Seema.RSeema.R
|
news18-kannada Updated:March 5, 2020, 1:20 PM IST
ಶಾಲಾ ಮಕ್ಕಳಿಗೆ ಸಿಎಂ ಬಂಫರ್ ಕೊಡುಗೆ
ಬೆಂಗಳೂರು (ಮಾ.05): 2020-21ನೇ ಆಯವ್ಯಯ ಮಂಡಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಬಜೆಟ್ನಲ್ಲಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶೇ15ರಷ್ಟು ಹಣ ಮೀಸಲಿಟ್ಟಿರುವುದಾಗಿ ತಿಳಿಸಿದರು.
ಇದೇ ಮೊದಲ ಬಾರಿ ನಮ್ಮ ಸರ್ಕಾರ ಮಕ್ಕಳಿಗಾಗಿ ಬಜೆಟ್ನಲ್ಲಿ ರೂ. 36,340 ಕೋಟಿ ಮೀಸಲಿಟ್ಟಿದ್ದು, ಮಕ್ಕಳ ಅಭಿವೃದ್ದಿಗೆ ಬದ್ಧರಾಗಿರುವುದಾಗಿ ತಿಳಿಸಿದರು. ಬಜೆಟ್ನಲ್ಲಿ ಮಕ್ಕಳಿಗೆ ವಿಶೇಷವಾಗಿ ಯೋಜನೆ ರೂಪಿಸಿರುವ ಅವರು, ತಿಂಗಳ ಎರಡು ಶನಿವಾರವನ್ನು ಸಂಭ್ರಮ ಶನಿವಾರವಾಗಿ ಘೋಷಣೆ ಮಾಡಿದ್ದಾರೆ.
ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುವ ಸಲುವಾಗಿ ಬರುವ ಶೈಕ್ಷಣಿಕ ವರ್ಷದಿಂದ ಬ್ಯಾಗ್ಲೆಸ್ ಡೇ ಜಾರಿಗೆ ತರುವ ಶಿಕ್ಷಣ ಸಚಿವರ ಪ್ರಸ್ತಾಪಕ್ಕೆ ಸಿಎಂ ಅನುಮೋದನೆ ನೀಡಿದ್ದಾರೆ.
ವಾರದ ಆರು ದಿನ ಕೂಡ ಮಕ್ಕಳು ಮಣಭಾರದ ಬ್ಯಾಗ್ಗಳನ್ನು ಮಕ್ಕಳು ಹೊತ್ತು ತರುವುದರಿಂದ ಮಕ್ಕಳಲ್ಲಿ ಕಲಿಕೆಗೆ ನಿರಾಸಕ್ತಿ ಮೂಡುತ್ತಿದೆ. ಈ ಹಿನ್ನೆಲೆ ತಿಂಗಳ ಎರಡು ಶನಿವಾರ ಅವರ ಕಲಿಕೆ ಉತ್ಸಾಹ ಹೆಚ್ಚಿಸಲು ಬ್ಯಾಗ್ ಲೆಸ್ ಡೇ ಜಾರಿಗೆ ತರಲಾಗುವುದು. ಆ ದಿನವನ್ನು ಸಂಭ್ರಮದ ಶನಿವಾರ ಎಂದು ಆಚರಿಸಲಾಗುವುದು ಎಂದು ತಿಳಿಸಿದರು.
ಸಂಭ್ರಮದ ಶನಿವಾರ ಮಕ್ಕಳಿಗೆ ಕೇವಲ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ, ಅವರಿಗೆ ಕಲಿಕೆ ಮೇಲೆ ಆಸಕ್ತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಇದನ್ನು ಓದಿ: Karnataka Budget Highlights: ಮಹದಾಯಿ ಯೋಜನೆಗೆ 500 ಕೋಟಿ ಎತ್ತಿನಹೊಳೆಗೆ 1500 ಕೋಟಿ ಮೀಸಲು
ಇದೇ ವೇಳೆ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶುರುಮಾಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.ಇದೇ ವೇಳೆ ಮಕ್ಕಳ ಕಲಿಕೆಗೆ ಸಹಾಯವಾಗಲು ಶಿಕ್ಷಕರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ದಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು
First published:
March 5, 2020, 1:20 PM IST