HOME » NEWS » State » KARNATAKA BUDGET 2020 KARNATAKA CM BS YEDIYURAPPA LIKELY TO PRESENT STATE BUDGET FOR 2020 21 ON MARCH 5 MAK

Karnataka Budget 2020: ಈ ಅವಧಿಯ ಮೊದಲ ಬಜೆಟ್​ ಮಂಡಿಸಲಿರುವ ಬಿಎಸ್​ವೈ; ಮಾರ್ಚ್​.5ಕ್ಕೆ ಆಯವ್ಯಯ, ಗರಿಗೆದರಿದ ನಿರೀಕ್ಷೆಗಳು

Karnataka Budget 2020: ಕಳೆದ ಜೂನ್​ 26 ರಂದು ಬಿ.ಎಸ್.​ ಯಡಿಯೂರಪ್ಪ ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಾತ್ಕಾಲಿಕ ಹಣಕಾಸು ವಿಧೇಯಕಕ್ಕೆ ಸದನ ಅನುಮತಿ ನೀಡಿತ್ತು. ಈ ವರ್ಷ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸುವ ಅನಿವಾರ್ಯತೆ ಇದ್ದು, ಪರಿಣಾಮ ಯಡಿಯೂರಪ್ಪ ಇದಕ್ಕೆ ಅವಶ್ಯಕವಾದ ಎಲ್ಲಾ ಸಿದ್ಧತೆಗಳನ್ನೂ ನಡೆಸುತ್ತಿದ್ದಾರೆ.

news18-kannada
Updated:February 10, 2020, 11:53 AM IST
Karnataka Budget 2020: ಈ ಅವಧಿಯ ಮೊದಲ ಬಜೆಟ್​ ಮಂಡಿಸಲಿರುವ ಬಿಎಸ್​ವೈ; ಮಾರ್ಚ್​.5ಕ್ಕೆ ಆಯವ್ಯಯ, ಗರಿಗೆದರಿದ ನಿರೀಕ್ಷೆಗಳು
ಸಿಎಂ ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಫೆಬ್ರವರಿ 10); ಸಚಿವ ಸಂಪುಟ ವಿಸ್ತರಣೆ ಬೆನ್ನಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಚ್​.5ಕ್ಕೆ ರಾಜ್ಯ ಬಜೆಟ್​ಗೆ ಸಿದ್ಧತೆ ನಡೆಸಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಚಿವರ ಸಭೆ ಕರೆದಿರುವ ಸಿಎಂ ಈ ಸಭೆಯಲ್ಲಿ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಜೂನ್​ 26 ರಂದು ಬಿ.ಎಸ್.​ ಯಡಿಯೂರಪ್ಪ ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ತಾತ್ಕಾಲಿಕ ಹಣಕಾಸು ವಿಧೇಯಕಕ್ಕೆ ಸದನ ಅನುಮತಿ ನೀಡಿತ್ತು. ಈ ವರ್ಷ ಪೂರ್ಣ ಪ್ರಮಾಣದ ಬಜೆಟ್​ ಮಂಡಿಸುವ ಅನಿವಾರ್ಯತೆ ಇದ್ದು, ಪರಿಣಾಮ ಯಡಿಯೂರಪ್ಪ ಇದಕ್ಕೆ ಅವಶ್ಯಕವಾದ ಎಲ್ಲಾ ಸಿದ್ಧತೆಗಳನ್ನೂ ನಡೆಸುತ್ತಿದ್ದಾರೆ.

ಹೀಗಾಗಿ ಬಜೆಟ್ ಕುರಿತು ರೂಪುರೇಷೆಗಳನ್ನು ತೀರ್ಮಾನಿಸುವ ಸಲುವಾಗಿ ಸಿಎಂ ಯಡಿಯೂರಪ್ಪ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಕರೆದಿದ್ದು, ಈ ಸಭೆಯಲ್ಲಿ ವಾಣಿಜ್ಯ, ಸಾರಿಗೆ, ಅಬಕಾರಿ, ಭೂ ಮಾರುಕಟ್ಟೆಯ ಸಂಘ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳ ನಡುವೆ ರಾಜ್ಯ ಸರ್ಕಾರ ಬಜೆಟ್​ಗೆ ಹಣವನ್ನು ಹೇಗೆ ಹೊಂದಿಸಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಸ್ತುತ ರಾಜ್ಯ ತೆರಿಗೆ ಸಂಗ್ರಹದ ಅಂಕಿಅಂಶ

# ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ 76,660 ಕೋಟಿ ವಾಣಿಜ್ಯ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 55,984 ಕೋಟಿ ಸಾಧನೆ ಮಾಡಲಾಗಿದೆ.

# ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಶೇ. 14.2 ರಷ್ಟು ಪ್ರಗತಿ ಸಾಧಿಸಲಾಗಿದೆ. 61,245 ಕೋಟಿ ಹಣ ಸಂಗ್ರಹಿಸಲಾಗಿದೆ.

# 22,950 ಕೋಟಿ ಅಬಕಾರಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿತ್ತು. ಈ ಪೈಕಿ 16,187 ಕೋಟಿ ಹಣ ಸಂಗ್ರಹಿಸಲಾಗಿದೆ. ಅಬಕಾರಿ ಇಲಾಖೆಯಲ್ಲಿನ ತೆರಿಗೆ ಸಂಗ್ರಹದಲ್ಲಿ ಶೇ. 77.23 ರಷ್ಟು ಅಭಿವೃದ್ಧಿ ಸಾಧಿಸಲಾಗಿದೆ.# ಈ ವರ್ಷದಲ್ಲಿ ಸಾರಿಗೆ ಇಲಾಖೆಯಿಂದ ಒಟ್ಟು 7100 ಕೋಟಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದೆ.# ಆರ್ಥಿಕ ಹಿಂಜರಿತದಿಂದ ಕಳೆದ ಆರು ತಿಂಗಳಿನಿಂದ ವಾಹನ ಮಾರಾಟ ಕುಸಿತ ಕಂಡಿದ್ದು 460.20 ಕೋಟಿ ಕೊರತೆಯಾಗಿದೆ. ಇದನ್ನು ಬೇರೆ ಮೂಲಗಳಿಂದ ಸಂಗ್ರಹಿಸಲು ಕ್ರಮ ಜರುಗಿಸಲಾಗಿದೆ.

# ಜಿಎಸ್​ಟಿ ತೆರಿಗೆ ವಂಚನೆ ಬಗ್ಗೆ ಹೆಚ್ಚಿನ ಗಮನ ಕೊಟ್ಟು, ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ತೆರಿಗೆ ವಂಚಕರನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸೂಚಿಸಲಾಗಿದೆ.

# ಚಿಲ್ಲರೆ ಮದ್ಯ ಮಾರಾಟ ಲೈಸನ್ಸ್‍ಗಳು ಹಾಗೂ ಮದ್ಯ ಉತ್ಪಾದನಾ ಘಟಕಗಳ ಲೈಸನ್ಸ್‍ಗಳನ್ನು ಆನ್‍ಲೈನ್ ಮೂಲಕ ನವೀಕರಣ ಮಾಡಲಾಗುತ್ತಿದೆ.

# ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ. ರಾಜಸ್ವ ಸಂಗ್ರಹದ ವಾರ್ಷಿಕ ಗುರಿ.

ಇದನ್ನೂ ಓದಿ : ಸೋತ ಶಾಸಕರಿಂದ ಹೊಸ ಲೆಕ್ಕಾಚಾರ; ಅಧಿಕಾರಕ್ಕಾಗಿ ಭಿನ್ನ ದಾರಿ ಹಿಡಿದ ವಿಶ್ವನಾಥ್, ಎಂಟಿಬಿ ನಾಗರಾಜ್
First published: February 10, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories