liveLIVE NOW

Karnataka Budget 2020 Live: ಕೇಂದ್ರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಸಿಎಂ ಯಡಿಯೂರಪ್ಪ

Live Karnataka Budget 2020 News Updates: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಚೊಚ್ಚಲ ಬಜೆಟ್​ ಮಂಡನೆಗೆ ಯಡಿಯೂರಪ್ಪ ಸಿದ್ದರಾಗಿದ್ದಾರೆ. ಅವರ ಆಯವ್ಯಯ ಪತ್ರದಲ್ಲಿ ಜನಸಾಮಾನ್ಯರಿಗೆ ಸಿಗಲಿರುವ ಲಾಭವೇನು? ಆಗುವ ನಷ್ಟವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

 • News18 Kannada
 • | March 05, 2020, 15:56 IST
  facebookTwitterLinkedin
  LAST UPDATED 3 YEARS AGO

  AUTO-REFRESH

  ಹೈಲೈಟ್ಸ್

  15:48 (IST)

  ಕೇಂದ್ರ ಸರ್ಕಾರದ ಮೇಲೆ ಸಿಎಂ ಬಹಿರಂಗವಾಗಿ ಅಸಮಾಧಾನ

  ಯಾವುದೇ ಮುಚ್ಚು ಮರೆ ಇಲ್ಲದೇ ಹೇಳ್ತಿದ್ದೇನೆ

  ಕೇಂದ್ರ ಸರ್ಕಾರದಿಂದ ಸಿಗಬೇಕಿದ್ದ ಅನುದಾನ ಹಾಗೂ ಜಿಎಸ್ಟಿ ಪಾಲು ಕಡಿಮೆ ಯಾಗಿದೆ

  ಅದಕ್ಕಾಗಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸರಿ ಇಲ್ಲ ಎಂದ ಸಿಎಂ

  ಈ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳ್ತಿದ್ದೇನೆ ಎಂದ ಸಿಎಂ

  ಬಹಿರಂಗವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಯಡಿಯೂರಪ್ಪ ‌

  15:30 (IST)

  ಯಾವುದೇ ಮುಚ್ಚು ಮರೆ ಇಲ್ಲದೇ ಬಜೆಟ್ ಬಗ್ಗೆ ತಿಳಿಸಿದ್ದೇನೆ

  ಬಜೆಟ್ ಕುರಿತು ಇನ್ನೂ ಸದನದಲ್ಲಿ ಸ್ಪಷ್ಟನೆ

  ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರ ಕೊಡುವೆ

  ಸಿಎಂ ಯಡಿಯೂರಪ್ಪ ಹೇಳಿಕೆ.

  15:30 (IST)

  ಸಿಎಂ ಯಡಿಯೂರಪ್ಪ ಹೇಳಿಕೆ.

  ಕೇಂದ್ರದಿಂದ ಅನುದಾನ ಕಡಿಮೆ ವಿಚಾರ.

  ಕೇಂದ್ರ ಸರ್ಕಾರಕ್ಕೆ ‌ಪ್ರಸ್ತಾವನೆ

  13ನೇ ತಾರೀಖು ಪ್ರಸ್ತಾವನೆ ಕೊಡ್ತಿದ್ಸೇವೆ

  15 ನೇ ಹಣಕಾಸು ಕುರಿತು ಸಭೆ ಇದೆ

  ಆ ಸಭೆಯಲ್ಲಿ ಹಣ ಕಡಿತದ ಬಗ್ಗೆ ವಾದ ಮಂಡಿಸುತ್ತೇವೆ

  ಜೆಎಸ್ಟಿಗೆ ಸಿಗಬೇಕಾದ ಪಾಲಿನ ಬಗ್ಗೆ ಅಂದು ಪ್ರಸ್ತಾಪ ಮಾಡ್ತೇವೆ

  ಆ ಸಭೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೋಗ್ತಾರೆ..

  15:20 (IST)

  ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳ 

  ಇದರಿಂದ 1500 ಕೋ ಆದಾಯ ಬರುವ ನಿರೀಕ್ಷೆ ಇದೆ 

  ಲಿಕ್ಕರ್ ಇಂದ 1200ಕೋ ಆದಾಯ ಬರುವ ನಿರೀಕ್ಷೆ ಇದೆ 

  ನಾವು ಅಧಿಕಾರಿಕ್ಕೆ ಮಾಡಿ 7ತಿಂಗಳು ಆಗಿದೆ 

  ಹಿಂದಿನ ಸರ್ಕಾರ ಮಾಡಿದ ಸಾಲ ಮನ್ನಾ 

  ಇನ್ನೊಂದು ಕಡೆ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಬಂದಿಲ್ಲ 

  ಹಾಗಾಗಿ ಬೆಲೆ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ

  15:20 (IST)

  ಸಿಎಂ  ಬಿಎಸ್​ ಯಡಿಯೂರಪ್ಪ ಹೇಳಿಕೆ

  ಜಿಎಸ್ಟಿಯಿಂದ ಇಡೀ ದೇಶದಲ್ಲಿ ಕರ್ನಾಟಕ್ಕೆ ಹಿನ್ನಡೆ ಆಗಿದೆ.

  ನೀರಾವರಿಗೆ ಹೆಚ್ಚು ಒತ್ತು ಕೊಟ್ಟು ಬಜೆಟ್ ಮಂಡನೆ ಮಾಡಿದ್ದೇವೆ

  ನಾವು ನೀರಾವರಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ

  15:17 (IST)

  ಆರ್ಥಿಕ ಸ್ಥಿತಿ ಸರಿದಾರಿಗೆ ತರಲು ಪ್ರಯತ್ನ
  ರೈತರ ಸಾಲಮನ್ನಾದಿಂದ ಉಂಟಾದ ಸಮಸ್ಯೆಯನ್ನು ಸರಿಪಡಿಸುವ ಕೆಲಸ ನಡೆದಿದೆ..
  ಪರೋಕ್ಷವಾಗಿ ರೈತರ ಸಾಲ ಮನ್ನಾದಿಂದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ ಎಂದ ಸಿಎಂ.
  ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಸಿಎಂ ಬಿಎಸ್ವೈ ಆರೋಪ..

  15:12 (IST)

  ಯಾವುದೇ ಮುಚ್ಚು ಮರೆ ಇಲ್ಲ- ಸಿಎಂ ಬಿಎಸ್​ವೈ

  ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ವಿಚಾರ

  ತೆರಿಗೆ ಪಾಲು ಗಣನೀಯವಾಗಿ ಕಡಿಮೆ ಆಗಿದೆ

  ಜಿಎಸ್​ಡಿ ಪರಿಹಾರ ಕೂಡ ಕಡಿಮೆ- ಸಿಎಂ ಬಿಎಸ್​ವೈ

  ಇದರಿಂದ ರಾಜ್ಯದ ಸಂಪನ್ಮೂಲ 15 ಸಾವಿರ ಕಡಿಮೆ

  ಒಟ್ಟಾರೆ ಬಜೆಟ್ ಗಾತ್ರ 2,37,893 ಕೋಟಿ ಆಗಿದೆ

  ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

  ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದ ಹಣ ಕಡಿಮೆಯಾಗಿದೆ...

  ಜಿಎಸ್‌ಟಿ ಪರಿಹಾರ ಹಣ ಕೂಡ ಕಡಿಮೆ ಆಗಿದೆ...

  ಹಾಗಾಗಿ ರಾಜ್ಯದ ಸಂಪನ್ಮೂಲ ಕಳೆದ ವರ್ಷಗಳಿಗೆ ಹೊಲಿಸಿದ್ರೆ  ಈ ಬಾರಿ 15 ಸಾವಿರ ಕೋಟಿ ಕಡಿಮೆಯಾಗಿದೆ...

  ಸಿಎಂ ಯಡಿಯೂರಪ್ಪ ಹೇಳಿಕೆ

  ಆದ್ಯತೆ ನೀರಾವರಿ, ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇವೆ
   

  15:11 (IST)

  ಸುದ್ದಿಗೋಷ್ಠಿಯಲ್ಲಿ ಐ.ಎನ್.​ಎಸ್.ಪ್ರಸಾದ್ ಭಾಗಿ

  ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ

  ಗೃಹ ಸಚಿವ ಬಸವರಾಜ್ ಬೊಮ್ಮಾಯಿ,

  ಕಾನೂನು ಸಚಿವ ಮಾಧುಸ್ವಾಮಿ ಉಪಸ್ಥಿತಿ

  15:04 (IST)

  ಬಜೆಟ್​ ಮಂಡನೆ ಬಳಿಕ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ

  ಬಜೆಟ್ ಕುರಿತು ಸಿಎಂ ಬಿಎಸ್​ವೈ ಸುದ್ದಿಗೋಷ್ಠಿ

  ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ

  ದೂರದೃಷ್ಟಿಯುಳ್ಳ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ

  ರೈತ ಆರ್ಥಿಕಕತೆ ಬಲಪಡಿಸುವ ಬಜೆಟ್ ಇದಾಗಿದೆ

  ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

  ಕೃಷಿ ಗಟ್ಟಿ ನೆಲಗಟ್ಟಿನಲ್ಲಿ ಹಲವು ಅಭಿವೃದ್ಧಿ ಕಾರ್ಯ

  ಕೃಷಿ ಉತ್ತೇಜನಕ್ಕಾಗಿ ಭೂ& ಜಲಸಂರಕ್ಷಣೆಗೆ ಒತ್ತು

  ಏತ ನೀರಾವರಿಗೆ 5 ಸಾವಿರ ಕೋಟಿ ಮೀಸಲು

  ಮಳೆಯಧಾರಿತ ಕೃಷಿ ಆಧಾರಿ ಯೋಜನೆ ಜಾರಿ

  ಆಡಳಿತ ಸುಧಾರಣೆಗೆ ಹಲವು ಯೋಜನೆ

  ಬೆಳಗಾವಿ ಸುವರ್ಣಸೌಧಕ್ಕೆ ಕೆಲ ಇಲಾಖೆಗಳ ವರ್ಗ 

  ಪ್ರವಾಸೋದ್ಯಮಕ್ಕೆ 500 ಕೋಟಿ ಮೀಸಲು

  ಕಳಸ ಬಂಡೂರಿಗೆ 500 ಕೋಟಿ ಮೀಸಲು

  ಶೀಘ್ರದಲ್ಲೇ ಕಳಸಾ ಬಂಡೂರಿ ಕಾಮಗಾರಿ ಆರಂಭ

  ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ

  ಕರ್ನಾಟಕ ಬಜೆಟ್ 2020: ರಾಜ್ಯ ಬಹು ನಿರೀಕ್ಷಿತ ಬಜೆಟ್ ಪತ್ರವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಮಂಡಿಸಿದ್ದಾರೆ.  ಆಯವ್ಯಯ ಪತ್ರದಲ್ಲಿ ಯಡಿಯೂರಪ್ಪ ರೈತರ ಸಾಲಮನ್ನಾ ಮಾಡಲಿದ್ದಾರಾ ಅಥವಾ ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಕೈಬಿಡಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೊನೆಗೂ  ನೆರೆ ಸಂತ್ರಸ್ತರ ಪುನಶ್ಚೇತನ, ಬೆಂಬಲ ಬೆಲೆ, ದಿನಬಳಕೆ ವಸ್ತುಗಳ ಮೇಲೆ ಬಿಜೆಪಿ ಸರ್ಕಾರ ಯಾವ ನಿರ್ಣಯ ತಳೆಯಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ. ಈ ಕುರಿತ ಕ್ಷಣ-ಕ್ಷಣದ ಮಾಹಿತಿ ನ್ಯೂಸ್​ 18 ಕನ್ನಡದಲ್ಲಿ....