷಿ ಉತ್ಪಾದನೆ ಕಡಿಮೆ ಆಗುತ್ತಿದೆ. ರೈತರಿಗೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಹೆಚ್.ಕೆ. ಪಾಟೀಲ್, ಕೇಂದ್ರದಿಂದಲೂ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ತೆರಿಗೆ ಹೊಡೆತಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವೇ ಹೊಣೆ  ಎಂದು ಆಪಾದಿಸಿದರು.

ಇದನ್ನೂ ಓದಿ : Karnataka Budget Highlights: ಮಹದಾಯಿ ಯೋಜನೆಗೆ 500 ಕೋಟಿ ಎತ್ತಿನಹೊಳೆಗೆ 1500 ಕೋಟಿ ಮೀಸಲು

25 ಸಂಸದರು ಬಾಯಿ ಮುಚ್ಚಿಕೊಂಡಿರುವುದು ದುರ್ದೈವದ ಸಂಗತಿ. ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ದಿಗೆ ಸಿದ್ದರಿದ್ದೇವೆ ಅಂತೇಳಿದರು. ಆದರೆ, ಈಗ ಬಜೆಟ್​ ನಲ್ಲಿ ಏನು  ಕೊಟ್ಟಿದ್ದಾರೆ. ಶಿಕ್ಷಣಕ್ಕೆ ಏನಾದರೂ ಕೊಟ್ಟಿದ್ದಾರಾ? ಆರೋಗ್ಯ ಇಲಾಖೆಗೆಗೂ ಇಲ್ಲ. ಅಭಿವೃದ್ದಿ ಪೂರಕವಾಗಿಲ್ಲ‌ ಈ ಬಜೆಟ್. ಒಂದು ಯೋಜನೆ ಸಹ ಹೊಸದಾಗಿ ಜಾರಿ ಮಾಡಿಲ್ಲ. ಆರ್ಥಿಕ ಮುಗ್ಗುಟ್ಟು ಇಲ್ಲೇ ಕಾಣಿಸುತ್ತಿದೆ ಎಂದರು.

ಸಿದ್ದರಾಮಯ್ಯ ಸರ್ಕಾರ ಅನುಭವ ಮಂಟಪ ಅಭಿವೃದ್ದಿಗೆ ಮುಂದಾಗಿದ್ದರು. ಈಗ ಸರ್ಕಾರ 100 ಕೋಟಿ ಹಣ ಕೊಟ್ಟಿರುವುದು ಸ್ವಲ್ಪ ಸಮಾಧಾನಕರವಾಗಿದೆ. ಇದನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
Youtube Video
First published: March 5, 2020, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories